22.9 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿನಿಧನಬೆಳ್ತಂಗಡಿವರದಿ

ಅಳದಂಗಡಿ: ಪ್ರಸಿದ್ದ ನಾದಸ್ವರ ವಾದಕ ಗಣೇಶ್ ಪೂಜಾರಿ ಕಾಡಂಗೆ ಅನಾರೋಗ್ಯದಿಂದ ನಿಧನ

ಅಳದಂಗಡಿ: ಸುಲ್ಕೇರಿಮೊಗ್ರು ಗ್ರಾಮದ ಅದ್ಭುತ ನಾದಸ್ವರ ವಾದಕ ಗಣೇಶ್ ಪೂಜಾರಿ ಕಾಡಂಗೆ (50 ವ) ಅವರು ಅಸೌಖ್ಯದಿಂದ ಜು. 15 ರಂದು ಬೆಳ್ತಂಗಡಿಯ ಆಸ್ಪತ್ರೆಯಲ್ಲಿ ನಿಧನರಾದರು.

ಕಳೆದ ಹಲವಾರು ವರ್ಷಗಳಿಂದ ದೇವಸ್ಥಾನ ಹಾಗೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಬ್ಯಾಂಡ್ ಹಾಗೂ ನಾದಸ್ವರದ ಮೂಲಕ ಚಿರಪರಿಚಿತರಾಗಿದ್ದ ಗಣೇಶ್ ಪೂಜಾರಿಯವರಿಗೆ ಕಳೆದ ಏಳೆಂಟು ತಿಂಗಳ ಹಿಂದೆ ಅನಾರೋಗ್ಯ ಕಾಡಿತ್ತು. ಹಲವು ತಜ್ಞ ವೈದ್ಯರಿಂದ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ತೀವ್ರವಾಗಿ ಬಾಧಿಸಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಗಿದ್ದರು.ಇದೀಗ ಚಿಕಿತ್ಸೆಗೆ ಸ್ಪಂದಿಸದೆ ನಿಧನರಾದರು.

ಸಮಾಜದಲ್ಲಿ ಇವರನ್ನು ಬ್ಯಾಂಡ್ ಗಣೇಶ್ ಪೂಜಾರಿ ಎಂದು ಕರೆಯಲಾಗುತ್ತಿತ್ತು.ಎಲ್ಲರೊಂದಿಗೂ ನಗು ಮೊಗದಿಂದ ಇರುತ್ತಿದ್ದರು.

ಮೃತರು ಪತ್ನಿ ಚಂದ್ರಾವತಿ, ಒರ್ವ ಪುತ್ರ ಶೈಲೇಶ್ ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ.

Related posts

ವಾಲಿಬಾಲ್ ಪಂದ್ಯಾಟ: ಮುಂಡಾಜೆ ವಿವೇಕಾನಂದ ಶಿಕ್ಷಣ ಸಂಸ್ಥೆಯ ಬಾಲಕಿಯರ ತಂಡ ಪ್ರಥಮ ಸ್ಥಾನ

Suddi Udaya

ಧರ್ಮಸ್ಥಳ ಪ್ರಕರಣ : ಸ್ವಾಮೀಜಿಗಳ ನಿಯೋಗದಿಂದ ಕೇಂದ್ರ ಗೃಹ ಸಚಿವ ಅಮಿತ್ ಶಾ ರವರ ಭೇಟಿ, ಎನ್ಐಎ ತನಿಖೆಗೆ ವಹಿಸುವಂತೆ ಮನವಿ

Suddi Udaya

ಸುಲ್ಕೇರಿ: ನಾವರ ಗ್ರಾಮದ ಪ್ರತಿ ಮನೆಗೂ ದಿನದ 24 ಗಂಟೆಯೂ ಪೂರ್ತಿ ನೀರು ಸರಬರಾಜು

Suddi Udaya

ಪ್ರಗತಿಪರ ಕೃಷಿಕ ಗೋಪಣ್ಣ ಪೂಜಾರಿ ಪುರಳಿ ನಿಧನ

Suddi Udaya

ಕಲ್ಮಂಜ : ಗುರಿಪಳ್ಳ ನಿವಾಸಿ ಮೇಸ್ತ್ರಿ ನಾರಾಯಣ ಮೂಲ್ಯ ನಿಧನ

Suddi Udaya

ಜೆ ಡಿ ಎಸ್ ಅಭ್ಯರ್ಥಿಯಿಂದ ತಾಲೂಕಿನಲ್ಲಿ ಮತಯಾಚನೆ   

Suddi Udaya
error: Content is protected !!