26.5 C
ಪುತ್ತೂರು, ಬೆಳ್ತಂಗಡಿ
September 20, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ನಾವೂರು ಸರ್ವೋದಯ ಟ್ರಸ್ಟ್ ನೇತೃತ್ವದಲ್ಲಿ ಬೃಹತ್ ರಕ್ತದಾನ ಶಿಬಿರ

ನಾವೂರು: ಇಲ್ಲಿಯ ಸರ್ವೋದಯ ಟ್ರಸ್ಟ್ ಇದರ ನೇತೃತ್ವದಲ್ಲಿ ಆಯುಷ್ ಫೆಡರರೇಶನ್ ಆಫ್ ಇಂಡಿಯಾ, ಬೆಳ್ತಂಗಡಿ, ರೋಟರಿ ಕ್ಲಬ್ ಬೆಳ್ತಂಗಡಿ, ಪ್ರಸನ್ನ ಆಯುರ್ವೇದಿಕ್ ಕಾಲೇಜು ಮತ್ತು ಆಸ್ಪತ್ರೆ ಲಾಯಿಲ, ಬಾಹುಬಲಿ ಕ್ರೆಡಿಟ್ ಸೌಹಾರ್ದ ಪತ್ತಿನ ಸಹಕಾರಿ ಸಂಘ ಕಾರ್ಕಳ, ಬಂಗಾಡಿ ಸಹಕಾರಿ ವ್ಯವಸಾಯಿಕ ಸಂಘ(ನಿ)ಬಂಗಾಡಿ, ಇವರ ಸಹಭಾಗಿತ್ವದಲ್ಲಿ ರಕ್ತನಿಧಿ ಕೇಂದ್ರಕ್ಕೆ ಎಂ ಸಿ ಇದರ ಸಹಯೋಗದಲ್ಲಿ ಬೃಹತ್ ರಕ್ತದಾನ ಶಿಬಿರವು ಯಶಸ್ವಿಯಾಗಿ ಜು. 6 ರಂದು ನಡೆಯಿತು.

ಶಿಬಿರದ ಉದ್ಘಾಟನೆಯನ್ನು ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜ ನೆರವೇರಿಸಿ ಇಲ್ಲಿ ಪ್ರತಿ ವರ್ಷ ನಡೆಯುತ್ತಿರುವ ಶಿಬಿರದ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆಯನ್ನು ಸೂಚಿಸಿದರು.

ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ತಿನ ಶಾಸಕ ಪ್ರತಾಪ ಸಿಂಹ ನಾಯಕ್, ರೋಟರಿ ಕ್ಲಬ್ ನ ಅಧ್ಯಕ್ಷ ರೊ।ಪ್ರಕಾಶ್ ಪ್ರಭು, ಕಾರ್ಯದರ್ಶಿಗಳಾದ ರೊ।ಡಾ ಎಂ ಎಂ ದಯಾಕರ್ , ನಿಕಟ ಪೂರ್ವ ಅಧ್ಯಕ್ಷ ರೊ।ಪೂರಣ್ ವರ್ಮ, ನಿಕಟ ಪೂರ್ವ ಕಾರ್ಯದರ್ಶಿ ರೊ। ಸಂದೇಶ್ ರಾವ್, ಎಕ್ಸೆಲ್ ಸಂಸ್ಥೆಯ ಅಧ್ಯಕ್ಷ ರೊ। ಸುಮಂತ್ ಕುಮಾರ್ ಜೈನ್ , ರಾಜಶೇಖರ ಅಜ್ರಿ, ಡಾ। ಶಿವರಾಜ ಪಜಿಲ, ಡಾ ಶ್ರಾವ್ಯ , ಡಾ। ಕವಿತಾ, ಹೋಲಿ ಕ್ರಾಸ್ ಚರ್ಚ್ ಮಂಜೊಟ್ಟಿಯ ಧರ್ಮಗುರುಗಳಾದ ಫಾ। ಪೌಲ್ ಸೆಬಾಸ್ಟಿನ್, ನಾವೂರು ಗ್ರಾಮ ಪಂಚಾಯತ್ ನ ಅಧ್ಯಕ್ಷೆ ಶ್ರೀಮತಿ ಸುನಂದ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಗೌರವ ಉಪಸ್ಥಿತರಾಗಿ ಹರೀಶ್ ಸಾಲ್ಯನ್ ಮೊರ್ತಾಜೆ, ಲಕ್ಷ್ಮಣ ಗೌಡ ಇರ್ತಿಲಾಲ್, ಎ ಬಿ ಉಮೇಶ್ ಅತ್ಯಡ್ಕ, ಎಸ್ ಎನ್ ಭಟ್ ಬೊಳಿಯಂಜಿ, ಸೇವಿಯರ್ ಪಾಲೇಲಿ, ಸುನಿಲ್ ನಾವೂರು, ಮುನಿರಾಜ ಅಜ್ರಿ,ಹಬೀಬ್ ಸಾಹೇಬ್ ನಡ, ಗಣೇಶ್ ಕಣಾಲು, ಶ್ರೀಮತಿ ವೇದಾವತಿ ನಾವೂರು, ಶ್ರೀಮತಿ ಪ್ರಿಯಾ ಸಂಪಿಂಜ, ಹಸ್ಸೈನಾರ್ ನಾವೂರು, ಉಮೇಶ್ ಪ್ರಭು, ದಿನೇಶ್ ಪ್ರಭು, ಮೋಹನ್ ಕಾರಿಂಜ, ಅಜಿತ್ ಆರಿಗ, ಮುಖ್ಯ ಶಿಕ್ಷಕಿ ಶ್ರೀಮತಿ ರೋಹಿಣಿ, ರಾಜೇಂದ್ರ ಮುಖ್ಯ ಶಿಕ್ಷಕರು, ಪ್ರವೀಣ್ ವಿ ಜಿ, ಗ್ರಾಮಾಭಿವೃದ್ಧಿ ಯೋಜನೆಯ ಶ್ರೀಮತಿ ಉಷಾ ಬೆಳಾಲು, ಜನಾರ್ದನ ಕಡ್ತ್ಯಾರು, ಧರ್ಣಪ್ಪ ಮೂಲ್ಯ, ದಿನೇಶ್ ಪ್ರಭು, ಗಣೇಶ್ ಗೌಡ ಹಾಗೂ ಸೆಬಾಸ್ಟಿನ್ ವಿ ಪಿ ಭಾಗವಹಿಸಿದರು.

ಕಾರ್ಯಕ್ರಮದಲ್ಲಿ ಟ್ರಸ್ಟ್ ನ ಅಧ್ಯಕ್ಷ ನೇಮಿರಾಜ ಆರಿಗ ಅಧ್ಯಕ್ಷತೆ ವಹಿಸಿದ್ದರು.

ಸಹಕಾರ ನೀಡಿದ ಸಂಘ ಸಂಸ್ಥೆಗಳ ಪ್ರಮುಖರಾದ ಶ್ಯಾಮ ಭಟ್ ಅತ್ತಾಜೆ, ಅಶ್ವತ್ಥ ಭಟ್ ಪಡ್ಪು, ಹನೀಫ್ ಕೇಲ್ತಾಜೆ, ಶಾಹುಲ್ ನಾವೂರು, ಜಯಾನಂದ ಗೌಡ, ಉಮೇಶ್ ಮಾಲೂರು , ತೀಕ್ಷಿತ್ ದಿಡುಪೆ, ರಮೇಶ್ ನೂಜಿಲೆ, ರಾಮಣ್ಣ ಕುಂಬಾರ, ಲೋಕೇಶ್ ಕುಕ್ಕಾವು, ಹರೀಶ್ ಮಾಂಜ್ಯ, ಪ್ರಕಾಶ್ ಇಜ್ಜಲ, ಪ್ರಮೋದ್ ಗೌಡ ಬೆದ್ರಬೆಟ್ಟು ,ಮುಂತಾದವರು ಭಾಗವಹಿಸಿದರು.

ಪ್ರಧಾನ ಸಂಚಾಲಕರಾದ ಡಾ। ಪ್ರದೀಪ್ ಆಟಿಕುಕ್ಕೆ ಸ್ವಾಗತಿಸಿದರು. ಹರೀಶ್ ಕಾರಿಂಜ ವಂದಿಸಿದರು. 201 ಯುನಿಟ್ ರಕ್ತವು ಸಂಗ್ರಹಿಸಲ್ಪಟ್ಟಿರುತ್ತದೆ.

Related posts

ಗರ್ಡಾಡಿ ನಂದಿಬೆಟ್ಟು ಶ್ರೀ ನಂದಿಕೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಗೆ ಅಧ್ಯಕ್ಷರು, ಸದಸ್ಯರ ನೇಮಕ

Suddi Udaya

ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕ ದಾಳಿಯು ತೀವ್ರ ದುಃಖಕರ ಮತ್ತು ಖಂಡನೀಯ: ರಕ್ಷಿತ್ ಶಿವಾರಂ

Suddi Udaya

ಆರ್ ಟಿ ಇ ದಾಖಲಾತಿಗೆ ಅರ್ಜಿ ಆಹ್ವಾನ: ಮೇ.20 ಕೊನೆಯ ದಿನ

Suddi Udaya

ರೈತ ಸಂಪರ್ಕ ಕೇಂದ್ರಗಳಲ್ಲಿ ಶೇ.100ರಷ್ಟು ಸಹಾಯಧನದಲ್ಲಿ ಸಹ್ಯಾದ್ರಿ ಬ್ರಹ್ಮ ಭತ್ತದ ಬಿತ್ತನೆ ಬೀಜ ಲಭ್ಯ

Suddi Udaya

ನೆಲ್ಲಿಕಟ್ಟೆ ಶ್ರೀ ಮಂಜುನಾಥೇಶ್ವರ ಭಜನಾ ಮಂಡಳಿ ನೂತನ ಅಧ್ಯಕ್ಷರಾಗಿ ಜನಾರ್ಧನ ಗೌಡ ಕುಳಾಯಿ ಕಾರ್ಯದರ್ಶಿಯಾಗಿ ಸುಂದರ್ ನಾಯ್ಕ್ ಕುಳಾಯಿ ಆಯ್ಕೆ

Suddi Udaya

ಮುಂಡಾಜೆ: ಔಷಧೀಯ ಮೂಲಿಕಾ ವನ ನಿರ್ಮಾಣ 

Suddi Udaya
error: Content is protected !!