September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿಪೊಲೀಸ್ಪ್ರಮುಖ ಸುದ್ದಿಬೆಳ್ತಂಗಡಿವರದಿ

ಅಕ್ರಮ ಗೋಮಾಂಸ ಮಾರಾಟ ಮಾಡುತ್ತಿದ್ದ ಅಂಗಡಿಗೆ ಬೆಳ್ತಂಗಡಿ ಪೊಲೀಸರ ದಾಳಿ: ಇಬ್ಬರು ಆರೋಪಿಗಳು ಪೊಲೀಸರ ವಶ

ಮಿತ್ತಬಾಗಿಲು ಗ್ರಾಮದ ಕಾಜೂರು ಎಂಬಲ್ಲಿ ಯಾವುದೇ ಪರವಾನಿಗೆ ಹೊಂದದೇ ಅಕ್ರಮವಾಗಿ ಜಾನುವಾರಿನ ಮಾಂಸವನ್ನು, ಮಾರಾಟ ಮಾಡುವ ಉದ್ದೇಶದಿಂದ ಅಂಗಡಿಯೊಳಗೆ ಶೇಖರಿಸಿಟ್ಟಿರುವ ಬಗ್ಗೆ ಮಾಹಿತಿ ದೊರೆತ ಮೇರೆಗೆ ಬೆಳ್ತಂಗಡಿ ಪೊಲೀಸರು ದಾಳಿ ಮಾಡಿ ಆರೋಪಿಗಳನ್ನು ಬಂಧಿಸಿದ ಘಟನೆ ಜು. 2ರಂದು ನಡೆದಿದೆ.

ಘಟನೆ ವಿವರ: ಮಿತ್ತಬಾಗಿಲು ಗ್ರಾಮದ ಕಾಜೂರು ಎಂಬಲ್ಲಿ, ಆರೋಪಿತನಾದ ಮಲವಂತಿಗೆ ನಿವಾಸಿ ಅಬ್ದುಲ್‌ ರಜಾಕ್‌ (28), ಎಂಬಾತನು ಬೆಳ್ತಂಗಡಿ ಎಂಬವರಿಗೆ ಸಂಬಂಧಪಟ್ಟ ಅಂಗಡಿಯಲ್ಲಿ, ಯಾವುದೇ ಪರವಾನಿಗೆ ಹೊಂದದೇ ಅಕ್ರಮವಾಗಿ ಜಾನುವಾರಿನ ಮಾಂಸವನ್ನು, ಮಾರಾಟ ಮಾಡುವ ಉದ್ದೇಶದಿಂದ ಅಂಗಡಿಯೊಳಗೆ ಶೇಖರಿಸಿಟ್ಟಿರುವ ಬಗ್ಗೆ ಮಾಹಿತಿ ದೊರೆತ ಮೇರೆಗೆ, ಯಲ್ಲಪ್ಪ ಹೆಚ್‌ ಮಾದರ, ಪೊಲೀಸು ಉಪ-ನಿರೀಕ್ಷಕರು ಬೆಳ್ತಂಗಡಿ ಪೊಲೀಸ್ ಠಾಣೆರವರು ಸಿಬ್ಬಂದಿಗಳೊಂದಿಗೆ ತೆರಳಿ ಪರಿಶೀಲಿಸಿದಾಗ, ಒಟ್ಟು 47 ಕೆಜಿ ದನ ಮಾಂಸವನ್ನು ಮಾರಾಟ ಮಾಡುವ ಉದ್ದೇಶದಿಂದ ಅಂಗಡಿಯೊಳಗೆ ಪ್ರಿಡ್ಜ್‌ ನೊಳಗೆ ಇರಿಸಿರುವುದು ಕಂಡುಬಂದಿರುತ್ತದೆ. ಸದ್ರಿ ಸೊತ್ತುಗಳನ್ನು ಮುಂದಿನ ಕಾನೂನುಕ್ರಮಕ್ಕಾಗಿ ಸ್ವಾಧೀನಪಡಿಸಿ, ಆರೋಪಿತರಾದ ಅಬ್ದುಲ್‌ ರಜಾಕ್‌ ಹಾಗೂ ಅಂಗಡಿಯಲ್ಲಿದ್ದ ಮತ್ತೋರ್ವ ಆರೋಪಿತ ಅಬ್ದುಲ್‌ ರವೂಪ್‌ (20) ಎಂಬವರ ವಿರುದ್ಧ ಜು.02 ರಂದು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅಕ್ರ: 51/2025, ಕಲಂ: 4, 12 ಕರ್ನಾಟಕ ಗೋವಧೆ ಪ್ರತಿಬಂದಕ ಮತ್ತು ಜಾನುವಾರು ಸಂರಕ್ಷಣಾ ಅದಿನಿಯಮ 2020 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

ವಧೆ ಮಾಡಲಾದ ಜಾನುವಾರಿನ ಬಗ್ಗೆ ವಿಚಾರಿಸಲಾಗಿ, ಸಹೋದರರಾದ ಆರೋಪಿಗಳು ಅವರ ಮನೆಯಲ್ಲಿ ಸಾಕಿದ್ದ ಜಾನುವಾರನ್ನು ವಧೆ ಮಾಡಿ, ಮಾಂಸ ಮಾರಾಟಕ್ಕೆ ಯತ್ನಿಸಿರುವುದು ತನಿಖೆಯಲ್ಲಿ ತಿಳಿದುಬಂದಿರುತ್ತದೆ.

Related posts

ಉರುವಾಲು: ಹಲೇಜಿ ನಿವಾಸಿ ಲಲಿತಾ ನಿಧನ

Suddi Udaya

ಬೆಳಾಲು: ಸೊಸೈಟಿ ವಂಚನೆ ಪ್ರಕರಣ ಆರೋಪಿ ಸದಾಶಿವ ಬಂಧನ- ಕೋರ್ಟ್ ಗೆ ಹಾಜರು ಪಡಿಸಿದ ಪೊಲೀಸರು

Suddi Udaya

ಬೊಂಬಾಯ್ ಡ್ ತುಳುನಾಡ್ ಕಾರ್ಯಕ್ರಮದಲ್ಲಿ ಧರ್ಮಸ್ಥಳದ ಕ್ಷಿತಿ ಕೆ. ರೈ ರವರಿಗೆ ತೌಳವ ಸಿರಿ ಪ್ರಶಸ್ತಿ

Suddi Udaya

ಚಾರ್ಮಾಡಿ ಮೃತ್ಯುಂಜಯ ನದಿ ಕಿನಾರೆಯಲ್ಲಿ ದನದ ತ್ಯಾಜ್ಯ ಎಸೆದ ಪ್ರಕರಣ: ಇಬ್ಬರು ಆರೋಪಿಗಳ ಬಂಧನ

Suddi Udaya

ಗೇರುಕಟ್ಟೆ ಮನೆಯೊಂದರ ಮೇಲೆ ಅರಣ್ಯಾಧಿಕಾರಿಗಳ ದಾಳಿ: ಕಾಡು ಪ್ರಾಣಿ ಮಾಂಸ ಸೇರಿದಂತೆ ಪರಿಕರಗಳು ವಶಕ್ಕೆ

Suddi Udaya

ಮುಂಡಾಜೆ ಯುವ ವಾಹಿನಿ ಸಂಚಲನಾ ಸಮಿತಿ ವತಿಯಿಂದ ಪ್ರತಿಭಾ ಪುರಸ್ಕಾರ ಹಾಗೂ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ

Suddi Udaya
error: Content is protected !!