ಧರ್ಮಸ್ಥಳ – ಕಾರ್ಯಾತಡ್ಕ – ಶಿಶಿಲ ರೂಟ್ ಬಸ್ ಹಾಗೂ ಕಾರ್ಯಾತಡ್ಕ – ಶಿಬರಾಜೆ ಪಾದೆ – ಮುದ್ದಿಗೆ -ಕೊಕ್ಕಡ -ಉಪ್ಪಿನಂಗಡಿ -ಪುತ್ತೂರು ಹೊಸದಾಗಿ ರೂಟ್ ಬಸ್ ಪ್ರಾರಂಬಿಸುವಂತೆ ಜು. 11 ರಂದು ಕಳೆಂಜ ಕಾಂಗ್ರೆಸ್ ಗ್ರಾಮ ಸಮಿತಿಯವರು ಧರ್ಮಸ್ಥಳ ಘಟಕ ವ್ಯವಸ್ಥಾಪಕರಿಗೆ ಮನವಿ ಮಾಡಲಾಯಿತು.
ಈ ಮಾರ್ಗದಲ್ಲಿ ಪ್ರತಿದಿನ ಸಾವಿರಾರು ವಿದ್ಯಾರ್ಥಿಗಳು ಹಾಗೂ ಅನೇಕ ಉದ್ಯೋಗಸ್ಥರು, ಸಾರ್ವಜನಿಕರು ಪ್ರಯಾಣ ಮಾಡುತ್ತಿದ್ದು ಖಾಸಗಿ ಬಸ್ ಹಾಗೂ ಇನ್ನಿತ್ತರ ವಾಹನಗಳನ್ನು ಅವಲಂಬಿತರಾಗಿದ್ದಾರೆ. ಸದರಿ ಮಾರ್ಗಕ್ಕೆ ಬೆಳಿಗ್ಗೆ ಮತ್ತು ಮದ್ಯಾಹ್ನ ಹಾಗೂ ಸಂಜೆ ಕೆ.ಎಸ್.ಆರ್.ಟಿ.ಸಿ ಬಸ್ ಸೇವೆಯನ್ನು ಕಲ್ಪಿಸಿಕೊಡುವಂತೆ ಈ ಮೂಲಕ ವಿನಂತಿಸಲಾಯಿತು.
ಈ ಸಂದರ್ಭದಲ್ಲಿ ಬೆಳ್ತಂಗಡಿ ತಾಲೂಕು ಅಲ್ಪಸಂಖ್ಯಾತ ಘಟಕ ಅಧ್ಯಕ್ಷ ಪಿ ಟಿ ಸೆಬಾಸ್ಟಿನ್ , ಗ್ರಾಮ ಪಂಚಾಯತ್ ಸದಸ್ಯರಾದ ನಿತ್ಯಾನಂದ ರೈ , ಪ್ರೇಮ ಬಿ ಎಸ್. ಮತ್ತು ಊರ ಪ್ರಮುಖರಾದ ಶ್ರೀಧರ್ ರಾವ್, ಶರತ್ ಮೂಡಾರು, ಅಶೋಕ್ ಭಟ್ ಕಾಯಡ, ಜಯವರ್ಮ ಜೈನ್ ಶಿಬರಾಜೆ, ಕೇಶವ ಗೌಡ ಮಲ್ಲಜಾಲು ಉಪಸ್ಥಿತರಿದ್ದರು.











