ಕೊಕ್ಕಡ: ಕೆಂಪಕೊಡಿ ನಿವಾಸಿಯಾಗಿ ರಘುರಾಮ ಮಡಿವಾಳ ಮನೆಗೆ ಧಾರ್ಮಿಕ ಮುಖಂಡ ಕಿರಣ್ ಚಂದ್ರ ಪುಷ್ಪಗಿರಿ ಭೇಟಿ ನೀಡಿದರು.
ರಘುರಾಮ ಮಡಿವಾಳರು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು, ಅಲ್ಲದೆ ಕಡು ಬಡತನದಲ್ಲಿದ್ದಾರೆ. ಜೀವನಕ್ಕೆ ಆಧಾರವಾಗಿದ್ದ ತನ್ನೆರಡು ಮಕ್ಕಳನ್ನು ಕಳೆದುಕೊಂಡು ಅನಾಥರಾಗಿದ್ದು, ಜೀವನ ನಡೆಸಲು ಸಾದ್ಯವಾಗದ ಪರಿಸ್ಥಿತಿಯಲ್ಲಿದ್ದಾರೆ. ಇವರ ಈ ಸ್ಥಿತಿಯನ್ನು ತಿಳಿದು ರಘುರಾಮ ಮಾಡಿವಾಳರ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು. ಅವರಿಗೆ ಆರ್ಥಿಕ ಸಹಾಯವನ್ನು, ಮತ್ತು ವೀಲ್ ಚೈರ್ ನೀಡಿದರು.
ಈ ಸಂದರ್ಭ ಸ್ಥಳೀಯರಾದ ಜಗದೀಶ ಕೆಂಪಕೊಡಿ (ಕೊಕ್ಕಡ ಗ್ರಾ,ಪಂ ಸದಸ್ಯ ),ಶ್ರೀನಾಥ್ ಬಡಕೈಲ್,ಶಿವಪ್ಪ ಜಾರಿಗೆದಡಿ,ಉಗ್ಗಪ್ಪ ಪೂಜಾರಿ ಕೆಂಪಕೊಡಿ,ಶ್ರೀಧರ ಬಳಕ್ಕ,ಸತೀಶ್ ಕುಡಾಲ,ಲೋಕೇಶ್ ಕೆಂಪಕೋಡಿ,ಪುರುಷೋತ್ತಮ ಕುದ್ಕೋಳಿ,ಇನ್ನಿತರರು ಉಪಸ್ಥಿತರಿದ್ದರು.











