ಪದ್ಮುಂಜ: ಬಂಟರ ಯಾನೆ ನಾಡವರ ಸಂಘ, ಕಣಿಯೂರು ಗ್ರಾಮ ಸಮಿತಿ ವತಿಯಿಂದ ಪದಗ್ರಹಣ, ಪ್ರತಿಭಾ ಪುರಸ್ಕಾರ, ಪುಸ್ತಕ ವಿತರಣಾ ಕಾರ್ಯಕ್ರಮ ಇಂದು ಪದ್ಮುಂಜ ರೈತ ಸಭಾ ಭವನದಲ್ಲಿ ಜು. 13ರಂದು ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಬಂಟರ ಯಾನೆ ನಾಡವರ ಸಂಘ ದ ಬೆಳ್ತಂಗಡಿ ತಾಲೂಕು ಅಧ್ಯಕ್ಷ ಜಯಂತ್ ಶೆಟ್ಟಿ ನೆರವೇರಿಸಿ ಶುಭ ಹಾರೈಸಿದರು.
ವಿಶೇಷ ಭಾಷಣವನ್ನು ಉಜಿರೆ ಎಸ್ ಡಿ ಎಂ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ಬಿ ಎ ಕುಮಾರ್ ಹೆಗ್ಡೆ ಯವರು ಮಾಡಿದರು.
ಕಾರ್ಯಕ್ರಮದಲ್ಲಿ, ಕಣಿಯೂರು ಗ್ರಾಮದಲ್ಲಿ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ
ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆ ಹೊಂದಿದ ಬಂಟ ಸಮುದಾಯ ದ 6 ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ಹಾಗೂ ಎಸ್ ಎಲ್ ಸಿ, ಪಿ ಯು ಸಿ ಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಎಲ್ಲಾ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಿಸಲಾಯಿತು.
ಪದ್ಮುಂಜ ಹಾಲು ಉತ್ಪಾದಕರ ಸಹಕಾರಿ ಸಂಘ ನಿವೃತ್ತ ಕಾರ್ಯದರ್ಶಿ ಜಯರಾಮ್ ಶೆಟ್ಟಿ ಮಲೆಂಗಲ್ಲು ಹಾಗೂ ಪದ್ಮುಂಜ ಸಿ ಎ ಬ್ಯಾಂಕ್ ಅಧ್ಯಕ್ಷ ರಕ್ಷಿತ್ ಶೆಟ್ಟಿ ಪನೆಕ್ಕರ ಇವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮ ದ ಅಧ್ಯಕ್ಷತೆಯನ್ನು ಬಂಟರ ಯಾನೆ ನಾಡವರ ಸಂಘ, ಕಣಿಯೂರು ಗ್ರಾಮ ಸಮಿತಿ ಇದರ ಅಧ್ಯಕ್ಷ ರಾದ ಸುರೇಶ್ ಶೆಟ್ಟಿ ಅಂಬಡ್ಕ ಇವರು ವಹಿಸಿದ್ದರು. ಕಾರ್ಯಕ್ರಮ ದ ವೇದಿಕೆ ಯಲ್ಲಿ ಬೆಳ್ತಂಗಡಿ ಮಹಿಳಾ ಬಂಟರ ಸಂಘ ದ ಅಧ್ಯಕ್ಷೆ ಜಯಲಕ್ಷ್ಮಿ ಸಾಮಾನಿ, ಬೆಳ್ತಂಗಡಿ ತಾಲೂಕು ಬಂಟರ ಸಂಘ ದ ಕಾರ್ಯದರ್ಶಿ ಸುರೇಶ್ ಶೆಟ್ಟಿ ಲಾಯಿಲ, ಬಂಟರ ಮಾತೃ ಸಂಘ ಮOಗಳೂರು ಇದರ ನಿರ್ದೇಶಕ ಕಿರಣ್ ಶೆಟ್ಟಿ, ಬಂಟರ ಸಂಘ ಬೆಳ್ತಂಗಡಿ ಯ ನಿರ್ದೇಶಕ ಪುರಂದರ ಶೆಟ್ಟಿ ಪನೆಕ್ಕರ ಹಾಗೂ ಬಂಟರ ಯಾನೆ ನಾಡವರ ಸಂಘ, ಕಣಿಯೂರು ಗ್ರಾಮ ಸಮಿತಿ ಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಬಂಟರ ಯಾನೆ ನಾಡವರ ಸಂಘ, ಕಣಿಯೂರು ವಲಯ ಸಂಚಾಲಕ ವಿಠಲ ಶೆಟ್ಟಿ ಕೊಲ್ಲೊಟ್ಟು ಸ್ವಾಗತಿಸಿ ಬಂಟರ ಯಾನೆ ನಾಡವರ ಸಂಘ, ಕಣಿಯೂರು ಗ್ರಾಮ ಸಮಿತಿ ಕಾರ್ಯದರ್ಶಿ ಜಯರಾಮ ಶೆಟ್ಟಿ ಮಲೆಂಗಲ್ಲು ಧನ್ಯವಾದವಿತ್ತರು.
ಬಂಟರ ಯಾನೆ ನಾಡವರ ಸಂಘ, ಕಣಿಯೂರು ಗ್ರಾಮ ಸಮಿತಿ ಉಪಾಧ್ಯಕ್ಷ, ವಕೀಲ ಯತೀಶ್ ಶೆಟ್ಟಿ ಪನೆಕ್ಕರ ಕಾರ್ಯಕ್ರಮ ನಿರೂಪಿಸಿದರು.











