September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ದಿಡುಪೆ ಶ್ರೀ ವಿದ್ಯಾಗಣಪತಿ ಸೇವಾ ಸಮಿತಿಯಿಂದ ಗಣೇಶೋತ್ಸವ: ಧಾರ್ಮಿಕ ಸಭೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ

ಮಲವಂತಿಗೆ: ಇಲ್ಲಿಯ ದಿಡುಪೆ ಶ್ರೀ ವಿದ್ಯಾಗಣಪತಿ ಸೇವಾ ಸಮಿತಿಯಿಂದ 39ನೇ ವರ್ಷದ ಗಣೇಶೋತ್ಸವದ ಧಾರ್ಮಿಕ ಸಭೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವು ನಡೆಯಿತು.

ನಾರಾಯಣಗುರು ಕಾಲೇಜು ಕನ್ನಡ ಉಪನ್ಯಾಸಕ ಹಾಗೂ ಎಬಿವಿಪಿ ಮಂಗಳೂರು ವಿಭಾಗ ಪ್ರಮುಖರು ಕೇಶವ ಬಂಗೇರ ಗೇರುಕಟ್ಟೆ ಧಾರ್ಮಿಕ ಉಪನ್ಯಾಸದಲ್ಲಿ ತಾಯಂದಿರೊಂದಿಗೆ ಮಕ್ಕಳ ಪಾತ್ರ ಅತೀ ಮುಖ್ಯ ಹಾಗೂ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಮಕ್ಕಳಿಗೆ ಜಾಗೃತಿ ಮೂಡಿಸಬೇಕು. ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಕ್ಕಳನ್ನು ವಿವಿಧ ಕೆಲಸ ಕಾರ್ಯದಲ್ಲಿ ತೊಡಗಿಸಿಕೊಳ್ಳುವಂತೆ ಪೋಷಕರು ತಿಳಿಸಬೇಕು, ಮೊಬೈಲ್ ಬಳಕೆಯಿಂದ ಈಗಿನ ಮಕ್ಕಳು ಧಾರ್ಮಿಕ ಕಾರ್ಯಕ್ರಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಸಂಖ್ಯೆ ಕಡಿಮೆ ಹಾಗುತ್ತಿದೆ, ಮಕ್ಕಳ ದಿಕ್ಕು ತಪ್ಪುವಂತೆ ಆಗುತ್ತದೆ, ಪೋಷಕರಿಂದಲೇ ಜಾಗೃತಿ ಮೂಡಿಸುವ ಕಾರ್ಯ ಮುಖ್ಯ, ಇನ್ನಿತರ ಧಾರ್ಮಿಕ ಭಾಷಣದಲ್ಲಿ ತಿಳಿಸಿದರು.

ಧರ್ಮಸ್ಥಳ ಜಮಾ ಉಗ್ರಾಣ ನಿವೃತ್ತ ಮುತ್ಸದ್ದಿ ಬಿ ಭುಜಬಲಿ ಧರ್ಮಸ್ಥಳ ಅಧ್ಯಕ್ಷತೆಯನ್ನು ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಧಾರ್ಮಿಕ ಮುಖಂಡ ಡಿ.ಕಿರಣ್ ಚಂದ್ರ ಪುಷ್ಪಗಿರಿ , ಕನ್ಯಾಡಿ ಸೇವಾ ಭಾರತಿ ಅಧ್ಯಕ್ಷೆ ಶ್ರೀಮತಿ ಸ್ವರ್ಣ ಗೌರಿ ಧರ್ಮಸ್ಥಳ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಹಿರಿಯ ಪ್ರಾರ್ಥಮಿಕ ಶಾಲಾ ಕಾಂಚನ ಮುಖ್ಯ ಶಿಕ್ಷಕ ಲಕ್ಷ್ಮಣ ಗೌಡ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಶ್ರೀ ವಿದ್ಯಾಗಣಪತಿ ಸೇವಾ ಸಮಿತಿಯ ಅಧ್ಯಕ್ಷ ತೀಕ್ಷಿತ್ ಕೆ.ಕಲ್ಬೆಟ್ಟು, ಬಂಗಾಡಿ ಸಿಎ ಬ್ಯಾಂಕ್ ನಿರ್ದೇಶಕ ಶೀನಪ್ಪ ಗೌಡ ನೇತ್ರಕೊಡoಗೆ, ನಿವೃತ್ತ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಗಂಗಯ್ಯ ಎಮ್ ಕೆ ಕೊಲ್ಲಾಲು , ಸಮಿತಿಯ ಗೌರವ ಅಧ್ಯಕ್ಷರಾಗಿ ಕರಿಯ ಗೌಡ, ಉಜಿರೆ ಇ ಮ್ಯಾಕ್ಸ್ ಕಂಪ್ಯೂಟರ್ ಕೇಂದ್ರ ಮುಖ್ಯಸ್ಥೆ ಶ್ರೀಮತಿ ಜ್ಯೋತಿ ಲಕ್ಷ್ಮೀ ಉಪಸ್ಥಿತರಿದ್ದರು.

ನಂತರ ಸಾರ್ವಜನಿಕ ಕ್ಷೇತ್ರದ ಕೆಲಸ ಕಾರ್ಯದಲ್ಲಿ ನಿರಂತರ ತೊಡಗಿಸಿಕೊಂಡವರಿಗೆ ಗೌರವಾರ್ಪಣೆ ಮಾಡಿದರು.


ಸಮಿತಿಯ ಉಪಾಧ್ಯಕ್ಷ ರಮೇಶ್ ಗೌಡ ವಿದ್ಯಾನಗರ ಸ್ವಾಗತಿಸಿ , ಕಾರ್ಯದರ್ಶಿ ಜಯಂತ ಹೆಡ್ಗೆ ಹೊಸತೋಟ ಕಾರ್ಯಕ್ರಮ ನಿರೂಪಿಸಿದರು ಮತ್ತು ಸಮಿತಿ ಅಧ್ಯಕ್ಷ ತೀಕ್ಷಿತ್ ಕೆ ಕಲ್ಬೆಟ್ಟು ವಂದಿಸಿದರು.

Related posts

ಪಟ್ರಮೆ : ರೂ. 40 ಲಕ್ಷ ವೆಚ್ಚದ ಉಳಿಯ ಬೀಡಿನ ಕಾಲು ಸೇತುವೆಗೆ ಶಿಲಾನ್ಯಾಸ

Suddi Udaya

ಉಜಿರೆ ರುಡ್ ಸೆಟ್ ಸಂಸ್ಥೆಯಲ್ಲಿ ಇಲೆಕ್ಟ್ರಿಕಲ್ ಮೋಟಾರು ರಿವೈಂಡಿಂಗ್ ಮತ್ತು ಪಂಪ್ ಸೆಟ್ ರಿಪೇರಿ ತರಬೇತಿಯ ಸಮಾರೋಪ

Suddi Udaya

ಬೆಳ್ತಂಗಡಿ ಭಾರತೀಯ ಮಜ್ದೂರ್ ಸಂಘದ ಕಚೇರಿಗೆ ರಾಜ್ಯ ಪ್ರಧಾನ ಕಾರ್ಯದರ್ಶಿ ವಿಶ್ವನಾಥ್ ಭೇಟಿ

Suddi Udaya

ಧರ್ಮಸ್ಥಳ: ಉಚಿತ ಫೂಟ್ ಫಲ್ ಥೆರಪಿ ಶಿಬಿರ: ಮಾಹಿತಿ ಕಾರ್ಯಗಾರ

Suddi Udaya

ಗೇರುಕಟ್ಟೆ: ಕಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾಗಿ ವಸಂತ ಮಜಲು, ಉಪಾಧ್ಯಕ್ಷರಾಗಿ ರಾಜ್ ಪ್ರಕಾಶ್ ಶೆಟ್ಟಿ

Suddi Udaya

ಪದ್ಮುಂಜ: ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ

Suddi Udaya
error: Content is protected !!