ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಪುದುವೆಟ್ಟು ಶ್ರೀ ಧ.ಮಂ. ಅ.ಹಿ.ಪ್ರಾ. ಶಾಲೆಯಲ್ಲಿ ಗಿಡಮೂಲಿಕೆಗಳ ಮಹತ್ವದ ಬಗ್ಗೆ ಕಿರು ಉಪನ್ಯಾಸ

ಪುದುವೆಟ್ಟು : ಇಲ್ಲಿಯ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾಷಾ ಮತ್ತು ಸಾಹಿತ್ಯ ಸಂಘದ ವತಿಯಿಂದ ಗಿಡಮೂಲಿಕೆಗಳ ಮಹತ್ವದ ಬಗ್ಗೆ ಕಿರು ಉಪನ್ಯಾಸ ನಡೆಯಿತು .

ಸ್ಥಳೀಯ ನಾಟಿ ವೈದರು ಹಾಗೂ ಪ್ರಗತಿಪರ ಕೃಷಿಕ ನಾರಾಯಣ ಗೌಡ ಮುಚ್ಚಾರು ಇವರು ಭಾಗವಹಿಸಿ ವಿಧ್ಯಾರ್ಥಿಗಳಿಗೆ ವಿವಿಧ ನಾಟಿ ಮದ್ದಿನ ಗಿಡಗಳ ಮಹತ್ವದ ಬಗ್ಗೆ ಗಿಡಮೂಲಿಕೆಗಳಗಳನ್ನು ತೋರಿಸಿ ವಿವರಿಸಿದರು.

ಶಾಲಾ ಮುಖ್ಯೋಪಾಧ್ಯಾಯ ಶೀನಪ್ಪ ಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿ ಪ್ರಸ್ತುತ ಕಾಲ ಘಟ್ಟ ದಲ್ಲಿ ನಾಟಿ ಮದ್ದುಗಳ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಇರಬೇಕು ಕೆಲವೊಂದು ಸಂದರ್ಭದಲ್ಲಿ ಹಳ್ಳಿ ಮದ್ದುಗಳ ಬಳಕೆ ಮಾಡಬೇಕು ಎಂದು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಶಾಲಾ ಶಿಕ್ಷಕ ವೃಂದದವರು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಕೊಟ್ಟರು. ಪವನ್ ಕುಮಾರ್ ಸ್ವಾಗತಿಸಿದರು. ಶ್ರೀಮತಿ ಯಶೋಧ.ಕೆ ಧನ್ಯವಾದವಿತ್ತರು. ಕು| ಜಿತೀಕ್ಷ ನಿರೂಪಿಸಿದರು.

Related posts

ರಾಜ್ಯದಲ್ಲಿ ವಚನಭ್ರಷ್ಟ ಕಾಂಗ್ರೆಸ್ ಸರಕಾರ: ಪ್ರತಾಪಸಿಂಹ ನಾಯಕ್

Suddi Udaya

ಸೋಮಂತಡ್ಕ: ಸೂಪರ್ ಮಾರ್ಕೆಟ್ ಗೆ ಬೆಂಕಿ: ಲಕ್ಷಾಂತರ ರೂಪಾಯಿ ನಷ್ಟ

Suddi Udaya

ಭಾರೀ ಮಳೆಗೆ ಉಜಿರೆ ಶಿವಾಜಿನಗರದಲ್ಲಿ ಗುಡ್ಡ ಕುಸಿತ: ಮನೆಯವರು ಅಪಾಯದಿಂದ ಪಾರು

Suddi Udaya

ಕೋಲಾರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ದುರ್ಗಾಪೂಜೆ ಹಾಗೂ ರೆಖ್ಯ ಗ್ರಾಮದ ಸಮಗ್ರ ಅಭಿವೃದ್ಧಿಗೆ ರೂ. 15ಕೋಟಿ ಅನುದಾನ ನೀಡಿರುವ ಶಾಸಕ ಹರೀಶ್ ಪೂಂಜರಿಗೆ ಸನ್ಮಾನ

Suddi Udaya

ಬಡಗಕಾರಂದೂರು ಗ್ರಾಮದ ಎ ಒಕ್ಕೂಟದ ಎರಡು ಸ್ವಸಹಾಯ ಸಂಘಗಳ ಉದ್ಘಾಟನೆ

Suddi Udaya

ಬಳಂಜ: ಸಂಜೀವ ದೇವಾಡಿಗ ನಿಧನ

Suddi Udaya
error: Content is protected !!