ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಗಮಕ, ಯಕ್ಷಗಾನದಲ್ಲಿ ವಿಶೇಷ ಸಾಧನೆ: ಮಧೂರು ಮೋಹನ ಕಲ್ಲೂರಾಯರಿಗೆ ರಾಜ್ಯ ಪ್ರಶಸ್ತಿ

ಬೆಳ್ತಂಗಡಿ: ಸಮರ್ಥ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ ಬೆಂಗಳೂರು ಇವರು ಕೊಡ ಮಾಡುವ ಹಳ್ಳೂರು ಹನುಮಂತಪ್ಪ ವರಮಹಾಲಕ್ಷ್ಮಮ್ಮ ರಾಜ್ಯ ಪ್ರಶಸ್ತಿಯನ್ನು ದಕ್ಷಿಣ ಕನ್ನಡ ಜಿಲ್ಲೆಯಿಂದ ಆರಿಸಲ್ಪಟ್ಟ ಪ್ರೊಫೆಸರ್ ಮಧೂರು ಮೋಹನ ಕಲ್ಲೂರಾಯರಿಗೆ ನೀಡಲಾಗಿದೆ.

ರಾಜ್ಯದ ಪ್ರತಿಷ್ಠಿತ ಪತ್ರಿಕೆ ‘ವಿಜಯವಾಣಿ ‘ಪತ್ರಿಕೆಯಿಂದ ಜಿಲ್ಲಾವಾರು ಆರಿಸಲ್ಪಟ್ಟಂತಹ ಸಾಧಕರಿಗೆ ಇದನ್ನು ನೀಡಲಾಗಿದೆ. ಗಮಕ, ಯಕ್ಷಗಾನ, ವಿವಿಧ ಕಲಾ ಚಟುವಟಿಕೆಗಳಲ್ಲಿ ಸಾಧನೆ ಮಾಡಿದ ಪ್ರೊಫೆಸರ್ ಮಧೂರು ಮೋಹನ ಕಲ್ಲೂರಾಯರಿಗೆ ಈ ಪ್ರಶಸ್ತಿಯನ್ನು ಜು. 6 ರಂದು ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಡೆದ ಸಮಾರಂಭದಲ್ಲಿ ಮಠಾಧಿಪತಿಗಳ ದಿವ್ಯ ಸಾನಿಧ್ಯದಲ್ಲಿ, ಗಣ್ಯರ ಉಪಸ್ಥಿತಿಯಲ್ಲಿ ಪ್ರದಾನ ಮಾಡಲಾಯಿತು. ಮೋಹನ ಕಲ್ಲೂರಾಯರ ಪರವಾಗಿ ಅವರ ಪುತ್ರ ಮಧೂರು ವಿಷ್ಣು ಪ್ರಸಾದ ಕಲ್ಲೂರಾಯ ಬೆಂಗಳೂರಿನಲ್ಲಿ ಸನ್ಮಾನವನ್ನು ಸ್ವೀಕರಿಸಿದರು.ಮಧೂರು ಮೋಹನ ಕಲ್ಲೂರಾಯರು ದ.ಕ ಜಿಲ್ಲೆಯ ಕರ್ನಾಟಕ ಗಮಕ ಕಲಾ ಪರಿಷತ್ತಿನ ಅಧ್ಯಕ್ಷರಾಗಿದ್ದಾರೆ.

Related posts

ಉಜಿರೆ: ಕಾಲಬೈರವೇಶ್ವರ ಒಕ್ಕಲಿಗ ಗೌಡರ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘಕ್ಕೆ ಹಾಸನ ಬಿಜಿಎಸ್ ಸೌಹಾರ್ದ ಸಹಕಾರಿ ಸಂಘದ ಆಡಳಿತ ಮಂಡಳಿ ಸದಸ್ಯರ ಭೇಟಿ

Suddi Udaya

ವಲಯ ಮಟ್ಟದ ಕ್ರೀಡಾಕೂಟ: ಎಸ್.ಡಿ.ಎಂ. ಆಂ.ಮಾ. ಶಾಲೆಯ ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆ ಆಯ್ಕೆ

Suddi Udaya

ದ.ಕ. ಲೋಕಸಭಾ ಕ್ಷೇತ್ರದ ಚುನಾವಣಾ ಫಲಿತಾಂಶ: ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ 1,16,990 ಅಂತರದಿಂದ ಭಾರಿ ಮುನ್ನಡೆ

Suddi Udaya

ದ.ಕ. ಮತ್ತು ಉಡುಪಿ ಜಿಲ್ಲಾ ಲೈವ್ ಅಸೋಸಿಯೇಶನ್ ಅಧ್ಯಕ್ಷರಾಗಿ ದಿವ್ಯವರ್ಮಾ, ಕಾರ್ಯದರ್ಶಿಯಾಗಿ ಶರತ್ ಎಂ. ಗೌಡ ಬೆಳ್ತಂಗಡಿ ಆಯ್ಕೆ

Suddi Udaya

ಬಿ.ಜೆ.ಪಿ ಕಾರ್ಯದರ್ಶಿ ಹುದ್ದೆಯಿಂದ ಸೆಲೆಸ್ಟಿನ್ ಡಿಸೋಜ ವಜಾ

Suddi Udaya

ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ವಿನೂತನ ‘ಸಿರಿ ಮಿಲ್ಲೆಟ್ ಕೆಫೆ’ ಧಾರವಾಡದಲ್ಲಿ ಶುಭಾರಂಭ

Suddi Udaya
error: Content is protected !!