ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ವಿದ್ಯಾ ವಾಹಿನಿ ವಾಟ್ಸಪ್ ಬಳಗದ ವತಿಯಿಂದ ನಾರಾವಿ ಸ.ಉ.ಪ್ರಾ. ಶಾಲೆಯ ವಿದ್ಯಾರ್ಥಿಗಳಿಗೆ ಕ್ರೆಯಾನ್ಸ್ , ಜಾಮಿಟ್ರಿ ಬಾಕ್ಸ್ ಗಳ ವಿತರಣೆ

ನಾರಾವಿ ಸರಕಾರಿ ಉನ್ನತೀ ಕರಿಸಿದ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾ ವಾಹಿನಿ ವಾಟ್ಸಪ್ ಬಳಗದ ವತಿಯಿಂದ ವಿದ್ಯಾರ್ಥಿಗಳಿಗೆ ಉಚಿತವಾಗಿ ಕ್ರೆಯಾನ್, ನೇಮ್ ಸ್ಟಿಕ್ಕರ್, ಜಾಮಿಟ್ರಿ ಬಾಕ್ಸ್ ಗಳ ವಿತರಣಾ ಕಾರ್ಯಕ್ರಮವನ್ನು ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ ವಿದ್ಯಾ ವಾಹಿನಿಯ ಸಕ್ರಿಯ ಸದಸ್ಯೆ ಹಿರಿಯರಾದ, ಶಾಲೆಯ ನಿವೃತ್ತ ಶಿಕ್ಷಕಿ ಪ್ರೇಮಾ ಭಟ್ ರವರು ವಿದ್ಯಾರ್ಥಿಗಳಲ್ಲಿ ಮಾತನಾಡಿ, ತಮ್ಮ ಬಳಗದ ವಿದ್ಯಾರ್ಥಿಗಳ ಸೇವಾ ತತ್ಪರತೆಯನ್ನು ಕೊಂಡಾಡುತ್ತಾ ವಿದ್ಯಾರ್ಥಿಗಳೆಲ್ಲರೂ ಚೆನ್ನಾಗಿ ಓದಿ ಜಾಣರಾಗಬೇಕು ,ಉತ್ತಮ ಪ್ರಜೆಗಳಾಗಬೇಕು ಹೇಳಿದರು.

ಮುಖ್ಯ ಗುರುಗಳಾದ ಪ್ರಭಾಕರ್ ಎನ್ . ಇವರು ಮಾತನಾಡಿ, ವಿದ್ಯಾ ವಾಹಿನಿ ಬಳಗದ ಕಾರ್ಯವೈಖರಿ, ಸೇವೆಯ ಗುಣವನ್ನು ಶ್ಲಾಘಿಸಿದರು. ಶಾಲೆಯ ಎಲ್ಲ ಶಿಕ್ಷಕರು ಉಪಸ್ಥಿತರಿದ್ದು, ಸಹಕಾರವನ್ನು ನೀಡಿದರು.

Related posts

ವಿಭಾಗ ಮಟ್ಟದ ಜಿನಭಜನಾ ಸ್ಪರ್ಧೆ: ಉಜಿರೆಯ 4 ತಂಡಗಳು ರಾಜ್ಯ ಮಟ್ಟಕ್ಕೆ ಆಯ್ಕೆ

Suddi Udaya

ನಡ ನಿವಾಸಿ ಧೈರ್ಯ ಸಮಾಹಿತ ನವೀನ್ UIPM ವರ್ಲ್ಡ್ ಚಾಂಪಿಯನ್‌ಷಿಪ್‌ ಗೆ ಆಯ್ಕೆ

Suddi Udaya

ದ.ಕ. ಲೋಕಸಭಾ ಕ್ಷೇತ್ರದ ಚುನಾವಣಾ ಫಲಿತಾಂಶ: ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ 50453 ಅಂತರದಿಂದ ಭಾರಿ ಮುನ್ನಡೆ: ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪೂಜಾರಿ ಹಿನ್ನಡೆ

Suddi Udaya

ವಾಣಿ ಪದವಿಪೂರ್ವ ಕಾಲೇಜಿನ ಬಾಲಕಿಯರು ಪ್ರತಿನಿಧಿಸಿದ ದಕ್ಷಿಣ ಕನ್ನಡ ಜಿಲ್ಲೆಯ ತ್ರೋಬಾಲ್ ತಂಡಕ್ಕೆ ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ

Suddi Udaya

ಧರ್ಮಸ್ಥಳ: ಮಣ್ಣಸಂಕ ಬಳಿ ಬಸ್ ಮತ್ತು ಕಾರು ಅಪಘಾತ

Suddi Udaya

ವಿಶ್ವ ಹಿಂದೂ ಪರಿಷದ್ ಬಜರಂಗದಳ ಬೆಳ್ತಂಗಡಿ ಪ್ರಖಂಡ ಷಷ್ಠಿ ಪೂರ್ತಿಯ ಸಮಾರೋಪ ಸಮಾರಂಭ ಕಾರ್ಯಕ್ರಮದ ಪ್ರಯುಕ್ತ ಪೂರ್ವಭಾವಿ ಪ್ರಮುಖರ ಸಮಾಲೋಚನೆ ಸಭೆ

Suddi Udaya
error: Content is protected !!