25.7 C
ಪುತ್ತೂರು, ಬೆಳ್ತಂಗಡಿ
March 7, 2026
ಶಾಲಾ ಕಾಲೇಜು

ವಾಣಿ ಕಾಲೇಜು: ವಾಣಿಜ್ಯ ಸಂಘದ ವತಿಯಿಂದ ‘ಲೀಡರ್ಸ್ ಟಾಕ್’ ಉಪನ್ಯಾಸ ಕಾರ್ಯಕ್ರಮ


ಬೆಳ್ತಂಗಡಿ :ನಿರಂತರವಾಗಿ ಕಠಿಣ ಪರಿಶ್ರಮ ಇದ್ದರೆ ನಿರ್ದಿಷ್ಟ ಗುರಿ ತಲುಪಲು ಸಾಧ್ಯವಾಗುತ್ತದೆ ಎಂದು ಪುತ್ತೂರಿನ ಯುವ ಉದ್ಯಮಿ ಸುಹಾಸ್ ಮರಿಕೆ ಹೇಳಿದರು.


ಅವರು ವಾಣಿ ಪದವಿಪೂರ್ವ ಕಾಲೇಜಿನ ವಾಣಿಜ್ಯ ಸಂಘದ ವತಿಯಿಂದ ನಡೆದ ‘ಲೀಡರ್ಸ್ ಟಾಕ್’ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ಉದ್ಯಮ ಎಂದರೆ ಒಂದು ತಪಸ್ಸು. ನಿರ್ದಿಷ್ಟ ಗುರಿಯನ್ನು ಇಟ್ಟುಕೊಂಡು ಛಲದಿಂದ ಸಾಗಿದಾಗ ಅದರಲ್ಲಿ ಯಶಸ್ಸನ್ನು ಪಡೆಯಲು ಸಾಧ್ಯ. ಜೀವನದಲ್ಲಿ ಸೋಲು ಗೆಲುವು ಸಾಮಾನ್ಯ. ಸೋಲಿನ ಬಗ್ಗೆ ಚಿಂತಿಸದೆ ಗೆಲುವಿನಡೆಗೆ ಧುಮುಕಲು ಪ್ರಯತ್ನಿಸಬೇಕುಎಂದರು.
ಕಾಲೇಜಿನ ಪ್ರಾಂಶುಪಾಲರಾದ ವಿಷ್ಣು ಪ್ರಕಾಶ್ ಎಂ ಅಧ್ಯಕ್ಷತೆ ವಹಿಸಿದ್ದರು. ವಾಣಿಜ್ಯ ಸಂಘದ ಸಂಯೋಜಕರಾದ ಶ್ರೀಮತಿ ಪವಿತ್ರ ಮತ್ತು ಕುಮಾರಿ ಶ್ರಾವ್ಯ ಉಪಸ್ಥಿತರಿದ್ದರು
ವಾಣಿಜ್ಯ ಸಂಘದ ನಾಯಕಿ ಸಿಂಚನ ಸಿ ಎಸ್ ಸ್ವಾಗತಿಸಿದರು. ದೀಪಕ್ ಧನ್ಯವಾದವಿತ್ತರು. ಶ್ರೀಜಾ ಕಾರ್ಯಕ್ರಮ ನಿರೂಪಿಸಿದರು.

Related posts

ಮಚ್ಚಿನ : ಸರಕಾರಿ ಪ್ರೌಢಶಾಲೆಯಲ್ಲಿ ಪೋಷಕರ ಸಭೆ

Suddi Udaya

ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ

Suddi Udaya

ಕುತ್ಲೂರು ಸರಕಾರಿ ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲಾ ಪ್ರಾರಂಭೋತ್ಸವ

Suddi Udaya

ಬೆಳ್ತಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಾರ್ಷಿಕೋತ್ಸವ

Suddi Udaya

ಜ.6: ಮಿತ್ತಬಾಗಿಲು ಸ.ಹಿ.ಪ್ರಾ. ಶಾಲಾ ಅಮೃತ ಮಹೋತ್ಸವ ಕಾರ್ಯಕ್ರಮ

Suddi Udaya

ವಾಣಿ ಆಂಗ್ಲ ಮಾಧ್ಯಮ ಶಾಲೆಯ ನೂತನ ಮಂತ್ರಿಮಂಡಲದ ಪ್ರಮಾಣವಚನ ಸಮಾರಂಭ

Suddi Udaya
error: Content is protected !!