23.5 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಬೆಳ್ತಂಗಡಿಯಲ್ಲಿ ನೂರಾ ಗೋಲ್ಡ್ & ಡೈಮಂಡ್ಸ್ ಉದ್ಘಾಟನೆ

ಬೆಳ್ತಂಗಡಿ: ಶೂನ್ಯದಿಂದ ಆರಂಭವಾಗುವ ನಮ್ಮ ಜೀವನ, ನಡೆ ನುಡಿ, ವ್ಯಾಪಾರ- ವ್ಯವಹಾರ ಇವುಗಳೆಲ್ಲದರ ಸಮಗ್ರ ಏಳಿಗೆಯು ದೇವರ ಮೇಲಿನ ನಮ್ಮ ನಿಷ್ಕಲ್ಮಶ ಪ್ರಾರ್ಥನೆಯ ಫಲದ ಪ್ರತಿಬಿಂಭವಾಗಿದೆ ಎಂದು ಸಮಸ್ತ ಕೇರಳ ಜಂ ಇಯ್ಯತುಲ್ ಉಲಮಾ ಕಾರ್ಯದರ್ಶಿ, ‘ಮ‌ಅದಿನ್ ಅಕಾಡಮಿ’ ಇದರ ಚೇರ್ಮೆನ್ ಬದ್ರುಸ್ಸಾದಾತ್ ಸಯ್ಯಿದ್‌ ಇಬ್ರಾಹಿಮುಲ್ ಖಲೀಲುಲ್ ಬುಖಾರಿ ತಂಙಳ್ ಕಡಲುಂಡಿ ಹೇಳಿದರು.

ಬೆಳ್ತಂಗಡಿ ಮೂರು ಮಾರ್ಗದ ಬಳಿ ಇರುವ ಆಶಾ ಕಿರಣ ಕಮರ್ಷಿಯಲ್ ಕಾಂಪ್ಲೆಕ್ಸ್ ನಲ್ಲಿ ಜೂ. 30 ರಂದು ಉದ್ಘಾಟನೆಗೊಂಡ,
ಬೆಳೆಯುತ್ತಿರುವ ಬೆಳ್ತಂಗಡಿಗೆ ಇನ್ನೊಂದು ಮೆರುಗು ಎಂಬಂತೆ ವಿಶಾಲ ಸ್ವರ್ಣಾಭರಣ ಮಳಿಗೆ ನೂರಾ ಗೋಲ್ಡ್ ಏಂಡ್ ಡೈಮಂಡ್ ಇದನ್ನು ಉದ್ಘಾಟಿಸಿ ಅವರು ಆಶೀರ್ವಚನ ನೀಡುತ್ತಿದ್ದರು.
ರಿಬ್ಬನ್ ಕತ್ತರಿಸುವ ಮೂಲಕ ನೂತನ ಮಳಿಗೆಗೆ ಪ್ರವೇಶಿಸಿ, ಮೌಲಿದ್ ಪಾರಾಯಣ ನಡೆಸಿ ಬಳಿಕ ಅವರು ಶುಭಾಶೀರ್ವಾದ ನೀಡಿದರು.

‘ಅಲ್‌ ಮಾಜಿದ್ ಗ್ರೂಪ್’ ಹಾಗೂ ‘ನೂರಾ ಗೋಲ್ಡ್’ ಸಂಸ್ಥೆಯ ಚೆರ್ಮೆನ್ ಎ.ಕೆ ಉಮರ್ ಮುಸ್ಲಿಯಾರ್ ಅಧ್ಯಕ್ಷತೆ ವಹಿಸಿದ್ದರು.

ದೇಶ ವಿದೇಶಗಳಲ್ಲಿ ವ್ಯವಹಾರ ಕ್ಷೇತ್ರ ಹೊಂದಿರುವ ಸಂಸ್ಥೆಯ ನಿರ್ವಾಹಕರಾದ ಸಿದ್ದೀಕ್ ಅಂಡುಗುಳಿ, ಸ್ವರ್ಣೋದ್ಯಮದಲ್ಲೇ ಎರಡು ದಶಕಗಳ ಅನುಭವ ಹೊಂದಿದ್ದು ಕಾರ್ಯ ನಿರ್ವಾಹಕರಾಗಿರುವ ಮುಸ್ತಫಾ ಕಕ್ಕಿಂಜೆ ಅವರ ಉಪಸ್ಥಿತಿ ಮತ್ತು ಮಾರ್ಗದರ್ಶನದಲ್ಲಿ ಉದ್ಘಾಟನಾ ಕಾರ್ಯಕ್ರಮ ಸಂಪನ್ನಗೊಂಡಿತು.

ಸಯ್ಯಿದ್ ಕಾಜೂರು ತಂಙಳ್, ಸಯ್ಯಿದ್ ಕೆ.ಎಸ್ ತಂಙಳ್ ಪುತ್ತೂರು, ಸಯ್ಯಿದ್ ಮೆಹಬೂಬ್ ತಂಙಳ್ ಎರ್ಮಾಳ, ಅಬೂಬಕ್ಕರ್ ಸಿದ್ದೀಕ್ ಜಲಾಲಿ ಕಕ್ಕಿಂಜೆ, ಅಂತಾರಾಷ್ಟ್ರೀಯ ಖ್ಯಾತಿಯ ವಾಗ್ಮಿ ನೌಫಲ್ ಸಖಾಫಿ ಕಳಸ, ಪ್ರಮುಖರಾದ ಹಮೀದ್ ಫೈಝಿ, ಜಬ್ಬಾರ್ ಮದನಿ, ಶುಕೂರ್ ಮುಸ್ಲಿಯಾರ್ ಕಕ್ಕಿಂಜೆ, ಹಾಫಿಲ್ ಮುಈನುದ್ದೀನ್ ರಝ್ವಿ ಅಲ್ ಅಮ್ಜದಿ ಮದ್ದಡ್ಕ, ಅಶ್ರಫ್ ಚಿಲಿಂಬಿ, ಡಿ.ಡಿ ಗ್ರೂಪ್ಸ್ ನ ಅಬ್ದುಲ್ ರಝಾಕ್ ಕನ್ನಡಿಕಟ್ಟೆ, ಹಿರಿಯ ಪತ್ರಕರ್ತ ಹೆಚ್ ಮುಹಮ್ಮದ್ ವೇಣೂರು, ಕಾಜೂರು ಆಡಳಿತ ಸಮಿತಿ ಅಧ್ಯಕ್ಷ ಕೆ.ಯು ಇಬ್ರಾಹಿಂ, ಪ್ರಧಾನ ಕಾರ್ಯದರ್ಶಿ ಜೆ.ಜೆಚ್ ಅಬೂಬಕ್ಕರ್ ಸಿದ್ದೀಕ್ ಕಾಜೂರು, ಮಾಜಿ ಅಧ್ಯಕ್ಷರಾದ ಕೆ.ಎ ಅಬೂಬಕ್ಕರ್ ಹಾಜಿ ಮತ್ತು ಬಿ.ಎ ಯೂಸುಫ್ ಶರೀಫ್, ಸಲೀಂ ಕಾಜೂರು, ಶರೀಫ್, ಅಬ್ದುಲ್‌ ಅಝೀಝ್ ಝುಹುರಿ ಕಿಲ್ಲೂರು, ಅನ್ಸಾರ್ ತಾಜ್ ಲಾಯಿಲ, ಕಾಸಿಂ ಮಲ್ಲಿಗೆಮನೆ, ಬಿ.ಹೆಚ್ ಅಬೂಬಕ್ಕರ್ ಹಾಜಿ ಕಿಲ್ಲೂರು, ಮುಹಮ್ಮದ್ ಅಲಿಮೂಡಿಗೆರೆ, ಉಸ್ಮಾನ್ ಮೂಡಿಗೆರೆ, ನಝೀರ್ ಸಹಿತ ಸಂಸ್ಥೆಯ ಎಲ್ಲಾ ಸಿಬ್ಬಂದಿಗಳು ಉಪಸ್ಥಿತರಿದ್ದರು.

ನೂರಾ ಗೋಲ್ಡ್ ಏಂಡ್ ಡೈಮಂಡ್ಸ್ ಇದರ ನಿರ್ದೇಶಕ, ಅಂತಾರಾಷ್ಟ್ರೀಯ ಉದ್ಯಮಿ ಸಿದ್ದೀಕ್ ಅಂಡುಗುಳಿ, ಕಾರ್ಯ ನಿರ್ವಾಹಕ ಕೆ.ಎಸ್ ಮುಸ್ತಫಾ ಕಕ್ಕಿಂಜೆ ಉಪಸ್ಥಿತರಿದ್ದು, ಆಹ್ವಾನಿತರನ್ನು ಬರಮಾಡಿಕೊಂಡು ಗೌರವಿಸಿದರು.

“ನಿಮ್ಮ ಸೌಂದರ್ಯದ ರಾಯಭಾರಿ ನೂರಾ ಗೋಲ್ಡ್” ಎಂಬ ಟ್ಯಾಗ್ ಲೈನ್ ನೊಂದಿಗೆ ನೂತನ ಸಂಸ್ಥೆ ತಾಲೂಕಿನ ಆಭರಣ ಪ್ರಿಯರಿಗಾಗಿ ಹೊಸದಾಗಿ ತೆರೆದುಕೊಂಡಿತು.
ಹೊಸ ಸಂಸ್ಥೆಯು ಆಕರ್ಷಕ ವಿನ್ಯಾಸದಲ್ಲಿ ಮೂಡಿಬಂದಿದ್ದು, ವಿಶಾಲವಾದ ಸ್ಥಳಾವಕಾಶ, ಅಷ್ಟೇ ವಿಶಾಲವಾದ ವಾಹನ ಪಾರ್ಕಿಂಗ್ ವ್ಯವಸ್ಥೆ ಒಳಗೊಂಡಿದೆ. ಆಭರಣಗಳ ಹೊಚ್ಚ ಹೊಸ ಶೈಲಿಯ ಡಿಸೈನ್ ಗಳು, 916 ಮತ್ತು ಆಂಟಿಕ್ ಆಭರಣಗಳು, ಡೈಮಂಡ್ ಆಭರಣಗಳು ಇಲ್ಲಿ ದೊರೆಯುತ್ತದೆ. 0 % ವೇಸ್ಟೇಜ್, ಮೇಕಿಂಗ್ ಚಾರ್ಜ್ ಮೇಲೆ 50% ಡಿಸ್ಕೌಂಟ್, 10 ಸಾವಿರ ರೂ ಡೈಮಂಡ್ ಆಭರಣಗಳ ಪ್ರತೀ ಕ್ಯಾರೆಟ್ ಮೇಲೆ ಉದ್ಘಾಟನಾ ದಿನ ಆಫರ್ ಘೋಷಿಸಲಾಗಿತ್ತು. ಉದ್ಘಾಟನೆಯ ದಿನ ಭೇಟಿ ನೀಡುವ ಎಲ್ಲರಿಗೂ ಉಚಿತ ಕೂಪನ್ ಇದ್ದು ಅದರಲ್ಲಿ ಅದೃಷ್ಟವಂತರಾಗಿ ಅಬೂಬಕ್ಕರ್ ಬೆಳ್ತಂಗಡಿ ಅವರು ಡೈಮಂಡ್ ರಿಂಗ್ ಬಹುಮಾನ ಗೆದ್ದುಕೊಂಡರು.

ಉದ್ಘಾಟನೆಯ ಪ್ರಯುಕ್ತ ಪ್ರತೀ‌ ಖರೀದಿಗೆ ಗಿಫ್ಟ್ ಕೂಪನ್ ಇದ್ದು ಅದೃಷ್ಟಶಾಲಿಗೆ ಸ್ಕೂಟಿ ಬಹುಮಾನ, ಮೊಬೈಲ್ ಸ್ಟೇಟಸ್ ಸ್ಪರ್ಧಿಗಳಿಗೆ ಸ್ಮಾರ್ಟ್ ಪೋನ್ ಗೆಲ್ಲುವ ಅವಕಾಶ ಕಲ್ಪಿಸಲಾಗಿತ್ತು.
ಹೆಚ್ಚಿನ ಮಾಹಿತಿಗೆ 9449988916 ಸಂಪರ್ಕಿಸಬಹುದು ಎಂದು ಮಾಲಕರು ತಿಳಿಸಿದ್ದಾರೆ

Related posts

ಉಜಿರೆ ಡಿ. ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಲ್ಲಿ ಗಣರಾಜ್ಯೋತ್ಸವ ಆಚರಣೆ

Suddi Udaya

ಬೆಳಾಲು ಪ್ರೌಢಶಾಲೆಯಲ್ಲಿ ವಿದ್ಯಾರ್ಥಿ ಸರಕಾರ ಹಾಗೂ ವಿವಿಧ ಸಂಘಗಳ ಉದ್ಘಾಟನೆ

Suddi Udaya

ತೋಟತ್ತಾಡಿ ಚರ್ಚ್ ನಲ್ಲಿ ಯುವಕರಿಂದ ತಯಾರಿಸಲ್ಪಟ್ಟ ೨೨ ಅಡಿ ಎತ್ತರದ ಕ್ರಿಸ್‌ಮಸ್ ನಕ್ಷತ್ರ

Suddi Udaya

ಮುಖ್ಯಮಂತ್ರಿ ಸಿದ್ದರಾಮಯ್ಯರವರ ಉಪ ಕಾರ್ಯದರ್ಶಿಯಾಗಿ ಮಡಂತ್ಯಾರಿನ ಅರುಣ್ ಪುರ್ಟಾಡೊ ನೇಮಕ

Suddi Udaya

ಎಸ್.ಡಿ.ಎಂ ಬಿಎನ್‌ವೈಎಸ್ ಕಾಲೇಜು : ರಾಜ್ಯ ಮಟ್ಟದ ತ್ರೋಬಾಲ್ ಪಂದ್ಯಾಟಕ್ಕೆ ಚಾಲನೆ

Suddi Udaya

ವಲಯ ಮಟ್ಟದ ಪ್ರತಿಭಾ ಕಾರಂಜಿ: ಇಂದಬೆಟ್ಟು ಸ.ಹಿ.ಪ್ರಾ. ಶಾಲೆಗೆ ಹಲವಾರು ಪ್ರಶಸ್ತಿ

Suddi Udaya
error: Content is protected !!