37.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ನೆರಿಯ ಸಂತ ತೋಮಸ್ ಅನುದಾನಿತ ಪ್ರೌಢಶಾಲೆಯ ಕಚೇರಿ ಸಹಾಯಕ ಧರ್ಣಪ್ಪ ಪೂಜಾರಿ ಸೇವಾ ನಿವೃತ್ತಿ: ಬಿಳ್ಕೋಡುಗೆ ಸಮಾರಂಭ

ನೆರಿಯ : ಇಲ್ಲಿಯ ಸಂತ ತೋಮಸ್ ಅನುದಾನಿತ ಪ್ರೌಢಶಾಲೆಯಲ್ಲಿ ಕಳೆದ 43 ವರ್ಷಗಳಿಂದ ಕಚೇರಿ ಸಹಾಯಕರಾಗಿ ಕರ್ತವ್ಯ ನಿರ್ವಹಿಸಿ ಸೇವಾ ನಿವೃತ್ತಿಯನ್ನು ಹೊಂದಿದ ಧರ್ಣಪ್ಪ ಪೂಜಾರಿರವರ ಬಿಳ್ಕೋಡುಗೆ ಸಮಾರಂಭವು ಬೆಳ್ತಂಗಡಿ ಧರ್ಮ ಪ್ರಾಂತ್ಯದ ಪರಮಪೂಜ್ಯ ಲಾರೆನ್ಸ್ ಎಂ ಟಿ ಅವರ ಅಧ್ಯಕ್ಷತೆಯಲ್ಲಿ ಜರಗಿತು.

ಸೇವಾ ನಿವೃತ್ತಿಯನ್ನು ಹೊಂದಿದ ಧರ್ಣಪ್ಪ ಪೂಜಾರಿ ಮತ್ತು ಅವರ ಪತ್ನಿ ಶ್ರೀಮತಿ ಕುಶಲ ಇವರನ್ನು ಗೌರವಿಸಿ 43 ವರ್ಷಗಳ ಪ್ರಾಮಾಣಿಕ ಸೇವೆಯನ್ನು ಸಲ್ಲಿಸಿದ ಧರ್ಣಪ್ಪ ಪೂಜಾರಿಯವರ ಮುಂದಿನ ಜೀವನವು ಸುಖ ಸಂತೋಷದಿಂದ ಕೂಡಿರಲಿ ಎಂದು ಶುಭ ಹಾರೈಸಿದರು.

ಈ ಸಮಾರಂಭದಲ್ಲಿ ಪ್ರೌಢಶಾಲೆ ಸಂಚಾಲಕರಾದ ರೆ. ಫಾ. ಜೋಸೆಫ್, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ನಜೀರ್, ಮುಖ್ಯೋಪಾಧ್ಯಾಯನಿ ತ್ರೇಸ್ಯಾ ಮತ್ತು ವಿದ್ಯಾರ್ಥಿಗಳು, ಕಛೇರಿ ಸಿಬ್ಬಂದಿಗಳು ಉಪಸ್ಥಿತರಿದ್ದರು. ಚಿತ್ರಕಲಾ ಶಿಕ್ಷಕ ತೋಮಸ್ ಪಿ ಎ ಕಾರ್ಯಕ್ರಮ ನಿರ್ವಹಿಸಿ, ರೆ. ಫಾ. ಸಬ್ಯಾಸ್ಟಿನ್ ವಂದಿಸಿದರು.

Related posts

ಬೆಳ್ತಂಗಡಿ ಲೋಬೊ ಟಿವಿಎಸ್ ಮೋಟಾರ್ಸ್ ಮಳಿಗೆಯಲ್ಲಿ ಆಯುಧ ಪೂಜೆ

Suddi Udaya

ನಾವೂರು ಗ್ರಾ.ಪಂ. ನಲ್ಲಿ ಆರೋಗ್ಯ ಕಾರ್ಯಪಡೆಯ ಸದಸ್ಯರಿಗೆ ತರಬೇತಿ ಕಾರ್ಯಕ್ರಮ ಮತ್ತು ಸ್ಚಚ್ಚತಾ ಹೀ ಸೇವಾ ಆಂದೋಲನ ಕಾರ್ಯಕ್ರಮ

Suddi Udaya

ನ.29: ಶಾಸಕ ಹರೀಶ್ ಪೂಂಜರ ನೇತೃತ್ವದಲ್ಲಿ ನೆರಿಯ, ಪುದುವೆಟ್ಟು, ಮುಂಡಾಜೆ, ಕಲ್ಮಂಜದಲ್ಲಿ ಜನಸ್ಪಂದನಾ ಸಭೆ

Suddi Udaya

ವಲಯ ಮಟ್ಟದ ಖೋ ಖೋ ಪಂದ್ಯಾಟ: ಶಿರ್ಲಾಲು ಸ.ಉ.ಹಿ.ಪ್ರಾ. ಶಾಲೆಯ ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆ ಆಯ್ಕೆ

Suddi Udaya

ಇಂದಬೆಟ್ಟು ಗ್ರಾಮ ಪಂಚಾಯತ್ ನಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆ

Suddi Udaya

ರೈತ ವಿರೋಧಿ ಕಾಂಗ್ರೆಸ್ ಸರಕಾರದ ನಿಲುವು ವಿರೋಧಿಸಿ ರೈತ ಮೋರ್ಚಾರವರಿಂದ ತಹಶೀಲ್ದಾರರ ಮುಖಾಂತರ ಸಿ.ಎಂ ಸಿದ್ದರಾಮಯ್ಯರಿಗೆ ಮನವಿ

Suddi Udaya
error: Content is protected !!