25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿನಿಧನಪ್ರಮುಖ ಸುದ್ದಿಬೆಳ್ತಂಗಡಿ

ಕಳೆಂಜ: ನಾಪತ್ತೆಯಾಗಿದ್ದ ವ್ಯಕ್ತಿ ಶವವಾಗಿ ಪತ್ತೆ

ಕಳೆಂಜ: ಜು.14ರಂದು ನಾಪತ್ತೆಯಾಗಿದ್ದ ಕಳೆಂಜ ಗ್ರಾಮದ ರೆಂಜದಡಿ ಮನೆ ನಿವಾಸಿ ಜಿನ್ನಪ್ಪ ಗೌಡ(76) ರವರ ಶವ ಜು.15ರಂದು ಪತ್ತೆಯಾಗಿದೆ.

ಜು.14ರಂದು ಕಾಣೆಯಾಗಿದ್ದ ಜಿನ್ನಪ್ಪ ಗೌಡ ಅವರ ಪತ್ತೆಗಾಗಿ ಅವರ ಮನೆಯವರು ಮತ್ತು ಸ್ಥಳೀಯರು ಹುಡುಕಾಟ ನಡೆಸಿದ್ದರು. ಆದರೂ ಪತ್ತೆ ಆಗಿರಲಿಲ್ಲ. ಇಂದು ಮುಂಜಾನೆ ಮತ್ತೆ ಸ್ಥಳೀಯ ಸಿಸಿ ಕ್ಯಾಮರಾ ಪರಿಶೀಲನೆ ನಡೆಸಿದಾಗ ಕಾಯರ್ತಡ್ಕದಿಂದ ಅಮ್ಮಿನಡ್ಕ ಕಡೆಗೆ ಬಂದಿರುವುದು ತಿಳಿದು ಬಂದಿರುವುದರಿಂದ ಮನೆಯವರು ಮತ್ತು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿ ಮಧ್ಯಾಹ್ನ ನಂತರ ಅರಸಿನಮಕ್ಕಿ- ಶಿಶಿಲ ಶೌರ್ಯ ವಿಪತ್ತು ತಂಡದ ಸದಸ್ಯರೊಂದಿಗೆ ಕುದ್ದ ಸಮೀಪ ಇರುವ ಅರಣ್ಯ ಪ್ರದೇಶದಲ್ಲಿ ಹುಡುಕಾಟ ನಡೆಸಿದಾಗ ಶವವಾಗಿ ಪತ್ತೆಯಾಗಿದೆ.

ಮೇಲ್ನೋಟಕ್ಕೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಸ್ಥಳೀಯರು ಊಹೆ ಮಾಡಿಕೊಳ್ಳುತ್ತಿದ್ದು ನೈಜ ಕಾರಣ ಇನ್ನಷ್ಟೇ ತನಿಖೆಯ ಮೂಲಕ ತಿಳಿಯಬೇಕಿದೆ.ಮೃತರು ಪುತ್ರ ಶಿವರಾಂ, ಪುತ್ರಿಯರಾದ ವೇದಾವತಿ, ಕುಸುಮ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

Related posts

ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಜರಗುವ ಸಾರ್ವಜನಿಕ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ರಾಜ್ಯ ಮಟ್ಟದ ಪವರ್ ಲಿಫ್ಟಿಂಗ್ ಚಾಂಫಿಯನ್ ಶಿಪ್: ಹೇಮಚಂದ್ರರಿಗೆ ಚಿನ್ನದ ಪದಕ

Suddi Udaya

ಜಿಲ್ಲಾ ಮಟ್ಟದ ಸಹಕಾರಿಗಳ ಹಾಗೂ ನವೋದಯ ಸದಸ್ಯರುಗಳ ಜಿಲ್ಲಾ ಮಟ್ಟದ ಕ್ರೀಡಾಕೂಟ: ವಿಜಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ನಿ. ಗುರುವಾಯನಕೆರೆಯ ಸಿಬ್ಬಂದಿ ಪ್ರವೀಣ್ ಕುಮಾರ್ ರವರಿಗೆ ಪ್ರಶಸ್ತಿ

Suddi Udaya

ಎಕ್ಸೆಲ್ ಕಾಲೇಜಿನ ಸಿ.ಎ ಮತ್ತು ಸಿ.ಎಸ್ ತರಬೇತಿ ತರಗತಿಗಳ ಉದ್ಘಾಟನಾ ಕಾರ್ಯಕ್ರಮ

Suddi Udaya

ಸೇವಾಭಾರತಿ ನೂತನ ಕಟ್ಟಡ ನಿರ್ಮಾಣಕ್ಕೆ ಹಿಂದೂ ಧಾರ್ಮಿಕ ಸೇವಾ ಸಮಿತಿ, ಕನ್ಯಾಡಿ ಯವರಿಂದ ರೂ. 25 ಸಾವಿರ ದೇಣಿಗೆ

Suddi Udaya

ಕಾಜೂರು ಆಡಳಿತ ಮಂಡಳಿಗೆ ನೂತನ ಪದಾಧಿಕಾರಿಗಳ ಆಯ್ಕೆ

Suddi Udaya
error: Content is protected !!