37.9 C
ಪುತ್ತೂರು, ಬೆಳ್ತಂಗಡಿ
March 6, 2026
Uncategorized

ಜು.7: ಮರಳು ಮತ್ತು ಕೆಂಪು ಕಲ್ಲಿನ ಕೊರತೆಯಿಂದ ಕಾರ್ಮಿಕರು ಎದುರಿಸುತ್ತಿರುವ ಗಂಭೀರ ಸಮಸ್ಯೆಗಳ ವಿರುದ್ಧ ಪ್ರತಿಭಟನೆ

ಬೆಳ್ತಂಗಡಿ: ಭಾರತೀಯ ಮದ್ದೂರು ಸಂಘ ಬೆಳ್ತಂಗಡಿ ಸಮಿತಿಯ ನೇತೃತ್ವದಲ್ಲಿ ಬೆಳ್ತಂಗಡಿ ತಾಲ್ಲೂಕಿನಲ್ಲಿ ಮರಳು ಮತ್ತು ಕೆಂಪು ಕಲ್ಲಿನ ಕೊರತೆಯಿಂದ ಕಟ್ಟಡ ಮತ್ತು ಇತರ ಕಾಮಗಾರಿ ಮಾಡುವ ಕಾರ್ಮಿಕರು ಭಾರೀ ಸಂಕಷ್ಟವನ್ನು ಎದುರಿಸುತ್ತಿದ್ದಾರೆ.

ಮರಳು ಮತ್ತು ಕೆಂಪು ಕಲ್ಲಿನ ಲಭ್ಯತೆ ಸಂಪೂರ್ಣವಾಗಿ ಸ್ಥಗಿತಗೊಂಡಿರುವುದರಿಂದ ಸಾವಿರಾರು ಕಾರ್ಮಿಕರ ಬದುಕಿಗೆ ಧಕ್ಕೆಯಾಗಿದೆ. ಈ ಗಂಭೀರ ಪರಿಸ್ಥಿತಿಗೆ ಸರಿಯಾದ ಪರಿಹಾರ ಒದಗಿಸಬೇಕೆಂಬ ಒತ್ತಾಯದೊಂದಿಗೆ, ಜು.7ರಂದು ಬೆಳಿಗ್ಗೆ 10:30ಕ್ಕೆ ಬೆಳ್ತಂಗಡಿ ತಾಲೂಕು ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ಆಯೋಜಿಸಲಾಗಿದೆ.ಸರ್ಕಾರ ಹಾಗೂ ಸಂಬಂಧಿತ ಇಲಾಖೆಗಳು ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬುದು ಮುಖ್ಯ ಬೇಡಿಕೆಯಾಗಿದೆ ಎಂದು ಜಿಲ್ಲಾಧ್ಯಕ್ಷರು ಭಾ.ಮ.ಸಂಘ ದಕ್ಷಿಣ ಕನ್ನಡ ಜಿಲ್ಲೆ ಅನಿಲ್ ಕುಮಾರ್ ಯು. ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Related posts

ಶಿರ್ಲಾಲು ಯುವವಾಹಿನಿ ಸಂಚಲನ ಸಮಿತಿ ವತಿಯಿಂದ ಆರೋಗ್ಯ ನಿಧಿ ವಿತರಣೆ

Suddi Udaya

ಕೆದ್ದುವಿನಲ್ಲಿ ಅನಾಥವಾಗಿದ್ದ ಬಾಡಜ್ಜನಿಗೆ ಆಶ್ರಯ ಕಲ್ಪಿಸಿದ ಹಿಂದು ಯುವಶಕ್ತಿ ಆಲಡ್ಕ ಕ್ಷೇತ್ರ ಸಮಾಜ ಸೇವಾ ಸಂಘಟನೆ

Suddi Udaya

ಶಿರ್ಲಾಲು ಕೆಮ್ಮಡೆ ನಿವಾಸಿ ಶ್ರೀಮತಿ ವಾರಿಜ ನಿಧನ

Suddi Udaya

ಶಿಶಿಲ: ತೀರಾ ವಯೋಸಹಜದ ನೊಣಮ್ಮ ರವರಿಂದ ಮತದಾನ

Suddi Udaya

ಜಾರಿಗೆಬೈಲು ಚಲಿಸುತ್ತಿದ್ದ ಬೈಕ್ ಮೇಲೆ ಮರ ಬಿದ್ದು ಸವಾರ ಸಾವು

Suddi Udaya

ಕರ್ನಾಟಕ ರಾಜ್ಯ ಟೈಲರ್ ಅಸೋಸಿಯೇಷನ್ ಉಜಿರೆ ವಲಯ ಸಮಿತಿ ಮಹಾಸಭೆ ಹಾಗೂ ಪದಾಧಿಕಾರಿಗಳ ಆಯ್ಕೆ

Suddi Udaya
error: Content is protected !!