38.6 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿ

ಕಲ್ಪವೃಕ್ಷ ಜ್ಞಾನ ವಿಕಾಸ ಕೇಂದ್ರದ ಉದ್ಘಾಟನಾ ಸಮಾರಂಭ

ಬೆಳ್ತಂಗಡಿ :ಬೆಳ್ತಂಗಡಿ ತಾಲೂಕು ಬೆಳ್ತಂಗಡಿ ವಲಯದ ಕಳಿಯ ವಿಭಾಗದ ಗೇರುಕಟ್ಟೆ ಹಾಲು ಉತ್ಪಾದಕರ ಸಹಕಾರಿ ಸಂಘದ ಸಭಾಂಗಣದಲ್ಲಿ ಕಲ್ಪವೃಕ್ಷ ಜ್ಞಾನ ವಿಕಾಸ ಕೇಂದ್ರದ ಉದ್ಘಾಟನಾ ಸಮಾರಂಭ ಜು. 13ರಂದು ನಡೆಯಿತು. ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರಾದ ಜನಾರ್ದನ ಗೌಡ ರವರು ದೀಪ ಬೆಳಗಿಸಿ ಮಹಿಳೆಯರು ನಾಲ್ಕು ಗೋಡೆಯಿಂದ ಹೊರ ಬಂದು ಸಮಾಜದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಉತ್ತಮ ಸಾಧನೆ ಮಾಡಬೇಕಾದರೆ ಮಾತೃಶ್ರೀ ಹೇಮಾವತಿ ಅಮ್ಮನವರು ಪ್ರಾರಂಭಿಸಿದ ಜ್ಞಾನ ವಿಕಾಸ ಕೇಂದ್ರದಿoದ ಎಂದರು

. ತಾಲೂಕಿನ ಗೌರವಾನ್ವಿತ ಯೋಜನಾಧಿಕಾರಿಯವರಾದ ಯಶೋಧರ ಸರ್ ರವರು ಜ್ಞಾನ ವಿಕಾಸ ಕೇಂದ್ರವು ಮಹಿಳೆಯರಿಗೆ ಉತ್ತಮ ಮಾಹಿತಿ ಯೊಂದಿಗೆ ಆತ್ಮ ಸ್ಥೈರ್ಯ ವನ್ನು ನೀಡುತ್ತದೆ. ಕೇಂದ್ರವು ಉತ್ತಮ ರೀತಿಯಲ್ಲಿ ಮುಂದುವರಿಯಲು ಆಸಕ್ತಿ ಮುಖ್ಯವಾಗಿರುತ್ತದೆ ಎಲ್ಲರೂ ಕೇಂದ್ರದ ಸಭೆಯಲ್ಲಿ ಆಸಕ್ತಿ ಯಿಂದ ಭಾಗವಹಿಸುವಂತೆ ತಿಳಿಸಿದರು . ಒಕ್ಕೂಟದ ಅಧ್ಯಕ್ಷ ರಾದ ಶ್ರೀಮತಿ ಸುಬಾಷಿಣಿ , ಗ್ರಾಮ ಪಂಚಾಯತ್ ಸದಸ್ಯರಾದ ಕುಸುಮ ರವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕೇಂದ್ರದ ದಾಖಲಾತಿ ಯನ್ನು ಹಸ್ತಾಂತರಿಸಲಾಯಿತು. ಕಾರ್ಯಕ್ರಮದಲ್ಲಿ ವಲಯ ಮೇಲ್ವಿಚಾರಕರಾದ ರವಿ ಉಪಸ್ಥಿತರಿದ್ದರು. ಜ್ಞಾನ ವಿಕಾಸ ಸಮನ್ವಯಧಿಕಾರಿ ಮಧುರಾವಸಂತ್ ನಿರೂಪಿಸಿದ ಕಾರ್ಯಕ್ರಮದಲ್ಲಿ ಸೇವಾಪ್ರತಿನಿಧಿ ಸೌಮ್ಯ ಸ್ವಾಗತಿಸಿ ತಿಲೋತ್ತಮ ರವರು ಧನ್ಯವಾದ ನೀಡಿದರು.

Related posts

ಪಣಕಜೆ ಹೆದ್ದಾರಿಯಲ್ಲಿ ವಿದ್ಯುತ್ ವಯರ್ ಗೆ ಜೆಸಿಬಿ ತಾಗಿ ವಾಹನ ಸಂಚಾರ ಕ್ಕೆ ಆಡಚಣೆ

Suddi Udaya

ದಿಡುಪೆ ಶ್ರೀ ವಿದ್ಯಾಗಣಪತಿ ಸೇವಾ ಸಮಿತಿಯಿಂದ ಗಣೇಶೋತ್ಸವ: ಧಾರ್ಮಿಕ ಸಭೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ

Suddi Udaya

ರಾಜ-ಮಹಾರಾಜ ಜೋಡುಕರೆ ಕಂಬಳ: ಮುಳಿಯ ಜ್ಯುವೆಲ್ಸ್ ನಿಂದ ಆಭರಣಗಳ ಪ್ರದರ್ಶನ: ಮುಳಿಯ ಪ್ರಾಪರ್ಟೀಸ್‌ ಬಗ್ಗೆ ಮಾಹಿತಿ ಕೇಂದ್ರ

Suddi Udaya

ಬೆಳ್ತಂಗಡಿ ಪಟ್ಲ ಫೌಂಡೇಷನ್ ಘಟಕದ ವತಿಯಿಂದ ಗುರುವಾಯನಕೆರೆ ನವಶಕ್ತಿ ಮೈದಾನದಲ್ಲಿ “ಯಕ್ಷ ಸಂಭ್ರಮ” : ಪೂರ್ವಭಾವಿ ಸಭೆ

Suddi Udaya

ಎಸ್.ಡಿ.ಎಂ ನ್ಯಾಚುರೋಪತಿ ಕಾಲೇಜಿಗೆ ಡಿಸ್ಟಿಂಕಷನ್ ಗಳ ಮಹಾಪೂರ

Suddi Udaya

ವಲಯ ಮಟ್ಟದ ಕ್ರೀಡಾಕೂಟ: ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಿಗೆ ಪ್ರಶಸ್ತಿ

Suddi Udaya
error: Content is protected !!