September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಮಡಂತ್ಯಾರು: ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವನಮಹೋತ್ಸವ ಆಚರಣೆ

ಮಡಂತ್ಯಾರು: ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವನಮಹೋತ್ಸವ ಆಚರಣೆಯನ್ನು ಜು. 4 ರಂದು ಸೇಕ್ರೆಡ್ ಹಾರ್ಟ್ ಸಮುದಾಯ ಸಭಾಭವನದಲ್ಲಿ ವಿದ್ಯಾರ್ಥಿಗಳು ಪ್ರಾರ್ಥನಾ ಗೀತೆಯನ್ನು ಹಾಡುವುದರ ಮೂಲಕ ಪ್ರಾರಂಭಿಸಲಾಯಿತು.

ಸೇಕ್ರೆಡ್ ಹಾರ್ಟ್ ಚರ್ಚ್ ಮಡಂತ್ಯಾರಿನ ಸಹಾಯಕ ಧರ್ಮ ಗುರುಗಳು , ಮುಖ್ಯ ಅತಿಥಿಗಳು, ಶಾಲಾ ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದದವರು ಗಿಡವನ್ನು ನೆಟ್ಟು ಅದಕ್ಕೆ ನೀರು ಎರೆಯುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ವಿದ್ಯಾರ್ಥಿನಿಯಾದ ಕು. ಸಾನ್ವಿ ಶೆಣೈ ರವರು ವನಮಹೋತ್ಸವದ ಮಹತ್ವದ ಬಗ್ಗೆ ವಿವರಣೆ ನೀಡಿದರು. ವಿದ್ಯಾರ್ಥಿಗಳು ಹಾಡು, ನೃತ್ಯ, ನಾಟಕದ ಮೂಲಕ ವನಮಹೋತ್ಸವದ ಮಹತ್ವವನ್ನು ಪ್ರದರ್ಶಿಸಿದರು.

ಮುಖ್ಯ ಅತಿಥಿಗಳಾಗಿ ಉಪ ವಲಯ ಅರಣ್ಯಾಧಿಕಾರಿ ಸಂತೋಷ್ ದೇವಾಡಿಗರವರು ಆಗಮಿಸಿ, ಮಕ್ಕಳನ್ನು ಉದ್ದೇಶಿಸಿ ಮಾತನಾಡಿ ವನಮಹೋತ್ಸವ ಎಂದರೆ ಗಿಡ ನೆಡುವುದು ಮಾತ್ರವಲ್ಲ ನಾವು ಪರಿಸರ ಸಂರಕ್ಷಣೆಯ ಜಾಗೃತಿಯನ್ನು ಮೂಡಿಸಬೇಕೆಂದು ಹೇಳಿ, ಮಕ್ಕಳಿಗೆ ವನಮಹೋತ್ಸವದ ಶುಭಾಶಯವನ್ನು ಕೋರಿದರು.

ಕಾರ್ಯಕ್ರಮಕ್ಕೆ ಸೇಕ್ರೆಡ್ ಹಾರ್ಟ್ ಚರ್ಚ್ ಮಡಂತ್ಯಾರಿನ ಸಹಾಯಕ ಧರ್ಮ ಗುರುಗಳಾದ ವಂ|ಸ್ವಾ| ಲ್ಯಾರಿ ಪಿಂಟೋ ಆಗಮಿಸಿ, ಅವರು ಮಕ್ಕಳನ್ನು ಉದ್ದೇಶಿಸಿ ಮಾತನಾಡಿ ಪ್ರಕೃತಿಯನ್ನು ಪ್ರೀತಿಸಿ, ಗಿಡ-ಮರಗಳನ್ನು ಬೆಳೆಸಿ, ಪ್ರಕೃತಿಯನ್ನು ಉಳಿಸಿ, ಎಂದು ಹೇಳಿ ಮಕ್ಕಳಿಗೆ ವನಮಹೋತ್ಸವದ ಶುಭಾಶಯವನ್ನು ಕೋರಿದರು.

ಮುಖ್ಯ ಅತಿಥಿಗಳಿಗೆ, ಎಲ್ಲಾ ಗಣ್ಯರಿಗೆ, ಶಿಕ್ಷಕ ವೃಂದದವರಿಗೆ, ವಿದ್ಯಾರ್ಥಿಗಳಿಗೆ ಗಿಡಗಳನ್ನು ಹಂಚಲಾಯಿತು. ಈ ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯರಾದ ವಂ|ಸ್ವಾ| ದೀಪಕ್ ಲಿಯೊ ಡೇಸ ರವರು, ಅರಣ್ಯ ಆಯುಕ್ತರಾದ ರವಿ ಕುಮಾರ್ ರವರು, ಶಿಕ್ಷಕ- ರಕ್ಷಕ ಸಂಘದ ಸದಸ್ಯರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಫ್ಲಾಯಿಡ್ ಮಿಸ್ಕಿತ್ ರವರು ಕಾರ್ಯಕ್ರಮವನ್ನು ನಿರೂಪಿಸಿ, ಯಶ್ವಿನ್ ಕುಮಾರ್ ಸ್ವಾಗತಿಸಿ, ಅಮೃತ್ ಧನ್ಯವಾದವನ್ನು ಸಮರ್ಪಿಸಿದರು. ಶಾಲಾ ಶಿಕ್ಷಕ- ಶಿಕ್ಷಕೇತರ ವೃಂದದವರು ಸಹಕರಿಸಿದರು.

Related posts

ಧರ್ಮಸ್ಥಳ ಹಾಗೂ ಶಿಶಿಲ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ದಿನೇಶ್ ಎಂ. ಸೇವಾ ನಿವೃತ್ತಿ

Suddi Udaya

ನಿಡ್ಲೆ: ರಸ್ತೆಗೆ ಮರದ ಗೆಲ್ಲು ಬಿದ್ದು ಸಂಚಾರ ಅಸ್ತವ್ಯಸ್ಥ

Suddi Udaya

ಗುರುವಾಯನಕೆರೆ: ಅನಾರೋಗ್ಯದಿಂದ ಬಳಲುತ್ತಿರುವ ಆಟೋ ಚಾಲಕ ರಾಜೇಶ್ ಪೂಜಾರಿಯವರಿಗೆ ಕುವೆಟ್ಟು ಬಿಜೆಪಿ ಶಕ್ತಿ ಕೇಂದ್ರ ಹಾಗೂ ಸಾಯಿರಾಮ್ ಫ್ರೆಂಡ್ಸ್ ಶಕ್ತಿನಗರ ವತಿಯಿಂದ ರೂ. 25 ಸಾವಿರ ವೈದ್ಯಕೀಯ ನೆರವು ಹಸ್ತಾಂತರ

Suddi Udaya

ಬೆಳ್ತಂಗಡಿ: ವಿಶೇಷ ವಿಕಲಚೇತನರ ಗುರುತಿನ ಚೀಟಿ ನವೀಕರಣ ಮತ್ತು ಹೊಸ ಗುರುತಿಸುವಿಕೆಯ ಶಿಬಿರ

Suddi Udaya

ಶ್ರೀ ಧ.ಮಂ ಪ.ಪೂ ಕಾಲೇಜು : ಪಂಚಪ್ರಾಣ ಪ್ರತಿಜ್ಞಾ ಸ್ವೀಕಾರ ಕಾರ್ಯಕ್ರಮ

Suddi Udaya

ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಯಶಸ್ವಿ ಮೊಣಕಾಲು ಮತ್ತು ಸೊಂಟದ ಕೀಲು ಬದಲಿ ಶಸ್ತ್ರಚಿಕಿತ್ಸೆ

Suddi Udaya
error: Content is protected !!