23.5 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ವೇಣೂರು ಎಕ್ಸೆಲ್ ಟೆಕ್ನೋ ಸ್ಕೂಲ್ ನಲ್ಲಿ ವನಮಹೋತ್ಸವ

ವೇಣೂರು: ನಮ್ಮ ಹಿರಿಯರ ಪರಿಸರ ಕಾಳಜಿ ನಮಗಿಂದು ಉಸಿರಾಗಿ ದಕ್ಕಿದೆ. ಇದನ್ನು ವರ್ಧಿಸುವುದಕ್ಕಾಗಿ ಯುವ ಶಿಕ್ಷಣ ವ್ಯವಸ್ಥೆಯಲ್ಲಿ ಪರಿಸರ ಕಾಳಜಿಗೆ ಪ್ರಮುಖ ಆದ್ಯತೆ ನೀಡಬೇಕು ಎಂದು ಎಕ್ಸೆಲ್ ಕ್ಯಾಂಪಸ್ ವ್ಯವಸ್ಥಾಪಕ ಶಾಂತಿ ರಾಜ್ ಜೈನ್ ಹೇಳಿದರು.

ಅವರು, ಜು. 5ರಂದು ಎಕ್ಸೆಲ್ ಟೆಕ್ನೋ ಸ್ಕೂಲ್ ವೇಣೂರು ಇಲ್ಲಿ ನಡೆದ ವನಮಹೋತ್ಸವ ಕಾರ್ಯಕ್ರಮದಲ್ಲಿ ಅಧ್ಯಕ್ಷೀಯ ನೆಲೆಯಲ್ಲಿ ಮಾತನಾಡಿದರು. ಶಾಲಾ ಮುಖ್ಯ ಶಿಕ್ಷಕಿ ಸುಜಾತಾ ಬಿ, ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಹುಟ್ಟು ಹಬ್ಬದ ಸಮಯದಲ್ಲಿ ಒಂದು ಗಿಡ ನೆಟ್ಟು ಪರಿಸರ ಕಾಳಜಿಯನ್ನು ಅರ್ಥ ಪೂರ್ಣವಾಗಿಸಬೇಕೆಂದರು. ಪ್ರಾಸ್ತಾವಿಕ ನುಡಿದ
ಶಿಕ್ಷಕಿ ಕಾವ್ಯಶ್ರೀ 1950ರಲ್ಲಿ ಆಚರಣೆಗೆ ಬಂದ ವನಮಹೋತ್ಸವ, ಜಾಗೃತಿ ಅಭಿಯಾನವಾಗಿ ರೂಪುಗೊಂಡಿದೆ ಎಂದರು.

ಕಾರ್ಯಕ್ರಮದಲ್ಲಿ ಎಕ್ಸೆಲ್ ಸಂಸ್ಥೆಯ ಆಡಳಿತ ಮಂಡಳಿ ನಿರ್ದೇಶಕಿ ಶ್ರೀಮತಿ ಸಹನಾ ಜೈನ್, ಸದಸ್ಯರಾದ ಶ್ರೀಮತಿ ಶ್ರುತಿ ಉಪಸ್ಥಿತರಿದ್ದು, ವಿದ್ಯಾರ್ಥಿಗಳಾದ ಪ್ರಣಮ್ಯಾ, ಸಾನ್ವಿ, ಅನ್ವಿತಾ, ಹರ್ಷಿಕಾ ಪ್ರಾರ್ಥಿಸಿದ ಸಭೆಗೆ ಶಿಕ್ಷಕರಾದ ಅರುಣ್ ಕುಮಾರ್ ನಿರೂಪಿಸಿ , ದಾಮೋದರ್ ಸ್ವಾಗತಿಸಿ, ಶ್ರೀಮತಿ ಅಪರ್ಣಾ ಧನ್ಯವಾದವಿತ್ತರು.

ಶ್ವೇತಾ ಜೈನ್, ಶಾಲಿನಿ, ವಿಂದ್ಯಾ, ಅಕ್ಷತಾ , ಪ್ರಸಾದ್, ಮಮತಾ ಸಹಕರಿಸಿದರು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು.

Related posts

ಪ್ರವೀಣ್ ನೆಟ್ಟಾರ್ ಕೊಲೆ ಪ್ರಕರಣ: ಪಡಂಗಡಿ ನೌಷದ್ ನಿವಾಸದ ಮೇಲೆ ಎನ್.ಐ.ಎ ದಾಳಿ

Suddi Udaya

ಧರ್ಮಸ್ಥಳ ಶ್ರೀ ಮಂ. ಸ್ವಾ. ಅ. ಹಿ. ಪ್ರಾ. ಶಾಲಾ ಅಧ್ಯಾಪಕ ವೃಂದದವರಿಂದ ಡಾ. ಡಿ ಹೆಗ್ಗಡೆಯವರ ಭೇಟಿ: ಅಭಿನಂದನೆ

Suddi Udaya

ಅರಸಿನಮಕ್ಕಿ: ವಾತ್ಸಲ್ಯ ಕಾರ್ಯಕ್ರಮದಡಿಯಲ್ಲಿ ಕಾಳಿ ರವರಿಗೆ ವಾತ್ಸಲ್ಯ ಮನೆ ಹಸ್ತಾಂತರ

Suddi Udaya

ತೋಟತ್ತಾಡಿ ಶ್ರೀ ಗುರು ನಾರಾಯಣಸ್ವಾಮಿ ಸೇವಾ ಸಂಘದ ಯುವ ಬಿಲ್ಲವ ವೇದಿಕೆಯ ನೂತನ ಸಮಿತಿ ರಚನೆ

Suddi Udaya

ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್‌.ಇ) ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ

Suddi Udaya

” ಗೃಹಲಕ್ಷ್ಮಿ” ಯೋಜನೆಯ ನೋಂದಾವಣೆ : ರಜಾ ದಿನದಲ್ಲೂ ಕಾರ್ಯನಿರ್ವಹಿಸಿದ ಕಳಿಯ ಗ್ರಾ.ಪಂ.

Suddi Udaya
error: Content is protected !!