September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಕೊಯ್ಯೂರು ಸ.ಪ.ಪೂ. ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘ ಉದ್ಘಾಟನೆ

ಕೊಯ್ಯೂರು: “ಶಿಕ್ಷಣ ಹಾಗೂ ಜೀವನ ಮೌಲ್ಯಗಳು ಮಾನವನನ್ನು ಉತ್ತುಂಗದೆಡೆಗೆ ಕೊಂಡೊಯ್ಯುತ್ತವೆ. ವಿದ್ಯಾರ್ಥಿಗಳು ಆಸಕ್ತಿಯ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಾಗ ಜೀವನದಲ್ಲಿ ಯಶಸ್ಸನ್ನು ಪಡೆಯಲು ಸಾಧ್ಯವಾಗುತ್ತದೆ” ಎಂದು ಕೊಯ್ಯೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ಅಶೋಕ್ ಕುಮಾರ್ ಅಗ್ರಸಾಲೆ ಅಭಿಪ್ರಾಯಪಟ್ಟರು.
ಅವರು ಕೊಯ್ಯೂರು ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘದ ಉದ್ಘಾಟನೆ ಗೈದು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಕರ್ನಾಟಕ ಹೈಕೋರ್ಟ್ನ ವಕೀಲರಾದ ಜಿತಿನ್ ಜೀಜೋ “ನಾವು ಮಾಡುವ ಕೆಲಸ ಸಮಾಜಮುಖಿಯಾಗಿದ್ದರೆ ಇಡೀ ಸಮಾಜ ನಮ್ಮೊಡನೆ ಕೈ ಜೋಡಿಸುತ್ತದೆ. ಆಗ ಶ್ರೇಷ್ಠ ಸಮಾಜದ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ” ಎಂದು ವಿದ್ಯಾರ್ಥಿ ಶಕ್ತಿಯ ಬಗ್ಗೆ ಮಾಹಿತಿ ನೀಡಿದರು.

ಕೊಯ್ಯೂರು ಗ್ರಾ.ಪಂ. ಸದಸ್ಯ ಲೋಕೇಶ್ ಪಾಂಬೇಲು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಕೊಯ್ಯೂರು ಗ್ರಾ.ಪಂ. ಸದಸ್ಯರುಗಳಾದ ಯಶವಂತ್ ಪೂರ್ಯಾಳ, ಶ್ರೀಮತಿ ಹೇಮಾವತಿ ಕಡಮ್ಮಜೆ, ಪ್ರೌಢ ಶಾಲಾ ಸಹಶಿಕ್ಷಕ ಶ್ರೀರಾಮಚಂದ್ರ ದೊಡ್ಡಮನಿ, ಪ್ರಾಚ್ಯ ವಸ್ತು ಸಂಗ್ರಹಕಾರ ಶ್ರೀ ಹಳ್ಳಿಮನೆ ಹೈದರಾಲಿ, ವಿದ್ಯಾರ್ಥಿ ಸಂಘದ ಅಧ್ಯಕ್ಷ ರಂಜಿತ್, ಕಾರ್ಯದರ್ಶಿ ವಂಶಿಕ ಉಪಸ್ಥಿತರಿದ್ದರು.

ಸಂಸ್ಥೆಯ ಪ್ರಾಂಶುಪಾಲರಾದ ಮೋಹನ ಗೌಡ ಸ್ವಾಗತಿಸಿ, ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು.
ವಾಣಿಜ್ಯ ಶಾಸ್ತç ಉಪನ್ಯಾಸಕಿ ಶ್ರೀಮತಿ ಭವ್ಯ ವಿಶ್ವ ತಂಬಾಕು ದಿನಾಚರಣೆ ಪ್ರಯುಕ್ತ ನಡೆಸಿದ ಸ್ಪರ್ಧೆಗಳ ಬಹುಮಾನ ಪಟ್ಟಿಯ ವಾಚನಗೈದರು. ವಿದ್ಯಾರ್ಥಿಗಳಾದ ವಿನಯ, ಚಿರಸ್ವಿ, ವಿದ್ಯಾ, ಐಶ್ವರ್ಯ ಪ್ರಾರ್ಥನೆ ಗೈದರು. ಅರ್ಥಶಾಸ್ತç ಉಪನ್ಯಾಸಕಿ ಶ್ರೀಮತಿ ತೃಪ್ತಿ ವಂದಿಸಿದರು. ಇತಿಹಾಸ ಉಪನ್ಯಾಸಕ ಲಕ್ಷö್ಮಣ ಗೌಡ ಕಾರ್ಯಕ್ರಮ ನಿರ್ವಹಿಸಿದರು. ಉಪನ್ಯಾಸಕರಾದ ಮಾಯಿಲ, ಶ್ರೀಮತಿ ಪವಿತ್ರ, ಶ್ರೀಮತಿ ರಶ್ಮಿ ದೇವಿ ಸಹಕರಿಸಿದರು.

Related posts

ಪತ್ರಕರ್ತೆ ಉಮಾ ಅನಂತ್ ಗೆ ಮಾಧ್ಯಮ ಅಕಾಡೆಮಿ ಪ್ರಶಸ್ತಿ

Suddi Udaya

ಮಹೇಶ್ ಶೆಟ್ಟಿ ತಿಮರೋಡಿ ಬೆಂಬಲಿಗರಿಂದ ಪೊಲೀಸ್ ವಾಹನಕ್ಕೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ : ಮೂವರು ಆರೋಪಿಗಳಿಗೆ ನ್ಯಾಯಾಂಗ ಬಂಧನ

Suddi Udaya

ಆತ್ಮಹತ್ಯೆಗೆ ಯತ್ನಿಸಿದ್ದ ಕೊಕ್ಕಡದ ವಿದ್ಯಾರ್ಥಿನಿ ಚಿಕಿತ್ಸೆಗೆ ಸ್ಪಂದಿಸದೆ ಸಾವು

Suddi Udaya

ವ್ಯವಹಾರ ಆಡಳಿತ ನಿರ್ವಹಣೆ ಯಲ್ಲಿ ಕೃತಕ ಬುದ್ಧಿಮತ್ತೆ ಮತ್ತು ವೈಜ್ಞಾನಿಕ ಆವಿಷ್ಕಾರಗಳು ಅವಕಾಶಗಳನ್ನೂ ಸೃಷ್ಟಿಸುತ್ತದೆ ” ಎನ್ನುವ ವಿಚಾರದ ಕುರಿತು ಉಪನ್ಯಾಸ ಕಾರ್ಯಕ್ರಮ

Suddi Udaya

ಕಲ್ಮಂಜ: ಸಂಗಮ ಶ್ರೀ ಯುವಕ ಮಂಡಲ ಸಿದ್ದಬೈಲು-ಕ್ರೀಡಾ ಸಾಮಾಗ್ರಿ ವಿತರಣೆ ಕಾರ್ಯಕ್ರಮ

Suddi Udaya

ಸಂಸದ ಕ್ಯಾ. ಚೌಟ ಅವರನ್ನು ಭೇಟಿ ಮಾಡಿದ ಆಸ್ಟ್ರೇಲಿಯಾ ಕಾನ್ಸುಲ್ ಜನರಲ್ ಹಿಲರಿ ಮೆಕ್‌ಗೀಚಿ

Suddi Udaya
error: Content is protected !!