September 6, 2026
ವರದಿ

ಪಾಲೇದು ಶಾಲೆಯಲ್ಲಿ ಪರಿಸರ ದಿನಾಚರಣೆ

ತಣ್ಣೀರುಪಂತ: ಪಾಲೇದು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಪರಿಸರ ದಿನಾಚರಣೆ ಜು.6 ರಂದು ನಡೆಯಿತು.

ಮಡಂತ್ಯಾರು ಮತ್ತು ಮಚ್ಚಿನ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಶೌರ್ಯ ವಿಪತ್ತು ನಿರ್ವಹಣಾ ಘಟಕ, ಜ್ಞಾನ ವಿಕಾಸ ಪಾಲೇದು ಹಾಗೂ ಕುದ್ರಡ್ಕ ಒಕ್ಕೂಟದ ಸಹಭಾಗಿತ್ವದಲ್ಲಿ ಪರಿಸರ ಜಾಗೃತಿ ಕಾರ್ಯಕ್ರಮ ಪಾಲೇದು ಶಾಲೆಯಲ್ಲಿ ನಡೆಯಿತು.

ರಾಷ್ಟ್ರೀಯವಾದಿ, ಭಾರತೀಯ ಜನಸಂಘದ ಸಂಸ್ಥಾಪಕ ಡಾ.ಶ್ಯಾಮಪ್ರಸಾದ್ ಮುಖರ್ಜಿ ಜನ್ಮದಿನ ಸ್ಮರಣೆ ಅಂಗವಾಗಿ ವಿವಿಧ ಬಗೆಯ ಹಣ್ಣಿನ ಕೈ ತೋಟ ರಚನೆ ಹಾಗೂ ಗಿಡಗಳನ್ನು ನೆಟ್ಟು ಪರಿಸರ ಜಾಗೃತಿ ಮೂಡಿಸಲಾಯಿತು. ಕುದ್ರಡ್ಕ ಒಕ್ಕೂಟದ ಅಧ್ಯಕ್ಷ ವಿಜಯ ಮಡಕ್ಕಿಲ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ, ಗ್ರಾ.ಪಂ. ಸದಸ್ಯ ಅನಿಲ್ ಪಾಲೇದು, ಪುತ್ತಿಲ ಗ್ರಾ.ಪಂ.ಸದಸ್ಯ ವಸಂತ ಬೋಲ್ಡೆಲು, ವಲಯ ಮೇಲ್ವಿಚಾರಕ ಕೇಶವ್, ಕೃಷಿ ಅಧಿಕಾರಿ ಕೃಷ್ಣ, ಸೇವಾ ಪ್ರತಿನಿಧಿಗಳಾದ ನಂದಿನಿ, ಪರಮೇಶ್ವರ್ ಹಾಗೂ ಹರಿಣಾಕ್ಷಿ, ಪಾಲೇದು ಜ್ಞಾನ ವಿಕಾಸ ಅಧ್ಯಕ್ಷೆ ಜಯಂತಿ ಪಾಲೇದು, ಕುದ್ರಡ್ಕ ಒಕ್ಕೂಟದ ಕಾರ್ಯದರ್ಶಿ ಗೀತಾ ಉಪಸ್ಥಿತರಿದ್ದರು.

Related posts

ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಜೇಮ್ಸ್ ಪಟ್ಟೇರಿಲ್ ರವರಿಗೆ ವರ್ತಕರ ಸಂಘದಿಂದ ಅಭಿನಂದನೆ

Suddi Udaya

ಬೆಳ್ತಂಗಡಿ: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಸಂಸ್ಥಾಪನಾ ದಿನಾಚರಣೆ ಮತ್ತು ಧ್ವಜ ಚೀಟಿ ಬಿಡುಗಡೆ

Suddi Udaya

ಉಜಿರೆ ಅನುಗ್ರಹ ಶಾಲೆಯ ನಾಲ್ವರು ವಿದ್ಯಾರ್ಥಿಗಳು ಕರಾಟೆಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ

Suddi Udaya

ಉಜಿರೆ ಬೆನಕ ಆಸ್ಪತ್ರೆಯ ರಜತ ಸಂಭ್ರಮ ಹಾಗೂ ನೂತನ ವಿಸ್ತೃತ ಕಟ್ಟಡ ಉದ್ಘಾಟನೆ

Suddi Udaya

ಅಳದಂಗಡಿ: ಸರಕಾರಿ ಸೌಲಭ್ಯ ವಂಚಿತರಾದ ವೃದ್ಧ ಮಹಿಳೆಯ ಶೆಡ್ ಗೆ ಬಂತು ಸೋಲಾರ್ ಲೈಟ್ ಡಿ.ಸಿ. ಕರೆ ಮಾಡಿ ಅಜ್ಜಿಯ ಬಗ್ಗೆ ಮಾಹಿತಿ ಸಂಗ್ರಹ

Suddi Udaya

ಪುದುವೆಟ್ಟು ಗ್ರಾ.ಪಂ. ದ್ವಿತೀಯ ಸುತ್ತಿನ ಗ್ರಾಮಸಭೆ

Suddi Udaya
error: Content is protected !!