ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಮಹಾವಿದ್ಯಾಲಯದ ಎಸ್.ಡಿ.ಎಮ್ -ರೋಟರಿ ವೃತ್ತಿ ಮಾರ್ಗದರ್ಶನ ಮತ್ತು ಉದ್ಯೋಗ (HRD) ಕೇಂದ್ರವು “MS Excel with Power BI” ಕುರಿತು ಮೂರು ದಿನಗಳ ತರಬೇತಿ ಕಾರ್ಯಕ್ರಮವು ಜು.10 ರಂದು ಪ್ರಾರಂಭವಾಗಿ ಜು. 12 ರವರೆಗೆ ನಡೆಯಿತು.

ಕಾರ್ಯಕ್ರಮ ಬೆಂಗಳೂರಿನ ಆರ್ಯ ಚಾಣಕ್ಯ ಟೆಕ್ನಾಲಜಿ ಲಿಮಿಟೆಡ್‌ನ ನುರಿತ ತರಬೇತುದಾರ ಮತ್ತು ಸಂಪನ್ಮೂಲ ವ್ಯಕ್ತಿಯಾಗಿ ನಾರಾಯಣ ಕೆ ತರಬೇತಿಯ ನೇತೃತ್ವ ವಹಿಸಿದ್ದರು. ತಮ್ಮ ಉದ್ಯಮದ ಅನುಭವ ಮತ್ತು ತಾಂತ್ರಿಕ ಪರಿಣತಿಯೊಂದಿಗೆ, ನಾರಾಯಣ ಕೆ ಅವರು ವಿದ್ಯಾರ್ಥಿಗಳಿಗೆ ಡೇಟಾ ನಿರ್ವಹಣೆಗಾಗಿ MS Excel with Power BI ಪಾತ್ರ ಮತ್ತು ವ್ಯವಹಾರ ಕ್ಷೇತ್ರದಲ್ಲಿ ವರದಿ ಮಾಡಲು MS Excel with Power BI ನ ಪ್ರಾಯೋಗಿಕ ಕೌಶಲ್ಯ ವಿದ್ಯಾರ್ಥಿಗಳಿಗೆ ಅತ್ಯವಶ್ಯಕವಾಗಿದೆ ಎಂದು ಮನವರಿಕೆ ಮಾಡಿಕೊಟ್ಟರು.
ವಿನ್ಯಾಸಗೊಳಿಸಲಾದ ತರಬೇತಿಯಲ್ಲಿ ಸಮಗ್ರ ಆಧುನಿಕ ಕೈಗಾರಿಕೆಗಳಲ್ಲಿ ಬಳಸುವ ದತ್ತಾಂಶ ವಿಶ್ಲೇಷಣೆ ಮತ್ತು ವರದಿ ಮಾಡುವ ಸಾಧನಗಳ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು ಡಿಜಿಟಲ್ ವಿಶ್ಲೇಷಣೆ ಮತ್ತು ವ್ಯವಹಾರ MS Excel with Power BI ನ ಕೌಶಲ್ಯಗಳನ್ನು ವಿದ್ಯಾರ್ಥಿಗಳು ಹೆಚ್ಚಿನ ಆಸಕ್ತಿಯನ್ನು ವ್ಯಕ್ತಪಡಿಸಿ ಕಲಿತುಕೊಂಡರು.
ತರಬೇತಿ ಕಾರ್ಯಾಗಾರದಲ್ಲಿ ಅಂತಿಮ ವರ್ಷದ ವಾಣಿಜ್ಯ ವಿಭಾಗದಿಂದ 84 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪ್ರಾಂಶುಪಾಲರಾದ ಡಾ. ವಿಶ್ವನಾಥ ಪಿ ರವರ ಮಾರ್ಗದರ್ಶನದಲ್ಲಿ ಡಾ. ನಾಗರಾಜ ಪೂಜಾರಿ ಇವರು ಕಾರ್ಯಕ್ರಮವನ್ನು ಸಂಘಟಿಸಿದರು.











