23.5 C
ಪುತ್ತೂರು, ಬೆಳ್ತಂಗಡಿ
March 7, 2026
ಅಪರಾಧ ಸುದ್ದಿ

ಮುಡುಕೋಡಿ: ನಕಲಿ ದಾಖಲೆ ಸೃಷ್ಟಿಸಿ ಆಸ್ತಿ ವಂಚನೆ ಆರೋಪ: 7 ಮಂದಿ ವಿರುದ್ದ ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲು

ಬೆಳ್ತಂಗಡಿ: ನಕಲಿ ದಾಖಲೆ ಸೃಷ್ಟಿಸಿ ಆಸ್ತಿ ವಂಚನೆ ಮಾಡಿದ್ದಾರೆ ಎಂದು ಆರೋಪಿಸಿ ನೀಡಿದ ದೂರಿನಂತೆ 7 ಮಂದಿಯ ವಿರುದ್ಧ ವೇಣೂರು ಠಾಣೆಯಲ್ಲಿ ಜು.13ರಂದು ಪ್ರಕರಣ ದಾಖಲಾಗಿದೆ.
ಮುಡುಕೋಡಿ ಗ್ರಾಮದ ಕೊಳಂಗಜೆ ಮನೆ ಶೇಖರ ಪೂಜಾರಿ ಎಂಬವರು ಈ ದೂರನ್ನು ನೀಡಿದ್ದಾರೆ.
ಶ್ರೀಮತಿ ಪದ್ಮಾವತಿ , ಉದಯ, ಶ್ರೀಮತಿ ಉಷಾ, ಸುಕುಮಾರ ಶೆಟ್ಟಿ , ಶ್ರೀಮತಿ ವಿನೋದ, ‌ ಅನಿಲ್‌ ಕುಮಾರ್‌ ಶೆಟ್ಟಿ ಹಾಗೂ ಮುರುಳಿ ಕೃಷ್ಣ ಭಟ್ ಎಂಬುವವರ ವಿರುದ್ಧ ಈ ದೂರನ್ನು ನೀಡಿದ್ದಾರೆ.

ಶೇಖರ ಪೂಜಾರಿ ತಂದೆ: ದಿ.ಅಣ್ಣು ಪೂಜಾರಿ ( ಮೀನಾಕ್ಷಿ ರವರಿಂದ ಜನರಲ್‌ ಪವರ್‌ ಆಪ್‌ ಅಟರ್ನಿ ಪಡೆದುಕೊಂಡವರು) ಬೆಳ್ತಂಗಡಿ ತಾಲೂಕು ಮುಡುಕೋಡಿ ಗ್ರಾಮದ ಕೊಳಂಗಜೆ ಎಂಬಲ್ಲಿ ಸರ್ವೆ ನಂಬ್ರ 27/7ಎ1 ರಲ್ಲಿ 3.14 ಎಕ್ರೆ , 138/3ಬಿ ರಲ್ಲಿ 0.82 ಎಕ್ರೆ, , 170/3 ರಲ್ಲಿ 1.10, 170/4 ರಲ್ಲಿ 0.98 , 27/19ಎ ರಲ್ಲಿ 0.79, 27/5 ರಲ್ಲಿ 0.22, 130/3 ರಲ್ಲಿ 0.18, 130/4 ರಲ್ಲಿ 0.10, 146/2ಬಿ ರಲ್ಲಿ 0.60, 151/1ಎ1 ರಲ್ಲಿ 0.49 ಹಾಗೂ 151/2 ರಲ್ಲಿ 0.33 ರಲ್ಲಿ ಒಟ್ಟು 4.79 ಎಕ್ರೆ ಜಾಗ ಮತ್ತು ಸರ್ವೆ ನಂಬ್ರ 27/16 ರಲ್ಲಿ 0.1.20 ಎಕ್ರೆ ಸ್ಥಿರಾಸ್ತಿಯನ್ನು ಹೊಂದಿದ್ದು ಸದ್ರಿ ಸ್ಥಿರಾಸ್ಥಿಯನ್ನು ಪದ್ಮಾವತಿ ಎಂಬವರು ಶೇಖರ ಪೂಜಾರಿಯವರ ಅತ್ತೆಯಾದ ಮೀನಾಕ್ಷಿರವರ ಹೆಸರನ್ನು ತನ್ನದೇ ಹೆಸರು ಪದ್ಮಾವತಿ ಯಾನೆ ಮೀನಾಕ್ಷಿ ಎಂದು ಬಿಂಬಿಸಿ ನಕಲಿ ವ್ಯಕ್ತಿಯನ್ನು ಸೃಷ್ಟಿಸಿ ಹಾಗೂ ನಕಲಿ ದಾಖಲೆ ಸೃಷ್ಟಿಸಿ ಶೇಖರ ಪೂಜಾರಿಯವರ ಆಸ್ತಿಯನ್ನು ತನ್ನ ಹೆಸರಿಗೆ ಮಾಡಿಕೊಂಡು ನಂತರ ತನ್ನ ಮಕ್ಕಳಾದ ಉದಯ ಹಾಗೂ ಉಷಾರವರ ಹೆಸರಿಗೆ ಮಾಡಿಕೊಟ್ಟಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಬಳಿಕ ‌ಉಷಾ ಅವರು ತನಗೆ ಬಂದ ಆಸ್ತಿಯನ್ನು ಸುಕುಮಾರ್ ಶೆಟ್ಟಿಯವರಿಗೆ ಮಾರಾಟ ಮಾಡಿದ್ದು ಇದಕ್ಕೆ ಶ್ರೀಮತಿ ವಿನೋದ, ‌ ಅನಿಲ್‌ ಕುಮಾರ್‌ ಶೆಟ್ಟಿ , ಮುರುಳಿ ಕೃಷ್ಣ ಭಟ್ ಸಹಕರಿಸಿಪಿರ್ಯಾದಿದಾರರಿಗೆ ವಂಚಿಸಿ, ಮೋಸಗೊಳಿಸಿದ್ದಾರೆ ಎಂದು ದೂರು ಆರೋಪಿಸಲಾಗಿದೆ .ಇವರಲ್ಲಿ ಉದಯ ಮತ್ತು ಶ್ರೀಮತಿ ಉಷಾ ಅವರು ಬ್ಯಾಂಕ್‌ ನಿಂದ ಅಡಮಾಣ ಸಾಲ ಪಡೆದುಕೊಂಡಿರುವುದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ವೇಣೂರು ಪೊಲೀಸ್ ಠಾಣಾ ಅ.ಕ್ರ 65-2025 ಕಲಂ 319, 318(2), 318(4),336(3), 338, 340(2) BNS 2023ರಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಶೈಲ ಡಿ ಮುರುಗೋಡಪಿ ಎಸ್‌ ಐ ವೇಣೂರು ಮುಂದಿನ ತನಿಖೆ ನಡೆಸುತ್ತಿದ್ದಾರೆ.

Related posts

ಮೂರು ವರ್ಷಗಳ ಹಿಂದೆ ಶಿಬಾಜೆಯಲ್ಲಿ ನಡೆದ ಶ್ರೀಧರ ಕೊಲೆ ಪ್ರಕರಣ: ಮರು ತನಿಖೆಗೆ ಎಸ್.ಐ.ಟಿ ರಚಿಸಿ ರಾಜ್ಯ ಸರಕಾರ ಆದೇಶ

Suddi Udaya

ಸಾಮಾಜಿಕ ಜಾಲ ತಾಣದಲ್ಲಿ ಅಶ್ಲೀಲ ಸಂದೇಶವಿರುವ ಪೋಸ್ಟ್‌ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಎರಡು ಪ್ರಕರಣ ದಾಖಲು

Suddi Udaya

ಅಕ್ರಮ ಗಾಂಜಾ ಮಾರಾಟ ಇಳಂತಿಲ ನಿವಾಸಿ ಸೇರಿದಂತೆ ಇಬ್ಬರ ಬಂಧನ

Suddi Udaya

ಬೆಳ್ತಂಗಡಿ: ಮಾಲಾಡಿ ಮನೆಯಲ್ಲಿ ಚಿನ್ನಾಭರಣ ಕಳ್ಳತನ ಪ್ರಕರಣ ಇಬ್ಬರು ಆರೋಪಿಗಳನ್ನು ಬಂಧಿಸಿದ ಪುಂಜಾಲಕಟ್ಟೆ ಪೊಲೀಸರು

Suddi Udaya

ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದ ಕುಂಟಾಲಪಳಿಕೆ ನಿವಾಸಿ ಹರೀಶ್ ಆಚಾರ್ಯರ ಶವ ಬಾವಿಯಲ್ಲಿ ಪತ್ತೆ:

Suddi Udaya

ಹಲವಾರು ಮೃತದೇಹ ಹೂತು ಹಾಕಿದ ದೂರು ಪ್ರಕರಣ: ಧರ್ಮಸ್ಥಳ ಗ್ರಾ.ಪಂ.ಯಿಂದ ದಾಖಲೆ ಪಡೆದ ಎಸ್ ಐಟಿ

Suddi Udaya
error: Content is protected !!