32.9 C
ಪುತ್ತೂರು, ಬೆಳ್ತಂಗಡಿ
March 6, 2026
ಅಪಘಾತಗ್ರಾಮಾಂತರ ಸುದ್ದಿಚಿತ್ರ ವರದಿನಿಧನಪ್ರಮುಖ ಸುದ್ದಿಬೆಳ್ತಂಗಡಿವರದಿ

ಬಜಿರೆ ಗ್ರಾಮದ ಪೆರ್ಮನು ಬೆಳ್ಳಿಬೆಟ್ಟು ಎಂಬಲ್ಲಿ ನಡೆದ ದುರ್ಘಟನೆ ವಿದ್ಯುತ್ ತಂತಿ ಸ್ಪರ್ಶಿಸಿ ವೀರಪ್ಪ ಎಂಬವರು ಮೃತ್ಯು

ಬೆಳ್ತಂಗಡಿ: ಹಳ್ಳಕ್ಕೆ ಇಳಿದ ವ್ಯಕ್ತಿಯೊಬ್ಬರು ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ಸಾವನ್ನಪ್ಪಿದ ಘಟನೆ ವೇಣೂರಿನ ಬಜಿರೆ ಗ್ರಾಮದ ಪೆರ್ಮನು ಬೆಳ್ಳಿಬೆಟ್ಟು ಎಂಬಲ್ಲಿ ಗುರುವಾರ ನಡೆದಿದೆ.

ಸ್ಥಳೀಯ ವೀರಪ್ಪ (74) ಮೃತಪಟ್ಟ ವ್ಯಕ್ತಿಯಾಗಿದ್ದಾರೆ. ವಿದ್ಯುತ್ ಪರಿವರ್ತಕದ ಸಮೀಪ ತೋಟದಲ್ಲಿ ಹಾದು ಹೋಗಿದ್ದ ಎಲ್ ಟಿ ಲೈನ್ ಮೇಲೆ ತೆಂಗಿನ ಗರಿ ಬಿದ್ದು, ತಂತಿಯು ತುoಡಾಗಿ ನೀರು ಹರಿಯುವ ಹಳ್ಳಕ್ಕೆ ಬಿದ್ದಿತ್ತು. ಆ ತಂತಿಯಲ್ಲಿ ವಿದ್ಯುತ್ ಸರಬರಾಜಾಗುವ ಫ್ಯೂಸ್ ಹೋಗಿರುವುದು ಕಂಡು ಬಂದಿದ್ದು, ಕಾಲುದಾರಿಯಲ್ಲಿ ನಡೆದುಕೊಂಡು ಹೋಗುತಿದ್ದ ವೀರಪ್ಪ, ಹಳ್ಳದ ನೀರಿನಲ್ಲಿ ತೇಲಿ ಹೋಗುತ್ತಿದ್ದ ಅಡಿಕೆ, ತೆoಗಿನಕಾಯಿಯನ್ನು ಹೆಕ್ಕಲು ಇಳಿದಿದ್ದು,ಅಲ್ಲಿಯೇ ಬಿದ್ದಿದ್ದ ವಿದ್ಯುತ್ ತಂತಿಯನ್ನು ಬಳ್ಳಿ ಎಂದು ಬರಿ ಕೈಯಲ್ಲಿ ಹಿಡಿದು ಎಳೆದಾಗ, ವಿದ್ಯುತ್ ತಂತಿಯು ಕಂಬದಲ್ಲಿರುವ ಇನ್ನೊಂದು ತಂತಿಗೆ ತಾಗಿ ವಿದ್ಯುತ್ ಶಾಕ್ ಗೆ ಒಳಗಾಗಿ ಮೃತ ಪಟ್ಟಿರುವ ಸಾಧ್ಯತೆ ಇದೆ ಎಂದು ಮೆಸ್ಕಾಂ ಇಲಾಖೆ ತಿಳಿಸಿದೆ.

ವೇಣೂರು ಪೊಲೀಸರು ಹಾಗೂ ಮೆಸ್ಕಾಂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Related posts

ಸಾಯಿ ರಾಮ್ ಫ್ರೆಂಡ್ಸ್ ಗುರುವಾಯನಕೆರೆ ವತಿಯಿಂದ ಸುಹಾಸ್ ಶೆಟ್ಟಿಗೆ ನುಡಿ ನಮನ

Suddi Udaya

ಕಾಜೂರು: ರೂ. 1.5 ಕೋಟಿ ವೆಚ್ಚದ “ಮುಸಾಫಿರ್ ಖಾನಾ (ಯಾತ್ರಿ ನಿವಾಸ)” ಕಟ್ಟಡ ಉದ್ಘಾಟನೆ:

Suddi Udaya

ಧರ್ಮಸ್ಥಳ ಪ್ರಕರಣ‌ ಎಸ್.ಐ.ಟಿ ತನಿಖೆಗೆ ತಡೆ ಕೋರಿ ಹೈಕೋರ್ಟ್ ಗೆ ಮತ್ತೊಂದು ಅರ್ಜಿ, ಮನವಿ ತಿರಸ್ಕಾರ

Suddi Udaya

ಪುಂಜಾಲಕಟ್ಟೆ-ಪುರಿಯ-ಕುಕ್ಕೇಡಿ ಸಂಪರ್ಕ ರಸ್ತೆ ದುರಸ್ತಿಗೆ ಆಗ್ರಹ

Suddi Udaya

ಲಾಯಿಲ: ಸ್ವ ಉದ್ಯೋಗ ಆಧಾರಿತ ತರಬೇತಿಯ ಸಮಾರೋಪ ಕಾರ್ಯಕ್ರಮ

Suddi Udaya

ಕಕ್ಕಿಂಜೆ “ಅರ್ಶ್ ಎಜ್ಯುಕೇಶನ್ ಅಕಾಡೆಮಿ”ಯ ಪ್ರವೇಶಾತಿ ಆರಂಭ

Suddi Udaya
error: Content is protected !!