ನೆಲ್ಯಾಡಿ: ಕ್ಯಾಂಪ್ಕೋ ಸಂಸ್ಥೆಯ ‘ಸಾಂತ್ವನ’ ಎಂಬ ಯೋಜನೆಯಡಿಯಲ್ಲಿ ಆರ್ಥಿಕ ನೆರವಿನ ಚೆಕ್ ಹಸ್ತಾಂತರ ಕಾರ್ಯಕ್ರಮವು ಜು.01 ರಂದು ನೆಲ್ಯಾಡಿ ಶಾಖೆಯಲ್ಲಿ ನಡೆಯಿತು.
ಕ್ಯಾಂಪ್ಕೋ ಸಂಸ್ಥೆ ನೆಲ್ಯಾಡಿ ಶಾಖೆಯ ಸಕ್ರಿಯ ಸದಸ್ಯರಾದ ಮಹೇಶ ಕೆ ಇವರ ಮೂತ್ರಪಿಂಡ ಕಸಿ( Kidney transplant) ಶಸ್ತ್ರಕ್ರಿಯೆಗೆ ಸಹಾಯಧನದ ಮೊತ್ತ ರೂ. 3,00,000/- (ರೂಪಾಯಿ ಮೂರು ಲಕ್ಷ ) ದ ಚೆಕ್ಕನ್ನು ಕ್ಯಾಂಪ್ಕೋ ಸಂಸ್ಥೆಯ ಗೌರವಾನ್ವಿತ ನಿರ್ದೇಶಕ ಕೃಷ್ಣಪ್ರಸಾದ್ ಮಡ್ತಿಲರವರು ಮಹೇಶ ಕೆ ಯವರಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಪ್ರಾದೇಶಿಕ ವ್ಯವಸ್ಥಾಪಕ ಪ್ರಕಾಶ್ ಶೆಟ್ಟಿ, ನೆಲ್ಯಾಡಿ ಶಾಖೆಯ ಪ್ರಬಂಧಕ ಪ್ರಥಮ್ ಕುಮಾರ್ ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.











