ಗುರುವಾಯನಕೆರೆ: ಇಲ್ಲಿಯ ಗುರುವಾಯನಕೆರೆ ಪೇಟೆಯಲ್ಲಿ ಬೀದಿ ನಾಯಿಗಳ ಹಾವಳಿ ತೀವ್ರವಾಗಿದ್ದು, ವಾಹನ ಚಾಲಕರಿಗೆ, ಶಾಲಾ ಕಾಲೇಜುಗಳಿಗೆ ನಡೆದುಕೊಂಡು ಹೋಗುವ ಮಕ್ಕಳಿಗೆ ಹಾಗೂ ಪಾದಾಚಾರಿಗಳಿಗೆ ಸಂಕಷ್ಟ ಎದುರಾಗಿದೆ.

ಗುರುವಾಯನಕೆರೆ ಬಸ್‌ನಿಲ್ದಾಣ ಪರಿಸರದಲ್ಲಿ ಗುಂಪಾಗಿ ನಾಯಿಗಳು ಓಡಾಡುತ್ತಿದೆ. ವಾಹನಗಳು ಬಂದಾಗ ಅಡ್ಡಾದಿಡ್ಡಿ ಓಡುವುದರಿಂದ ದ್ವಿಚಕ್ರ ಸವಾರರಿಗೆ ಬಹಳಷ್ಟು ಅಪಾಯವನ್ನು ತಂದೊಡ್ಡಿದೆ. ರಸ್ತೆಯಲ್ಲಿ ಶಾಲೆಗಳಿಗೆ ನಡೆದುಕೊಂಡು ಹೋಗುವ ಪುಟ್ಟ ಮಕ್ಕಳ ಮೇಲೆರೆಗಳು ನಾಯಿಗಳು ಬರುತ್ತಿದೆ. ಗುಂಪಾಗಿ ಎಂಟರಿಂದ ಹತ್ತು ನಾಯಿಗಳ ಹಿಂಡು ಗುರುವಾಯನಕೆರೆ ಪರಿಸರದಲ್ಲಿ ಕಳೆದ ಕೆಲ ದಿನಗಳಿಂದ ಕಂಡು ಬರುತ್ತಿದೆ. ವಾಹನಗಳು ಬರುವಾಗ ನಾಯಿಗಳ ಹಿಂಡು ಆ ಕಡೆ, ಈ ಕಡೆ ಓಡಾಟ ನಡೆಸುವುದರಿಂದ ವಾಹನ ಅಪಘಾತಗಳು ನಡೆಯುವ ಸಾಧ್ಯತೆಯೂ ಇದೆ. ಯಾವುದೇ ಅಪಾಯ ಆಗುವ ಮೊದಲು ಇದರ ಬಗ್ಗೆ ಸಂಬಂಧಪಟ್ಟವರು ಶೀಘ್ರ ಕ್ರಮಗಳನ್ನು ಕೈಗೊಳ್ಳುವಂತೆ ನಾಗರಿಕರು ಆಗ್ರಹಿಸಿದ್ದಾರೆ.











