September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ನಡ ಸರಕಾರಿ ಪದವಿಪೂರ್ವ ಕಾಲೇಜು ವಿದ್ಯಾರ್ಥಿ ಸಂಘದ ಉದ್ಘಾಟನೆ

ನಡ: ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ 2025-26ನೇ ಸಾಲಿನ ವಿದ್ಯಾರ್ಥಿ ಸಂಘದ ಉದ್ಘಾಟನೆಯನ್ನು ಜು.೯ರಂದು ಕಾಲೇಜು ಸಭಾಂಗಣದಲ್ಲಿ ನಡೆಸಲಾಯಿತು.

ಉಜಿರೆಯ ದಂತ ವೈದ್ಯ ಡಾ| ಎಂ.ಎಂ. ದಯಾಕರ್ ಕಾರ್ಯಕ್ರಮ ಉದ್ಘಾಟಿಸಿ, ಜಗತ್ತಿನಲ್ಲಿ ಅತಿ ದೊಡ್ಡ ಶಕ್ತಿ ಎಂದರೆ ಯುವಶಕ್ತಿ. ಈ ಯುವಶಕ್ತಿಯನ್ನು ನಾವು ಸರಿಯಾಗಿ ಬಳಸಿಕೊಂಡರೆ ನಮಗೆ ಗೆಲುವು ಸಾಧ್ಯ. ವಿದ್ಯಾರ್ಥಿಗಳು ಯಾವುದೇ ದುಶ್ಚಟಗಳಿಗೆ ಬಲಿಯಾಗದೆ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಮಕ್ಕಳಿಗೆ ತಿಳಿ ಹೇಳಿದರು.

ಈ ಸಂದರ್ಭದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಅಜಿತ್ ಆರಿಗ, ಪ್ರಭಾಕರ ಮಯ್ಯ, ಕೊಯ್ಯೂರು ಕಾಲೇಜಿನ ಪ್ರಭಾರ ಪ್ರಾಂಶುಪಾಲ ಮೋಹನ ಗೌಡ ಉಪಸ್ಥಿತರಿದ್ದರು.

ಪ್ರಾಚಾರ್ಯ ಚಂದ್ರಶೇಖರ್ ಮಕ್ಕಳಿಗೆ ಪ್ರತಿಜ್ಞಾವಿಧಿ ಬೋಧಿಸಿ ಹೂ ಕೊಟ್ಟು ಗೌರವಿಸಿದರು. ನಡ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಮಂಜುಳಾ ದೇವಾಡಿಗ ಅಧ್ಯಕ್ಷತೆ ವಹಿಸಿ ಮಕ್ಕಳಿಗೆ ಶುಭ ಹಾರೈಸಿದರು.

ಅರ್ಥಶಾಸ್ತ್ರ ಉಪನ್ಯಾಸಕಿ ಶ್ರೀಮತಿ ವಸಂತಿ ಪಿ. ಸ್ವಾಗತಿಸಿದರು. ರಾಜ್ಯಶಾಸ್ತ್ರ ಉಪನ್ಯಾಸಕಿ ಶ್ರೀಮತಿ ಶಿಲ್ಪಾ ಪ್ರಾಸ್ತಾವಿಸಿದರು. ಶ್ರೀಮತಿ ಸವಿತಾ ಧನ್ಯವಾದಗೈದರು. ಕನ್ನಡ ಉಪನ್ಯಾಸಕಿ ಶ್ರೀಮತಿ ಲಿಲ್ಲಿ ಪಿವಿ ಕಾರ್ಯಕ್ರಮ ನಿರೂಪಿಸಿದರು.

Related posts

ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಖಂಡಿಸಿ ಮಾಜಿ ಡಿಸಿಎಂ ಈಶ್ವರಪ್ಪ ನೇತೃತ್ವದಲ್ಲಿ ಧರ್ಮ ರಕ್ಷಾ ಜಾಥಾ

Suddi Udaya

ಡಿ.7 ಧರ್ಮಸ್ಥಳದಲ್ಲಿ ಪದಾಧಿಕಾರಿಗಳ ಸಹಮಿಲನ ಹಾಗೂ ವ್ಯಸನ ಮುಕ್ತರ ಕುಟುಂಬೋತ್ಸವ

Suddi Udaya

ಬೆಳ್ತಂಗಡಿಯಲ್ಲಿ ಗೃಹಜ್ಯೋತಿ, ಗೃಹಲಕ್ಷ್ಮಿ ಯೋಜನೆಗೆ ಮಾಜಿ ಶಾಸಕ ವಸಂತ ಬಂಗೇರರಿಂದ ಚಾಲನೆ

Suddi Udaya

ಶಿಬಾಜೆ ಶಾಲಾ ಮಕ್ಕಳಿಗೆ ಓಣಂ ಪ್ರಯುಕ್ತ ಓಣಂ ಭೋಜನ

Suddi Udaya

ಭೀಕರ ಮಳೆಗೆ ರೆಖ್ಯ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಹಿಂಬದಿಯ ಗುಡ್ಡ ಕುಸಿತ: ಗರ್ಭಗುಡಿ , ಸುತ್ತು ಪೌಳಿಗೆ ಹಾನಿ

Suddi Udaya

ಜೂ. 23: ಮುಂಗಾರು ಪೂರ್ವ ನಿರ್ವಹಣೆಯ ಪ್ರಯುಕ್ತ ವಿದ್ಯುತ್ ನಿಲುಗಡೆ

Suddi Udaya
error: Content is protected !!