25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ಅ.ಹಿ.ಪ್ರಾ. ಶಾಲೆಯಲ್ಲಿ ಶಿಕ್ಷಕ – ರಕ್ಷಕ ಸಂಘದ ಸಭೆ

ಧರ್ಮಸ್ಥಳ: ಶ್ರೀ ಮಂಜುನಾಥ ಸ್ವಾಮಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕ – ರಕ್ಷಕ ಸಂಘದ ಸಭೆಯು ಜು.11ರಂದು ನಡೆಯಿತು.


ಮುಖ್ಯ ಅತಿಥಿಯಾಗಿ ಶ್ರೀ ಧ.ಮಂ.ಎಜುಕೇಶನ್ ಸೊಸೈಟಿ ಉಜಿರೆ ಇಲ್ಲಿಯ ವಿದ್ಯಾರ್ಥಿ ಕ್ಷೇಮ ಪಾಲನಾ ಅಧಿಕಾರಿ ಧನ್ಯ ಕುಮಾರ್ ಇವರು ಭಾಗವಹಿಸಿದ್ದರು .


ಪೋಷಕರನ್ನು ಕುರಿತು ಮಾತನಾಡಿದ ಇವರು ಮಕ್ಕಳಿಗೆ ಮನೆಯಿಂದಲೇ ಶಿಸ್ತಿನ ಬಗ್ಗೆ ಪಾಠವನ್ನು ಹೇಳಬೇಕು. ಪ್ರತಿಯೊಂದು ಮಗುವಿನ ಚಲನ ವಲನಗಳನ್ನು ಅರಿತು ಸೂಕ್ತ ರೀತಿಯ ಮಾರ್ಗದರ್ಶನಗಳನ್ನು ನೀಡಬೇಕು. ಮಕ್ಕಳ ಬೆಳವಣಿಗೆಯಲ್ಲಿ ಪೋಷಕರ ಪಾತ್ರ ಬಹಳ ಮುಖ್ಯವಾಗಿರುತ್ತದೆ ಎಂದರು.

ಜೋಸೆಫ್ ಇವರು ಶಾಲಾ ಸಮಗ್ರ ಮಾಹಿತಿಯನ್ನು ನೀಡಿದರು. 2025-26ನೇ ಶೈಕ್ಷಣಿಕ ವರ್ಷದ ಶಿಕ್ಷಕ ರಕ್ಷಕ ಸಂಘದ ನೂತನ ಅಧ್ಯಕ್ಷ ರಾಜೇಶ್, ಶಾಲಾ ಮುಖ್ಯೋಪಾಧ್ಯಾಯ ಕಮಲ್ ತೇಜ್ ರಜಪೂತ್, ಹಿರಿಯ ಶಿಕ್ಷಕರಾದ ಜೋಸೆಫ್, ಶ್ರೀಮತಿ ಶ್ರೀಜಾ ಎ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.


ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಶ್ರೀಮತಿ ಪೂರ್ಣಿಮಾ ಕೆ. ಎಂ ನಿರೂಪಿಸಿದ ಕಾರ್ಯಕ್ರಮಕ್ಕೆ ಶ್ರೀಮತಿ ಕಾವ್ಯ ಸ್ವಾಗತಿಸಿ ಶ್ರೀಮತಿ ಉಷಾ ಧನ್ಯವಾದವಿತ್ತರು .

Related posts

ಗುರುವಾಯನಕೆರೆ: ಸ್ಕೂಟಿ- ಬೈಕ್ ಮುಖಾಮುಖಿ ಡಿಕ್ಕಿ,ಸವಾರರಿಬ್ಬರಿಗೆ ಗಂಭೀರ ಗಾಯ,ಆಸ್ಪತ್ರೆಗೆ ದಾಖಲು

Suddi Udaya

ಬುರುಡೆ ಚಿನ್ನಯ್ಯ ಕೋರ್ಟ್ ಗೆ ತಂದಿದ್ದ ಬುರುಡೆ ಪೋಟೋ ರಿವಿಲ್

Suddi Udaya

ಬೆಳ್ತಂಗಡಿ ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ನೂತನ ಮಹಿಳಾ ವೇದಿಕೆ ಪದಾಧಿಕಾರಿಗಳ ಆಯ್ಕೆ

Suddi Udaya

ಗಾಳಿ- ಮಳೆಗೆ ಕೋಳಿ ಸಾಕಾಣಿಕೆಯ ಶೆಡ್ ಕುಸಿದು ಬಿದ್ದು ಸಾವಿರಾರು ಕೋಳಿಗಳ ಸಾವು,ಲಕ್ಷಾಂತರ ರೂ ನಷ್ಟ

Suddi Udaya

ಮುಂಬೈ – ಬೆಂಗಳೂರಿನಂತಹ ಮಹಾನಗರಗಳಲ್ಲಿ ಲಭ್ಯವಿದ್ದಂತಹ ವಿವಿಧ ಕೋರ್ಸ್ ಗಳೆಲ್ಲಾ ಇದೀಗ ಪುತ್ತೂರಿನಲ್ಲೂ: VFX, AI, SAP ಕೋರ್ಸ್ ಗಳಿಗೆ ಲಕ್ಷಾಂತರ ರೂಪಾಯಿ ವ್ಯಯಿಸಬೇಕಿಲ್ಲ; ಅತೀ ಕಡಿಮೆ ಶುಲ್ಕದೊಂದಿಗೆ ನುರಿತ ತಂಡದಿಂದ ತರಬೇತಿ ನೀಡಲಿದೆ ವಿದ್ಯಾಮಾತಾ

Suddi Udaya

ಕುವೆಟ್ಟು ಸ.ಉ.ಹಿ.ಪ್ರಾ.ಶಾಲೆಯಲ್ಲಿ ಮಕ್ಕಳ ದಿನಾಚರಣೆ: ಹೆತ್ತವರ ಪೋಷಕರ/ಮಹಾಸಭೆ

Suddi Udaya
error: Content is protected !!