23.5 C
ಪುತ್ತೂರು, ಬೆಳ್ತಂಗಡಿ
June 8, 2026
ಗ್ರಾಮಾಂತರ ಸುದ್ದಿ

ಗಾಯತ್ರಿ ಮಂತ್ರವೇ ಸರ್ವಶ್ರೇಷ್ಠ

ಬೆಳ್ತಂಗಡಿ :ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನ (ರಿ) ಹಾಗೂ ದ.ಕ ಜಿಲ್ಲಾ ಕುಡಾಳ್ ದೇಶಸ್ಥ ಆಧ್ಯ ಗೌಡ್ ಬ್ರಾಹ್ಮಣ ಸಂಘ (ರಿ) ಹಾಗೂ ಶ್ರೀ ಕ್ಷೇತ್ರ ಕಶೆಕೋಡಿ, ಶ್ರೀ ಕ್ಷೇತ್ರ ಮುಲಾರು, ಶ್ರೀ ಕ್ಷೇತ್ರ ಕೂಡಿಬೈಲು, ಶ್ರೀ ಗುರು ಪೂಣಾ೯ನಂದ ಮಂದಿರ (ರಿ), ಪುರುಷರಕಟ್ಟೆ, ಶ್ರೀ ಮಹಾಗಣಪತಿ ಸೇವಾ ವೃಂದ, ಕಪೆ೯ ಇವರ ಜಂಟಿ ಆಶ್ರಯದಲ್ಲಿ ಹಾಗೂ ಸಮಾಜದ ಪುರೋಹಿತರ ಮಾಗ೯ದಶ೯ನದಲ್ಲಿ


ಸಂಧ್ಯಾವಂದನೆ ಪ್ರಾತ್ಯಕ್ಷಿಕೆ ಶಿಬಿರ ವು ಕಲ್ಲಡ್ಕದ ಕಶೆಕೋಡಿಯ ಶ್ರೀ ಲಕ್ಷ್ಮಿ ವೆಂಕಟರಮಣ ದೇವಸ್ಥಾನದ ಸಭಾಂಗಣದಲ್ಲಿ ಸಂಪನ್ನಗೊಂಡಿತು.
ಈ ಸಂದರ್ಭದಲ್ಲಿ ಕ್ಷೇತ್ರದ ಅನುವಂಶಿಕ ಮುಕ್ತೇಸರರಾದ ಕಂಠಿಕ ಗೋಪಾಲ ಶೆಣೈ ಯವರು ದೀಪ ಬೆಳಗಿಸಿ, ‘ ಗಾಯತ್ರಿ ಮಂತ್ರದ ಮಹತ್ವವನ್ನು ವಿವರಿಸುತ್ತಾ ಮಂತ್ರ ಶ್ಲೋಕಗಳಲ್ಲಿ ಗಾಯತ್ರಿ ಮಂತ್ರವೇ ಸರ್ವ ಶ್ರೇಷ್ಠ ಇದನ್ನು ಸ್ಮರಿಸುವುದರಿಂದ ಬುದ್ಧಿಶಕ್ತಿ ಜ್ಞಾನಶಕ್ತಿ ಏಕಾಗ್ರತೆ ಹಾಗೂ ಧನಾತ್ಮಕ ಚಿಂತನೆಗಳಿಗೆ ಪೂರಕವಾಗಿ ಮನಸ್ಸನ್ನು ಸದೃಢಗೊಳಿಸುತ್ತದೆ. ಇದು ತಮ್ಮ ಮನುಷ್ಯನ ಆರೋಗ್ಯಕ್ಕೂ ಹಿತಕರ, ಬದುಕನ್ನು ಸಾಥ೯ಕ್ಯ ಗೊಳಿಸುತ್ತದೆ’ ಎಂದು ಶಾಸ್ತ್ರಗಳು ಹೇಳುತ್ತವೆ ಎಂದು ಹೇಳಿ, ಕಾರ್ಯಕ್ರಮದ ಯಶಸ್ಸಿಗೆ ಶುಭವನ್ನು ಕೋರಿದರು.
ಹಿರಿಯ ಪುರೋಹಿತರಾದ ಜಯರಾಮ ಭಟ್ ಅವರು ಗಾಯತ್ರಿ ಮಂತ್ರಗಳ ಮಹತ್ವವನ್ನು ವಿವರಿಸಿದ್ದರು. ಸಮಾಜದ ಪುರೋಹಿತರಾದ ನಿತ್ಯಾನಂದ ಭಟ್ ಬರೆಪ್ಪಾಡಿ ಇವರು ಸಂಧ್ಯಾವಂದನೆ ಪ್ರಾತ್ಯಕ್ಷಿಕೆಯನ್ನು ನಡೆಸಿಕೊಟ್ಟರು. ದಯಾನಂದ ಭಟ್ ಅವರು ‘ವಟುಗಳು ಪ್ರತಿನಿತ್ಯ ಪ್ರಾತಃ ಹಾಗೂ ಸಂಧ್ಯಾ ಕಾಲದಲ್ಲಿ ತಪ್ಪದೇ ಸಂಧ್ಯಾವಂದನೆಯನ್ನು ಮಾಡಬೇಕು’ ಎಂದು ಒತ್ತಾಯಿಸಿದರು. ಹಾಗೆಯೇ ಹಿರಿಯ ಪುರೋಹಿತರಾದ ವಸಂತ ಭಟ್ ಅವರ ನೇತೃತ್ವದಲ್ಲಿ ಪ್ರಾತ್ಯಕ್ಷಿಕೆ ಶಿಬಿರವು ಅತ್ಯಂತ ಯಶಸ್ವಿಯಾಗಿ ನಡೆಯಿತು. ಪ್ರತಿಷ್ಠಾನದ ಸಂಚಾಲಕರಾದ ರಮೇಶ ನಾಯಕ್ ಮೈರಾ, ಇವರು ಪ್ರತಿಷ್ಠಾನದ ಕಾರ್ಯಕ್ರಮಗಳ ಚಿತ್ರಣವನ್ನು ಸಮುದಾಯದ ಮುಂದಿಡುತ್ತಾ, ಪ್ರಾಸ್ತಾವಿಕ ಮಾತಿನೊಂದಿಗೆ ಸ್ವಾಗತಿಸಿದರು. ಈ ಸಂದರ್ಭದಲ್ಲಿ ದೇವಸ್ಥಾನಗಳ ಆಡಳಿತ ಮುಕ್ತೇಸರ ಗಳಾದ ಸರ್ವಶ್ರೀ ಕಲ್ಲೆಗ ಸಂಜೀವ ನಾಯಕ್, ವಾಸುದೇವ ಪ್ರಭು ಮುಲಾರು, ಶ್ರೀನಿವಾಸ ಶೆಣೈ ಕೂಡಿಬೈಲು, ಮಹೇಶ್ ಪ್ರಭು ಮಣಿಯ, ನಾರಾಯಣ ನಾಯಕ್ ಕಿನ್ನಾಜೆ, ಚಂದ್ರಹಾಸ ಭಟ್ ಪಂಜ, ಹಾಗೂ ಸಮಾಜದ ಎಲ್ಲಾ ಪುರೋಹಿತರು ಉಪಸ್ಥಿತರಿದ್ದು, ಸಹಕರಿಸಿದರು.

ಸಂಘದ ಅಧ್ಯಕ್ಷರಾದ ದಯಾನಂದ ನಾಯಕ್ ಪುಂಜಾಲ್ ಕಟ್ಟೆ, ಕಾರ್ಯದರ್ಶಿ ಸುಧಾಕರ್ ಪ್ರಭು ಪೆರ್ಮರೋಡಿ, ಗಣೇಶ್ ನಾಯಕ್ ಬೋಳಂಗಡಿ, ರಾಜೇಶ್ ನಾಯಕ್ ಬೋಳಂಗಡಿ, ಭಾಸ್ಕರ ಪ್ರಭು ಕೊರ್ದೊಟ್ಟು, ಗಣಪತಿ ಶೆಣೈ ಡೆಚ್ಚಾರು, ಪ್ರತಿಷ್ಠಾನದ ಅಧ್ಯಕ್ಷರಾದ ಮುರಳೀಧರ ಪ್ರಭು ವಗ್ಗ, ಚಿದಾನಂದ ಪ್ರಭು ಒಡ್ಡೂರು, ಪಾಣೆ ಮಂಗಳೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಜ್ಞಾನೇಶ್ವರ ಬೋಳಂಗಡಿ, ನಿಕಟಪೂರ್ವ ಅಧ್ಯಕ್ಷರಾದ ವಿಜಯ ಶೆಣೈ ಕೊಡಂಗೆ, ಸುಜಾತ ಸಾಮಂತ್, ಉಪೇಂದ್ರ ನಾಯಕ್, ಸುರೇಂದ್ರ ನಾಯಕ್ ನೂಜಿನಡ್ಕ, ಉಮೇಶ ನಾಯಕ್ ನೂಜಿನಡ್ಕ, ಹಾಗೂ ಎಲ್ಲ ಪದಾಧಿಕಾರಿಗಳು ಉಪಸ್ಥಿತರಿದ್ದರು. ಈ ಕಾರ್ಯಕ್ರಮದ ಮೇಲುಸ್ತುವಾರಿಯನ್ನು ಸತೀಶ ಶೆಣೈ ಬೋಳಂಗಡಿ ವಹಿಸಿದ್ದರು.
ಸಮಾಜದ ವಟುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಶಿಬಿರದ ಪ್ರಯೋಜನವನ್ನು ಪಡೆದುಕೊಂಡರು. ವಟುಗಳ ಹೆತ್ತವರು ಹಾಗೂ ಸಮಾಜ ಬಾಂಧವರು ಪಾಲ್ಗೊಂಡು ಪ್ರೋತ್ಸಾಹಿಸಿದರು. ಸತೀಶ್ ಪ್ರಭು ಮಣಿಯ ಇವರು ವಂದಿಸಿ, ಡಾ. ವಿಜಯಲಕ್ಷ್ಮಿ ನಾಯಕ್ ಮಂಗಳೂರು, ಇವರು ಕಾರ್ಯಕ್ರಮವನ್ನು ನಿರೂಪಿಸಿದರು.

Related posts

ಪುಂಜಾಲಕಟ್ಟೆ: ಕಾವಳಕಟ್ಟೆ ಮುಂಡಬೈಲು ನಿವಾಸಿ ಶತಾಯುಷಿ ರುಕ್ಮಿಣಿ ನಿಧನ

Suddi Udaya

ಕಣಿಯೂರು ಗ್ರಾ.ಪಂ. ಅಧ್ಯಕ್ಷರಾಗಿ ಸೀತಾರಾಮ ಆಯ್ಕೆ

Suddi Udaya

ಕಡಿರುದ್ಯಾವರ ಶ್ರೀ ವಿದ್ಯಾ ಸರಸ್ವತಿ ಮಹಿಳಾ ಮಂಡಲದಿಂದ ಆಟಿಡೊಂಜಿ ದಿನ ಕಾರ್ಯಕ್ರಮ

Suddi Udaya

ಉಜಿರೆ ಎಸ್. ಡಿ.ಎಂ. ಶಿಕ್ಷಕರ ತರಬೇತಿ ಸಂಸ್ಥೆಯಲ್ಲಿ ಪೌರತ್ವ ತರಬೇತಿ ಶಿಬಿರ ಸಮಾರೋಪ

Suddi Udaya

ಬೆಳಾಲು ಕೀನ್ಯಾಜೆ ನದಿಯಿಂದ ಅಕ್ರಮ ಮರಳು ಸಾಗಾಟ ಪತ್ತೆ

Suddi Udaya

ಬೆಳ್ತಂಗಡಿ: ‘ಶೌರ್ಯ’ ಶ್ರೀ ಧರ್ಮಸ್ಥಳ ತುರ್ತು ಸ್ಪಂದನಾ ತಂಡದ ಸಭೆ

Suddi Udaya
error: Content is protected !!