23.3 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿತಾಲೂಕು ಸುದ್ದಿ

ಅಳದಂಗಡಿ ಆಮಂತ್ರಣ ಸೇವಾ ಪ್ರತಿಷ್ಠಾನದ ನೂತನ ಕಚೇರಿ ಉದ್ಘಾಟನೆ : ಪತ್ರಕರ್ತರಿಗೆ, ನಿವೃತ್ತ ಆಶಾ ಕಾರ್ಯಕರ್ತೆಯರಿಗೆ ಹಾಗೂ ಸಾಧಕರಿಗೆ ಸನ್ಮಾನ – ಯಕ್ಷಗಾನ ಕಲಿಕಾ ತರಗತಿಗೆ ಚಾಲನೆ ಹಾಗೂ ಅಮಂತ್ರಣ ಸಾಂಸ್ಕೃತಿಕ ಸಾಹಿತ್ಯ ವೇದಿಕೆ ವತಿಯಿಂದ ‘ಕವಿಗೋಷ್ಠಿ

ಬೆಳ್ತಂಗಡಿ: ಆಮಂತ್ರಣ ಸೇವಾ ಪ್ರತಿಷ್ಠಾನ ಅಳದಂಗಡಿ ಇದರ ವತಿಯಿಂದ ಪ್ರತಿಷ್ಠಾನದ ನೂತನ ಕಚೇರಿ ಉದ್ಘಾಟನೆ, ಸೇವಾ ಪ್ರತಿಷ್ಠಾನ ಉದ್ಘಾಟನೆ, ಪತ್ರಕತ೯ರಿಗೆ ಸನ್ಮಾನ ಹಾಗೂ ಕವಿಗೋಷ್ಠಿ, ಹಾಡು, ಯಕ್ಷಗಾನ ತರಬೇತಿ ತರಗತಿ ಉದ್ಘಾಟನೆ ಮೊದಲಾದ ಕಾಯ೯ಕ್ರಮ ಜು.13 ರಂದು ಪ್ರತಿಷ್ಠಾನದ ಅಧ್ಯಕ್ಷ ವಿಜಯ್ ಕುಮಾರ್ ಜೈನ್ ಇವರ ನೇತೃತ್ವದಲ್ಲಿ ಅಳದಂಗಡಿ ಮೌಂಟ್ ಕಾರ್ಮೆಲ್ ಕಾಂಪ್ಲೆಕ್ಸ್ ನಲ್ಲಿ ಆದ್ದೂಯಾಗಿ ನಡೆಯಿತು.

ಪ್ರತಿಷ್ಠಾನದ ನೂತನ ಕಚೇರಿಯನ್ನು ಶಾಸಕ ಹರೀಶ್ ಪೂಂಜ ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು.
ಕಾಯ೯ಕ್ರಮದ ಅಧ್ಯಕ್ಷತೆ ವಹಿಸಿದ್ದ ಆಮಂತ್ರಣ ಸೇವಾ ಪ್ರತಿಷ್ಠಾನದ ಗೌರವಾಧ್ಯಕ್ಷ ಶಿವಪ್ರಸಾದ್ ಅಜಿಲ ಅವರು ಮಾತನಾಡಿ, ಇದೊಂದು ಅರ್ಥಪೂರ್ಣ ಕಾರ್ಯಕ್ರಮ. ಸಮಾಜದಲ್ಲಿ ಸಹಾಯಹಸ್ತ ಕಲ್ಪಿಸುವಲ್ಲಿ ಸೇವಾ ಪ್ರತಿಷ್ಠಾನದ ಇತರರಿಗೆ ಮಾದರಿಯಾಗಿದೆ. ಇಂತಹ ಕಾರ್ಯಕ್ರಮಗಳು ಸ್ವಸ್ಥ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗಲಿದೆ ಎಂದು ಹೇಳಿದರು.

ಯಕ್ಷಗಾನ ಕಲಿಕಾ ತರಗತಿಗೆ ಚೆಂಡೆ ಬಾರಿಸುವ ಮೂಲಕ ಚಾಲನೆ ನೀಡಿದ ಗುರುವಾಯನಕೆರೆ ಎಕ್ಸಲ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ
ಸುಮಂತ್ ಕುಮಾರ್ ಜೈನ್ ಮಾತನಾಡಿ, ನಾವು ಉತ್ತಮ ಕೆಲಸವನ್ನು ಮಾಡಿದಲ್ಲಿ ಸಮಾಜ ಎಂದಿಗೂ ಗುರುತಿಸುತ್ತದೆ ಎಂಬುದಕ್ಕೆ ಆಮಂತ್ರಣ ಪ್ರತಿಷ್ಠಾನ ಮಾದರಿ. ಆಮಂತ್ರಣ ಪ್ರತಿಷ್ಠಾನ ಸೇವಾ ಚಟುವಟಿಕೆ ಮಾಡುವವರನ್ನು ಗುರುತಿಸುವ ಕಾರ್ಯವಾಗಿದೆ. ಎಕ್ಸೆಲ್ ಸಂಸ್ಥೆ ಸಂಪೂರ್ಣ ಪ್ರತಿಷ್ಠಾನದ ಜತೆಗಿದೆ. ಉತ್ತಮ ವ್ಯಕ್ತಿತ್ವವುಳ್ಳ ಮಕ್ಕಳನ್ನು ಸಮಾಜಕ್ಕೆ ನೀಡುವುದು ಪೋಷಕರ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು. ಪ್ರತಿಷ್ಠಾನದ ವತಿಯಿಂದ ರಾಜ್ಯಮಟ್ಟದ ಕಾರ್ಯಕ್ರಮ ಹಮ್ಮಿಕೊಂಡರೆ ಎಕ್ಸಲ್ ಶಿಕ್ಷಣ ಸಂಸ್ಥೆಗಳ ವತಿಯಿಂದ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಬೆಳ್ತಂಗಡಿ ಲಯನ್ಸ್ ಕ್ಲಬ್ ನಿಕಟಪೂರ್ವ ಅಧ್ಯಕ್ಷ ಲ. ದೇವದಾಸ್ ಎಸ್.ಶೆಟ್ಟಿ ಹಿಬರೋಡಿ
ಅವರು ಮಾತನಾಡಿ, ಪ್ರತಿಷ್ಠಾನದ ಸಾಮಾಮುಖಿ ಕಾಯ೯ಕ್ರಮಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಹಿರಿಯರಾದ ಬಿ.ಭುಜಬಲಿ ಧಮ೯ಸ್ಥಳ ಮಾತನಾಡಿ,
ಆಮಂತ್ರಣ ತಂಡ ಎಲ್ಲ ಕ್ಷೇತ್ರದವರನ್ನು ಆಯ್ಕೆ ಮಾಡಿ ಗೌರವಿಸಿರುವುದು ಅಭಿನಂದನಾರ್ಹ, ಪ್ರತಿಭೆಗೆ ವೇದಿಕೆ ಕಲ್ಪಿಸಿದ ಪ್ರತಿಷ್ಠಾನ ಆಮಂತ್ರಣ. ಎಲ್ಲರ ಸಹಕಾರದಿಂದ ರಾಜ್ಯಮಟ್ಟದಲ್ಲಿ ಗುರುತಿಸಿಕೊಳ್ಳಲು ಸಾಧ್ಯ. ಹಣ ಇದ್ದರೆ ಸಾಲದು, ಹಣವನ್ನು ಯಾವ ರೂಪದಲ್ಲಿ ವಿನಿಯೋಗಿಸಿಕೊಳ್ಳಬೇಕು ಎಂಬುದು ಮುಖ್ಯವಾಗಿದೆ ಎಂದು ಹೇಳಿದರು. ಮಹಿಳೆಯರಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿ ಅವರಿಗೆ ಉತ್ತೇಜನ ನೀಡುತ್ತಿರುವುದಕ್ಕೆ ಅಭಿನಂದನೆ ಸಲ್ಲಿಸಿದರು.

ಸೇವಾ ಪ್ರತಿಷ್ಠಾನವನ್ನು ಉದ್ಘಾಟನೆ ಮಾಡಿದ ಉದ್ಯಮಿ ಹಾಗೂ ಪ್ರತಿಷ್ಠಾನದ ಗೌರವ ಸಲಹೆಗಾರ ಕಿರಣ್ ಡಿ. ಪುಷ್ಪಗಿರಿ ಅವರು ಮಾತನಾಡಿ,ವಿವಿಧ ಆಯಾಮಗಳಲ್ಲಿರುವ ಕ್ಷೇತ್ರದಲ್ಲಿರುವವರನ್ನು ಜತೆ ಸೇರಿಸಿ ಸೇವಾ ಪ್ರತಿಷ್ಠಾನವನ್ನು ವಿಜಯ್ ಕುಮಾರ್ ಸ್ಥಾಪಿಸಿದ್ದಾರೆ. ಆಮಂತ್ರಣ ಪ್ರತಿಷ್ಠಾನ ಸಮಾಜಕ್ಕೆ ಎಲ್ಲ ರೀತಿಯ ಸೇವೆ ದೊರೆಕಲಿ ಎಂದು ಹಾರೈಸಿದರು.

ಪತ್ರಕರ್ತರಿಗೆ ಸನ್ಮಾನ:1
ತಾಲೂಕಿನ ಹಿರಿಯ ಪತ್ರಕರ್ತರಾದ ನಾಭಿರಾಜ್ ಪೂವಣೆ, ಬಿ.ಎಸ್.ಕುಲಾಲ್, ಮನೋಹರ್ ಬಳಂಜ, ಜಾರಪ್ಪ ಪೂಜಾರಿ ಬೆಳಾಲು, ಚೈತ್ರೇಶ್ ಇಳಂತಿಲ ಅವರನ್ನು ಸಮ್ಮಾನಿಸಲಾಯಿತು.
ನಿವೃತ್ತ ಆಶಾ ಕಾರ್ಯಕರ್ತೆಯರಿಗೆ ಸನ್ಮಾನ:
ನಿವೃತ್ತ ಆಶಾಕಾರ್ಯಕರ್ತೆಯರಾದ ಅಳದಂಗಡಿತ ಪದ್ಮಿನಿ ಜೆ. ಶೆಟ್ಟಿ, ಕರಂಬಾರಿನ ಗುಲಾಬಿ ಶೆಟ್ಟಿ, ತೆಂಕಕಾರಂದೂರಿನ ಗುಲಾಬಿ ಎಂ.ಎನ್. ಇವರನ್ನು ಸನ್ಮಾನಿಸಲಾಯಿತು.

ಸಾಧಕರಿಗೆ ಸನ್ಮಾನ:
ವ್ಯಾಯಾಮ ಶಾಲೆ ನಡೆಸುತ್ತಿದ್ದ ಹಾಗೂ ನೀರಿನ ತಜ್ಞರಾಗಿ 8000 ಕಡೆ ನೀರು ಗುರುತಿಸಿರುವ ಅಳದಂಗಡಿಯ ಸುಲೇಮಾನ್ ಶಾಫಿ, ಚಿತ್ರಕಲಾವಿದೆ ರಾಜೇಶ್ವರಿ ಕೆ.ಆಚಾರ್ಯ ಗುರುವಾಯನಕೆರೆ, ಭಜನಾ ಕಲಾವಿದ ಮಂಜುನಾಥ ಆಚಾರ್ಯ ಅಳದಂಗಡಿ, ಯಕ್ಷಗಾನ ಕಲಾವಿದ, ಶಿಕ್ಷಕ, ಸ್ತ್ರೀವೀಷಧಾರಿ ಪ್ರಭಾಕರ ಶೆಟ್ಟಿ ತೆಂಕಕಾರಂದೂರು ಅವರನ್ನು ಸಮ್ಮಾನಿಸಲಾಯಿತು.
‌‌ಪ್ರತಿಷ್ಠಾನದ ಅಧ್ಯಕ್ಷ ವಿಜಯ್ ಕುಮಾರ್ ಜೈನ್ ಸ್ವಾಗತಿಸಿ,
ನಿರೂಪಿಸಿದರು. ಟ್ರಸ್ಟಿ ಅರುಣ್ ಅರುವ, ಸದಾನಂದ ಬಿ. ಕುದ್ಯಾಡಿ, ಪ್ರತಿಷ್ಠಾನದ ಪದಾಧಿಕಾರಿಗಳು ಸಹಕರಿಸಿದರು.

ಕವಿಗೋಷ್ಠಿ:
ಅಮಂತ್ರಣ ಸಾಂಸ್ಕೃತಿಕ ಸಾಹಿತ್ಯ ವೇದಿಕೆ ಕರ್ನಾಟಕ ಇದರ ವತಿಯಿಂದ ‘ಕವಿಗೋಷ್ಠಿ’
ವಿಂಧ್ಯಾ ಎಸ್.ರೈ ಕಡೇಶಿವಾಲಯ ಉಪಾಧ್ಯಕ್ಷರು ಆಮಂತ್ರಣ ಜಿಲ್ಲಾ ವೇದಿಕೆ ಇವರ ಅಧ್ಯಕ್ಷತೆಯಲ್ಲಿ ಜರಗಿತು.
ಕವಿಗಳಾದ ಶ್ಯಾಮ್ ಪ್ರಸಾದ್ ಭಟ್, ತೆಳ್ಳಾರು ಕಸ್ತೂರಿ ಜಯರಾಮ್, ಕಾವೂರು, ಪರ್ಣಶಾ ತಿರುಮಲೇಶ್ ಶಿಶಿಲ, ಸ್ವಾತಿ ಸೂರಜ್ ಶಿಶಿಲ, ಸುಮಂಗಲ ಕಿಣಿ ಮೂಡಬಿದ್ರೆ, ವನಜಾ ಜೋಶಿ ಬೆಳ್ತಂಗಡಿ, ಅಕ್ಷತಾ ಅಡೂರ್
ನಿರೀಕ್ಷಿತಾ ಮಂಗಳೂರು, ವಿದ್ಯಾಶ್ರೀ ಅಡೂರು, ಆಶಾ ಅಡೂರು,
ಸುಮಾ ಉಜಿರೆ, ಅನಿತಾ ಶೆಟ್ಟಿ ಮೂಡಬಿದ್ರೆ, ಸುಮತಿ.ಪಿ ಕಾರ್ಕಳ, ಅನ್ನಪೂರ್ಣ ಶ್ಯಾನುಬೋಗ್ ಅಂಬಲಪಾಡಿ, ರಶ್ಮಿತಾ ಸುರೇಶ್ ಜೋಗಿಬೆಟ್ಟು, ಧನ್ಯಶ್ರೀ ಬೆಳಾಲು ಶಾಲಿನಿ ಕೆಮ್ಮಣ್ಣು , ಮಾಲತಿ ರಮೇಶ್ ಕೆಮ್ಮಣ್ಣು, ಭಾರತಿ ಪರ್ಕಳ ಭಾಗವಹಿಸಿದ್ದರು.

  1. ↩︎

Related posts

ಪದ್ಮುಂಜ: ವಾಹನ ತಡೆದು ಅವಾಚ್ಯವಾಗಿ ನಿಂದಿಸಿ ಹಲ್ಲೆ : ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

Suddi Udaya

ಶಿಶಿಲ ಪೇಟೆಯಲ್ಲಿ ಒಂಟಿ ಸಲಗ ಸಂಚಾರ

Suddi Udaya

ಇಂದಿನಿಂದ ಬೆಳ್ತಂಗಡಿಯಲ್ಲಿ ಭಾರಿ ರಿಯಾಯಿತಿಯಲ್ಲಿ ಬಟ್ಟೆಗಳ ಮಾರಾಟ

Suddi Udaya

ಶಿಕ್ಷಕ ದಿನಾಚರಣೆಯ ಸಂದರ್ಭದಲ್ಲಿ ಕುಂದಾಪುರದ ಪ.ಪೂ. ಕಾಲೇಜಿನ ಪ್ರಾಚಾರ್ಯ ರಾಮಕೃಷ್ಣ ಅವರ ಆಯ್ಕೆಯನ್ನು ತಡೆ ಹಿಡಿದದ್ದು ಶಿಕ್ಷಕ ಸಮುದಾಯಕ್ಕೆ ಮಾಡಿದ ಅವಮಾನ: ಪ್ರತಾಪಸಿಂಹ ನಾಯಕ್

Suddi Udaya

ಮುಂಡ್ರುಪಾಡಿ ವಸಂತಿರವರ ಮನೆಯ ಮೇಲೆ ಬಿದ್ದ ಮರ: ಧರ್ಮಸ್ಥಳ ಘಟಕದ ಶೌರ್ಯ ವಿಪತ್ತು ನಿರ್ವಹಣಾ ತಂಡದಿಂದ ತೆರವು ಕಾರ್ಯ

Suddi Udaya

ಮತ ಚಲಾಯಿಸಿದ ಜಿಲ್ಲಾ ಚುನಾವಣಾಧಿಕಾರಿ ಮುಲ್ಲೈ ಮುಹಿಲನ್

Suddi Udaya
error: Content is protected !!