25.8 C
ಪುತ್ತೂರು, ಬೆಳ್ತಂಗಡಿ
March 6, 2026
ಅಪಘಾತಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪೊಲೀಸ್ಪ್ರಮುಖ ಸುದ್ದಿಬೆಳ್ತಂಗಡಿ

ಧರ್ಮಸ್ಥಳ: ಆಕಸ್ಮಿಕ ಗ್ಯಾಸ್ ಸೋರಿಕೆ: ಸುಟ್ಟು ಕರಕಲಾದ ಅಡುಗೆ ಮನೆ

ಧರ್ಮಸ್ಥಳ ಗ್ರಾಮದ ನಾರ್ಯ ನಿವಾಸಿ ಗ್ರಾ.ಪಂ. ಮಾಜಿ ಅಧ್ಯಕ್ಷೆ ಗೀತಾ ದಾಮೋದ‌ರ್ ಆಚಾರ್ಯ ಮನೆಯಲ್ಲಿ ಆಕಸ್ಮಿಕವಾಗಿ ಗ್ಯಾಸ್ ಸೋರಿಕೆಯಾಗಿ ಅಡುಗೆ ಮನೆ ಸುಟ್ಟು ಹೋಗಿರುವ ಘಟನೆ ಜು.13ರಂದು ಮುಂಜಾನೆ ನಡೆದಿದೆ.

ಮನೆಯಲ್ಲಿ ಪೂಜಾ ಕಾರ್ಯಕ್ರಮ ಇದ್ದ ಕಾರಣ ಅನೇಕ ಕುಟುಂಬಸ್ಥರು ಪಾಲ್ಗೊಂಡಿದ್ದರು. ಇವರಿಗೆ ಬೆಳಗ್ಗಿನ ಉಪಹಾರ ತಿಂಡಿ ಮಾಡಲು ಅಡುಗೆ ಕೋಣೆಗೆ ತೆರಳಿ ಗ್ಯಾಸ್ ಪರಿಶೀಲಿಸಿ ನಂತರ ಅಡುಗೆ ಮಾಡಲು ಮುಂದಾದಾಗ ಆಕಸ್ಮಿಕವಾಗಿ ಗ್ಯಾಸ್ ಸಿಲಿಂಡರ್ ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಮನೆಯಲ್ಲಿ ಇದ್ದವರು ಗೋಣಿ, ಮರಳು ಹಾಕಿದರು ಯಾವುದೇ ಪ್ರಯೋಜನವಾಗದೆ ಬೆಂಕಿ ಅಡುಗೆ ಕೋಣೆಗೆ ಆವರಿಸಿ ಅಡುಗೆ ಪರಿಕರಗಳು ಸುಟ್ಟು ಹೋಗಿದೆ.

ಘಟನಾ ಸ್ಥಳಕ್ಕೆ ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ವಿಮಲ, ಸದಸ್ಯ ಸುಧಾಕ‌ರ್ ಭೇಟಿ ನೀಡಿದ್ದಾರೆ. ಅಗ್ನಿಶಾಮಕ ದಳದವರು ಭೇಟಿ ನೀಡಿ ಬೆಂಕಿ ನಂದಿಸುವ ಕಾರ್ಯ ನಡೆಸಿದ್ದಾರೆ.

Related posts

ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಆರೋಪ: ಧರ್ಮಸ್ಥಳದ ಸಂತೋಷ್ ಆಚಾರ್ಯ ಮತ್ತು ಕೇಶವ ಪೂಜಾರಿ ಖುಲಾಸೆ

Suddi Udaya

ಸೆ. 7: ಮಡಂತ್ಯಾರುವಿನಲ್ಲಿ ವೈಭವದ ಮೊಸರು ಕುಡಿಕೆ ಉತ್ಸವ: ಸಾಧಕರಿಗೆ ಸನ್ಮಾನ,ಧಾರ್ಮಿಕ ಕಾರ್ಯಕ್ರಮ

Suddi Udaya

ಮಿತ್ತಬಾಗಿಲು: ಪ್ರಗತಿಪರ ಕೃಷಿಕ ಕೃಷ್ಣಪ್ಪ ಗೌಡ ನಿಧನ

Suddi Udaya

ಮುಂಡಾಜೆ : ಶಾಂತಿವನ – ಗಾಂಧಿಕಟ್ಟೆಯಲ್ಲಿ ಗಾಂಧಿ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಆಚರಣೆ

Suddi Udaya

ನ್ಯಾಯತರ್ಪು: ಪಲ್ಲಾದೆ ಕೆರೆಯಲ್ಲಿ ಶವ ಪತ್ತೆ

Suddi Udaya

ವೇಣೂರು: ಭಗವಾನ್ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕ : ಲೆಕ್ಕಪತ್ರ ಮಂಡನೆ, ಸ್ಮರಣಸಂಚಿಕೆ ಬಿಡುಗಡೆ

Suddi Udaya
error: Content is protected !!