22.9 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಕಲ್ಮಂಜ ಸರಕಾರಿ ಪ್ರೌಢ ಶಾಲೆಯಲ್ಲಿ ಯಕ್ಷಗಾನ ನಾಟ್ಯ ತರಬೇತಿ ಉದ್ಘಾಟನೆ

ಕಲ್ಮಂಜ: ಯಕ್ಷದ್ರುವ ಪಟ್ಲ ಫೌಂಡೇಶನ್ ಮಂಗಳೂರು ಇದರ ವತಿಯಿಂದ ಸರಕಾರಿ ಪ್ರೌಢ ಶಾಲೆ ಕಲ್ಮಂಜ ಇಲ್ಲಿ ಎರಡನೇ ವರ್ಷದ ಯಕ್ಷಗಾನ ನಾಟ್ಯ ತರಬೇತಿ ತರಗತಿಯ ಉದ್ಘಾಟನಾ ಕಾರ್ಯಕ್ರಮ ಜೂ.30 ರಂದು ಜರಗಿತು.

ಉಜಿರೆಯ ಲಕ್ಷ್ಮಿ ಗ್ರೂಪ್ಸ್ ಇದರ ಮಾಲಕರು ಬದುಕು ಕಟ್ಟುವ ಬನ್ನಿ ತಂಡದ ಸಂಚಾಲಕರು ಪಟ್ಲ ಫೌಂಡೇಶನ್ ಟ್ರಸ್ಟಿನ ನಿರ್ದೇಶಕರು ಮೋಹನ್ ಕುಮಾರ್ ಕೆ ಭಾಗವಹಿಸಿ ದೀಪ ಪ್ರಜ್ವಲನೆ ಗೊಳಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಯಕ್ಷದ್ರುವ ಪಟ್ಲ ಫೌಂಡೇಶನ್ ರೂವಾರಿ ಪಟ್ಲ ಸತೀಶ್ ಶೆಟ್ಟಿ ಅವರು ಯಕ್ಷಗಾನ ಕ್ಷೇತ್ರಕ್ಕೆ ಸಲ್ಲಿಸುತ್ತಿರುವ ಸೇವೆ ಯಕ್ಷಗಾನವನ್ನು ರಾಜ್ಯ ವ್ಯಾಪಿ ರಾಷ್ಟ್ರ ವ್ಯಾಪಿ ವಿದೇಶಗಳಲ್ಲಿಯೂ ತನ್ನ ಯಕ್ಷಗಾನವನ್ನು ಪರಿಚಯಿಸಿದ್ದ ಕೀರ್ತಿ ಸತೀಶ್ ಶೆಟ್ಟಿಯವರಿಗೆ ಸಲ್ಲಬೇಕು ಅಲ್ಲದೆ ಮುಖ್ಯವಾಗಿ ಸರಕಾರಿ ಶಾಲೆಗಳ ಮಕ್ಕಳು ಯಕ್ಷಗಾನವನ್ನು ಕಲಿಯಬೇಕು ಆ ಮೂಲಕ ಮಕ್ಕಳಲ್ಲಿ ಸಂಸ್ಕೃತಿ ಮತ್ತು ಸಂಸ್ಕಾರದ ಜಾಗೃತಿ ಮೂಡಬೇಕು ಎಂದು ಕರೆ ನೀಡಿದರು.

ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಯಕ್ಷದ್ರುವ ಪಟ್ಲ ಫೌಂಡೇಶನ್ ಬೆಳ್ತಂಗಡಿ ಘಟಕದ ಅಧ್ಯಕ್ಷ ಸುರೇಶ್ ಶೆಟ್ಟಿ ಇವರು ಯಕ್ಷ ಧ್ರುವ ಪಟ್ಲ ಫೌಂಡೇಶನ್ ಸಮಾಜಮುಖಿ ಕಾರ್ಯಕ್ರಮಗಳು ಯಕ್ಷಗಾನದ ಕಲಾವಿದರಿಗೆ ಸಮಾಜ ನೀಡುತ್ತಿರುವ ಗೌರವ ಯಕ್ಷಗಾನ ಕಲಾವಿದರಿಗೆ ಪಟ್ಲ ಫೌಂಡೇಶನ್ ನೀಡುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವರಿ ಸಮಿತಿಯ ಕಾರ್ಯಾಧ್ಯಕ್ಷ ಮಂಜುನಾಥ ಶೆಟ್ಟಿ ನಿಡಿಗಲ್ ಅವರು ಯಕ್ಷದ್ರುವ ಪಟ್ಲ ಫೌಂಡೇಶನ್ ಇವರ ಸಮಾಜಮುಖಿ ಸೇವೆಗಾಗಿ ಮತ್ತು ಶಾಲೆಯಲ್ಲಿ ಯಕ್ಷಗಾನ ತರಬೇತಿ ಅವಕಾಶ ಮಾಡಿಕೊಟ್ಟ ಪಟ್ಲ ಫೌಂಡೇಶನ್ ಘಟಕದ ಪಟ್ಲ ಸತೀಶ್ ಶೆಟ್ಟಿ, ಪಟ್ಲ ಫೌಂಡೇಶನ್ ಗೌರವಾಧ್ಯಕ್ಷ ಶಶಿಧರ ಶೆಟ್ಟಿ ಬರೋಡ ಮತ್ತು ಪಟ್ಲ ಫೌಂಡೇಶನ್ ಇದರ ಕೇಂದ್ರೀಯ ಸಮಿತಿ ವಾಸುದೇವ ಐತಾಳ ಮತ್ತು ತಾಲೂಕು ಸಮಿತಿಯ ಅಧ್ಯಕ್ಷರು ಮತ್ತು ಸರ್ವ ಸದಸ್ಯರಿಗೆ ಗೌರವ ಕೃತಜ್ಞತೆಯನ್ನು ಸಲ್ಲಿಸಿದರು.

ಈ ಸಂದರ್ಭದಲ್ಲಿ ಪಟ್ಲ ಯಕ್ಷ ಶಿಕ್ಷಣದ ಗುರುಗಳಾದ ಧರ್ಮಸ್ಥಳ ಮೇಳದ ಹಿರಿಯ ಕಲಾವಿದ ಈಶ್ವರ ಪ್ರಸಾದ್ ಇವರಿಗೆ ಯಕ್ಷ ಶಿಕ್ಷಣದ ಮಕ್ಕಳಿಂದ ಪಲ ತಾಂಬುಳಾದಿಗಳನ್ನು ನೀಡಿ ಗುರು ನಮನ ಸಲ್ಲಿಸಲಾಯಿತು.

ವೇದಿಕೆಯಲ್ಲಿ ಬೆಳ್ತಂಗಡಿ ಘಟಕದ ಉಪಾಧ್ಯಕ್ಷ ವೆಂಕಟರಮಣ ಶೆಟ್ಟಿ ನಿಡಿಗಲ್ ಮತ್ತು ಸಲಹೆಗಾರರಾದ ದೇವರಾಜ್ ಉಜಿರೆ ಉಪಸ್ಥಿತರಿದ್ದರು. ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀಮತಿ ವಸಂತಿ ಎಂ ಇವರ ನಿರೂಪಣೆಯೊಂದಿಗೆ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಮತಿ ಪೂರ್ಣಿಮಾ ಸ್ವಾಗತಿಸಿದರು ಶಾಲಾ ಶಿಕ್ಷಕರಾದ ಶ್ರೀಮತಿ ಸವಿತಾ ವಂದಿಸಿದರು.

Related posts

ಶ್ರೀ ರಾಮ ಮಂದಿರದ ಹನುಮ ರಥಕ್ಕೆ ಸ್ವಾಗತ

Suddi Udaya

ಗುರುವಾಯನಕೆರೆ: ವಿದ್ಯಾರ್ಥಿಯ ಅಗತ್ಯ ದಾಖಲೆ ಪತ್ರವಿದ್ದ ಬ್ಯಾಗ್ ಕಳೆದು ಹೋಗಿದ್ದು ಸಿಕ್ಕಿದವರು ಸಹಕರಿಸುವಂತೆ ಮನವಿ

Suddi Udaya

ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಲ್ಯಾಬ್ ಪರೀಕ್ಷೆಯಲ್ಲಿ ನಿಖರ ವರದಿ ನೀಡಬಲ್ಲ ಅತ್ಯಾಧುನಿಕ ಸಿಎಲ್‌ಐಎ ಮೆಶಿನ್ ಅಳವಡಿಕೆ

Suddi Udaya

ಬೆಳ್ತಂಗಡಿ ಅಪ್ಸರಾ ಫ್ಯಾಶನ್ ಸೆಂಟರ್ ಹಾಗೂ ಮಿಷ್‌ಮಷ್ ಫ್ಯಾನ್ಸಿ & ಗಿಫ್ಟ್ ಸೆಂಟರಿನಲ್ಲಿ ಹೊಸ ವರ್ಷ ಆಚರಣೆ

Suddi Udaya

ಕನ್ಯಾಡಿಯಲ್ಲಿ ಜನಾರ್ದನ ರೆಸಿಡೆನ್ಸಿ ಉದ್ಘಾಟನೆ

Suddi Udaya

ಸೋಣಂದೂರು: ಕೊಲ್ಪದಬೈಲು ಸಮೀಪ ವಿದ್ಯುತ್ ಕಂಬದ ಮೇಲೆ ಮರ ಬಿದ್ದು ಹಾನಿ: ಮೆಸ್ಕಾಂ ಇಲಾಖೆಯಿಂದ ತೆರವು ಕಾರ್ಯ

Suddi Udaya
error: Content is protected !!