ತಣ್ಣೀರುಪಂತ : ಕಡಬ ತಾಲೂಕಿನ ದೋಲ್ಪಾಡಿ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ಜಲಜಾಕ್ಷಿ ಯವರು ವಿದ್ಯುತ್ ಅವಘಡದಿಂದ ಮೃತ ಪಟ್ಟಿದ್ದು, ಮೃತರ ಕುಟುಂಬಕ್ಕೆ ತಣ್ಣೀರುಪಂತ ಹಾಲು ಉತ್ಪಾದಕರ ಸಹಕಾರ ಸಂಘದಿಂದ ರೂ 25000 ಗಳ ಚೆಕ್ ನ್ನು ಜಯರಾಜ್ ಹೆಗ್ಡೆ ಯವರು ಜು.8 ರಂದು ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ತಣ್ಣೀರುಪಂಥ ಸಂಘದ ಅಧ್ಯಕ್ಷ ಪಿ. ಜಯರಾಜ್ ಹೆಗ್ಡೆ, ನಿರ್ದೇಶಕರುಗಳಾದ ತಿಮ್ಮಪ್ಪ ಸಾಲಿಯನ್, ಜೋನ್ ಫೆಲಿಕ್ಸ್ ಲೋಬೊ, ಪಿ. ಕೃಷ್ಣಪ್ಪ ಪೂಜಾರಿ, ದಿನೇಶ್ ಗೌಡ ಹಾಗೂ ಕಾರ್ಯದರ್ಶಿ ಜಯರಾಜ್ ಉಪಸ್ಥಿತರಿದ್ದರು.











