26.5 C
ಪುತ್ತೂರು, ಬೆಳ್ತಂಗಡಿ
September 20, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಜನರ ಸುರಕ್ಷಿತ ದೃಷ್ಟಿಯಿಂದ ಗುರುವಾಯನಕೆರೆ- ಉಪ್ಪಿನಂಗಡಿ ರಾಜ್ಯ ಹೆದ್ದಾರಿಯ ಇನ್ನುಳಿದ ರಸ್ತೆ ಡಾಮರೀಕರಣಕ್ಕೆ ನಮ್ಮ ಪ್ರಯತ್ನ ನಿರಂತರ :ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್ ಹೇಳಿಕೆ

ಬೆಳ್ತಂಗಡಿ: ಕಳೆದ ಭಾರಿ ಬೆಳ್ತಂಗಡಿ ಪರಿಸರದಲ್ಲಿ ಸುರಿದ ಭಾರಿ ಮಳೆ ಹಾಗೂ ಪ್ರವಾಹದಿಂದ ಹಾನಿಗೊಳಗಾದ ಬೆಳ್ತಂಗಡಿ ಪ್ರದೇಶಕ್ಕೆ ಗ್ರಾಮೀಣ ರಸ್ತೆ, ಸೇತುವೆ, ಚರಂಡಿ ಕಾಮಗಾರಿಗಳನ್ನು ಕೈಗೊಳ್ಳಲು ಮಳೆಹಾನಿ ಯೋಜನೆಯಲ್ಲಿ ಬೆಳ್ತಂಗಡಿಗೆ ರಾಜ್ಯ ಸರಕಾರದಿಂದ ರೂ.10 ಕೋಟಿ ಅನುದಾನ ಮಂಜೂರಾದರು ಶಾಸಕರು ಇನ್ನೂ ಕ್ರಿಯಯೋಜನೆ ಯಾಕೆ ಮಾಡಿಲ್ಲ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್ ಪ್ರಶ್ನಿಸಿದರು.

ಅವರು ಜು. 7 ರಂದು ಬೆಳ್ತಂಗಡಿ ಬ್ಲಾಕ್ ಕಾಂಗ್ರೇಸ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಗುರುವಾಯನಕೆರೆ-ಉಪ್ಪಿನಂಗಡಿ ರಾಜ್ಯ ಹೆದ್ದಾರಿಯ ಪಿಲಿಗೂಡು ತನಕ ಮರು ಡಾಮರೀಕರಣವಾಗಿದ್ದು,ಇನ್ನೂ ಉಳಿದ ಕುಪ್ಪೆಟ್ಟಿನಿಂದ ಉಪ್ಪಿನಂಗಡಿ 7 ಕಿ.ಮಿ ರಸ್ತೆಯನ್ನು ಸರಿಪಡಿಸಲು ಸಾಧ್ಯವಿಲ್ಲ ಎಂದು ಶಾಸಕರು ಹೇಳಲಿ. ನಾವು ಕಾಂಗ್ರೇಸ್ ಸರಕಾರದ ಮಂತ್ರಿಗಳನ್ನು ಭೇಟಿ ಮಾಡಿ ಮಾಡಿಸುತ್ತೇವೆ ಎಂದರು.

ಸಬ್ ಸ್ಟೇಷನ್ ನಿರ್ಮಾಣ:
ಇಗಾಗಲೇ ಪಂಚ ಗ್ಯಾರಂಟಿ ಯೋಜನೆಗಳು ಅತ್ಯಂತ ಯಶಸ್ವಿಯಾಗಿ ಜನರನ್ನು ತಲುಪುತ್ತಿದೆ. ಗೃಹಲಕ್ಷ್ಮಿ ಯೋಜನೆಯಿಂದ ಬೆಳ್ತಂಗಡಿ ದೊಡ್ಡ ಮೊತ್ತ ಬರುತ್ತಿದೆ.ವಿದ್ಯುತ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಲ್ಲಿ ವಿದ್ಯುತ್ ಸಬ್ ಸ್ಟೇಷನ್ ಬೇಡಿಕೆಗೆ ಅನುಗುಣವಾಗಿ ನಿನ್ನಿಕಲ್ಲು, ಕುತ್ಲೂರು,ಇಂದಬೆಟ್ಟುವಿನಲ್ಲಿ ನಿರ್ಮಾಣವಾಗಲಿದೆ. ಬೆಳ್ತಂಗಡಿಗೆ ನೂರು ಡ್ರೈವರ್ ಕಂಡಕ್ಟರ್ ನೇಮಕವಾಗಿದೆ. ಬೆಳ್ತಂಗಡಿಗೆ ಹೆಚ್ಚುವರಿ 13 ಗ್ರಾಮಕರಣೀಕರು ನೇಮಕವಾಗಲಿದ್ದಾರೆ. ಗ್ರಾಮೀಣ ಭಾಗದ ಮೂಲ ಸೌಕರ್ಯಗಳಿಗೆ ಕಾಂಗ್ರೇಸ್ ಸರಕಾರ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದರೂ ಬೆಳ್ತಂಗಡಿ ಶಾಸಕರು ಬೆಳ್ತಂಗಡಿ ಅನುದಾನ ಬರುತ್ತಿಲ್ಲ ಎಂದು ಹೇಳುತ್ತಿದ್ದಾರೆ ಎಂದು ನುಡಿದರು.

ಮರಳು ಮತ್ತು ಕೆಂಪು ಕಲ್ಲಿನ ವಿಚಾರವಾಗಿ ರಾಜ್ಯ ಸರಕಾರ ಸ್ಥಳೀಯ ಅಧಿಕಾರಿಳ ಹಾಗೂ ಜನಪ್ರತಿನಿಧಿಗಳ ವಿಶೇಷ ಸಭೆಯನ್ನು ಕರೆದಿದ್ದು ಇಲ್ಲಿನ ಸ್ಥಿತಿಗತಿಗಳನ್ನು ಅದ್ಯಯನ ಮಾಡಿ ಸೂಕ್ತ ಪರಿಹಾರ ಕೆಲವೇ ದಿನಗಳಲ್ಲಿ ಸಿಗಲಿದೆ. ಈಗ ಅಕ್ರಮ ಮರಳು ಗಣಿಗಾರಿಕೆ ಸಂಪೂರ್ಣವಾಗಿ ನಿಂತಿದ್ದು ಜಿಲ್ಲೆಯ ನದಿಗಳನ್ನು ಉಳಿಸುವ ನಿಟ್ಟಿನಲ್ಲಿ ಇದೊಂದು ಮಹತ್ವದ ವಿಚಾರವಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿ ಗ್ರಾಮೀಣ ಅಧ್ಯಕ್ಷ ನಾಗೇಶ್ ಕುಮಾರ್ ಗೌಡ, ಜಿಲ್ಲಾ ಕೆಡಿಪಿ ಸದಸ್ಯ ಸಂತೋಷ್ ಕುಮಾರ್,ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರ ಪದ್ಮನಾಭ ಸಾಲಿಯಾನ್,ನಂ ಪಂ ಸದಸ್ಯ ಜಗದೀಶ್ ಡಿ,ಕೆಪಿಸಿಸಿ ಸದಸ್ಯ ಕೇಶವ ಪಿ ಬೆಳಾಲು, ರಾಜ್ಯ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ನಮಿತಾ ಕೆ ಪೂಜಾರಿ,ಗ್ರಾಮೀಣ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಪಿ.ಟಿ ಸೆಬಾಸ್ಟಿನ್,ಮಹಿಳಾ ಕಾಂಗ್ರೆಸ್ ಗ್ರಾಮೀಣ ಸಮಿತಿ ಅಧ್ಯಕ್ಷ ಶ್ರೀಮತಿ ಶೋಭಾ ನಾರಾಯಣ ಗೌಡ, ತಾಲೂಕು ಅಕ್ರಮ ಸಕ್ರಮ ಸಮಿತಿಯ ಆಯುಬ್ ಡಿ.ಕೆ,ಯುವ ಕಾಂಗ್ರೆಸ್ ಬೆಳ್ತಂಗಡಿ ಗ್ರಾಮೀಣ ಅಧ್ಯಕ್ಷ ಮಹಮದ್ ಅಜರ್, ಯುವ ಕಾಂಗ್ರೆಸ್ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಹಕಿಂ ಕೊಕ್ಕಡ, ಪಂಚಾಯತ್ ರಾಜ್ ಸಂಘಟನೆ ಅಧ್ಯಕ್ಷ ರೊಯಿ ಪುದುವೆಟ್ಟು ಉಪಸ್ಥಿತರಿದ್ದರು.

Related posts

ಗೇರುಕಟ್ಟೆ :ಸಂವಿಧಾನ ಜಾಗೃತಿ ಜಾಥಾ

Suddi Udaya

ಕೊಯ್ಯೂರು ಶ್ರೀ ಕೃಷ್ಣ ಭಜನಾ ಮಂದಿರದಲ್ಲಿ ತಾಲೂಕು ಭಜನಾ ಪರಿಷತ್ ಕಾರ್ಯದರ್ಶಿಯಿಂದ ಸಮಲೋಚನಾ ಸಭೆ

Suddi Udaya

ಎಸ್ ಕೆ ಎಸ್ ಎಸ್ ಎಫ್ ಮದ್ದಡ್ಕ ಶಾಖೆ ವತಿಯಿಂದ ಯುನಿಟ್ ಕ್ಯಾಬಿನೆಟ್‌ಮೀಟ್ ಮತ್ತು ಎಸ್ ಎಸ್ ಎಲ್ ಸಿ ಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಪಾಸಾದ ವಿದ್ಯಾರ್ಥಿಗೆ‌ ಸನ್ಮಾನ

Suddi Udaya

ಮುಂಡಾಜೆ ಬಿ ಕಾರ್ಯಕ್ಷೇತ್ರದ ‘ಶ್ರೀ ಲಕ್ಷ್ಮಿ’ ಹೊಸ ಜ್ಞಾನ ವಿಕಾಸ ಕೇಂದ್ರದ ಉದ್ಘಾಟನೆ

Suddi Udaya

ಗೋಸಾಗಾಟ ವಿಷಯಕ್ಕೂ ನನಗೂ ಯಾವುದೇ ಸಂಬಂಧವಿಲ್ಲ : ಭಾಜಪಾ. ಪ್ರಧಾನ ಕಾರ್ಯದರ್ಶಿ ಗಣೇಶ್ ಗೌಡ ಸ್ಪಷ್ಟನೆ

Suddi Udaya

ಗಂಡಿಬಾಗಿಲು ಸಿಯೋನ್ ಆಶ್ರಮದಲ್ಲಿ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ

Suddi Udaya
error: Content is protected !!