23.5 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ವಿಜಯರತ್ನ ಪ್ರಶಸ್ತಿ ಪುರಸ್ಕೃತ ಸುಮಂತ್ ಕುಮಾರ್ ಜೈನ್ ರವರಿಗೆ ಎಕ್ಸೆಲ್ ಉದ್ಯೋಗಿಗಳಿಂದ ಅಭಿನಂದನಾ ಸಮಾರಂಭ

ಗುರುವಾಯನಕೆರೆ: ಸಾವಿರಾರು ವಿದ್ಯಾರ್ಥಿಗಳಿಗೆ ಎಕ್ಸೆಲ್ ಕಾಲೇಜಿನ‌ ಮೂಲಕ ಗುಣಮಟ್ಟದ ಶಿಕ್ಷಣ ನೀಡಿ, ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆಗೈದ ಯುವ ಸಾಧಕ ಎಕ್ಸೆಲ್ ವಿದ್ಯಾಸಂಸ್ಥೆಗಳ ಆಡಳಿತ ಮಂಡಳಿಯ ಅಧ್ಯಕ್ಷರಾದ ಸುಮಂತ್ ಕುಮಾರ್ ಜೈನ್ ಅವರು ಪ್ರತಿಷ್ಠಿತ ವಿಜಯರತ್ನ ಪ್ರಶಸ್ತಿಯಿಂದ ಪುರಸ್ಕೃತಗೊಂಡಿದ್ದು ಎಕ್ಸೆಲ್ ಪದವಿ ಪೂರ್ವ ಕಾಲೇಜು ವಿದ್ಯಾಸಾಗರ ಕ್ಯಾಂಪಸ್ ಹಾಗೂ ಅರಮಲೆ ಬೆಟ್ಟ ಕ್ಯಾಂಪಸ್ ಗಳ ಬೋಧಕ ವೃಂದ ಹಾಗೂ ಆಡಳಿತ ಕಛೇರಿ ಉದ್ಯೋಗಿಗಳ ವತಿಯಿಂದ ಅಭಿನಂದನಾ ಸಮಾರಂಭವನ್ನು ಜು.15 ರಂದು ಹಮ್ಮಿಕೊಳ್ಳಲಾಯಿತು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ಸುಮಂತ್ ಕುಮಾರ್ ಜೈನ್ ಅವರು ‘ ಪ್ರಶಸ್ತಿ ಇಡೀ ನಮ್ಮ ಎಕ್ಸೆಲ್ ಕುಟುಂಬಕ್ಕೆ ಸಮರ್ಪಿತವಾಗಿದೆ. ಪುರಸ್ಕಾರ ಬಂದಾಗ ಹಿಗ್ಗದೆ, ತಿರಸ್ಕಾರ ಆದಾಗ ಜಗ್ಗದೆ ಇರುವುದೇ ನಿಜವಾದ ನಾಯಕತ್ವ. ಅಂಥ ವ್ಯಕ್ತಿತ್ವವನ್ನು ತನ್ನ ತಂದೆ ತಾಯಿ, ಗುರು ವೃಂದ ತನಗೆ ಅನುಗ್ರಹಿಸಿದೆ ಎಂದರು.

ವಿಜಯರತ್ನ ಪ್ರಶಸ್ತಿ ಇಡೀ ಎಕ್ಸೆಲ್ ಕುಟುಂಬಕ್ಕೆ ಸಂದ ಗೌರವ

ಬೆರಳೆಣಿಕೆಯ ಉದ್ಯೋಗಿಗಳಿದ್ದ ನಮ್ಮ ಎಕ್ಸೆಲ್ ಕಾಲೇಜಿನಲ್ಲಿ ಈಗ 700 ಕ್ಕಿಂತ ಹೆಚ್ಚು ಉದ್ಯೋಗಿಗಳಿದ್ದಾರೆ. ಶಾಖೋಪಶಾಖೆಗಳಾಗಿ ಸಂಸ್ಥೆ ಬೆಳೆಯುತ್ತಿದೆ.ಅತ್ಯುತ್ತಮ ಫಲಿತಾಂಶದ ಜೊತೆಗೆ ದೊಡ್ಡ ಮಟ್ಟದಲ್ಲಿ ದಾಖಲಾತಿ ಕೂಡಾ ನಡೆಯುತ್ತಿದೆ.ಇಂಥ ಯಶಸ್ಸಿಗೆ ಕಾರಣರಾದ ಎಲ್ಲರನ್ನೂ ತಾನು ಸ್ಮರಿಸುವುದಾಗಿ ಸುಮಂತ್ ಕುಮಾರ್ ಜೈನ್ ಹೇಳಿದರು.

ಎಕ್ಸೆಲ್ ಕಾಲೇಜು ವಿದ್ಯಾ ಸಾಗರ ಕ್ಯಾಂಪಸ್ ನ ಪ್ರಾಂಶುಪಾಲರಾದ ಡಾ.ನವೀನ್ ಕುಮಾರ್ ಮರಿಕೆ ಮಾತನಾಡಿ ಪುಟ್ಟ ಸಂಸ್ಥೆಯಾಗಿದ್ದ ನಮ್ಮ ಕಾಲೇಜು ಇಂದು ಬೃಹತ್ ಆಗಿ ಬೆಳೆದಿದೆ. ಇದಕ್ಕೆ ಪ್ರಮುಖ ಕಾರಣಕರ್ತರು ನಮ್ಮ ಅಧ್ಯಕ್ಷರು. ಅವರಿಗೆ ಇನ್ನಷ್ಟು ಉನ್ನತ ಸ್ಥಾನ ಮಾನ, ಪ್ರಶಸ್ತಿ – ಪುರಸ್ಕಾರಗಳು ಒಲಿದು ಬರಲಿ ‘ ಎಂದು ಹಾರೈಸಿದರು.

ಅರಮಲೆ ಬೆಟ್ಟ ಕ್ಯಾಂಪಸ್ ನ ಪ್ರಾಂಶುಪಾಲ ಡಾ.ಪ್ರಜ್ವಲ್ ಕಜೆ ಮಾತನಾಡಿ ಕಠಿಣ ಪರಿಸ್ಥಿತಿಯಲ್ಲೂ ಧೃತಿಗೆಡದೆ ಮುನ್ನಡೆಯುವ ಮನಸ್ಥಿತಿ ಅಧ್ಯಕ್ಷರದು ಎಂದರು.

ಕ್ಯಾಂಪಸ್ ಮ್ಯಾನೇಜರ್ ಶಾಂತಿರಾಜ್ ಜೈನ್ ಮಾತನಾಡಿ ಪ್ರಶಸ್ತಿ ನಮ್ಮ ಜವಾಬ್ದಾರಿಯನ್ನು ಹೆಚ್ಚು ಮಾಡುತ್ತದೆ. ಪ್ರಸ್ತುತ ವಿಜಯರತ್ನ ಪ್ರಶಸ್ತಿ ನಮ್ಮ ಅಧ್ಯಕ್ಷರ ಹೊಣೆಯನ್ನು ಹೆಚ್ಚಿಸಿದೆ ಎಂದರು.

ವೇದಿಕೆಯಲ್ಲಿ ಸುಮಂತ್ ಕುಮಾರ್ ಜೈನ್ ಅವರ ತಂದೆ ಸತೀಶ್ ಕುಮಾರ್ ಆರಿಗ, ತಾಯಿ ಶುಭಲತಾ , ಆಡಳಿತಾಧಿಕಾರಿ ಕೀರ್ತಿನಿಧಿ ಜೈನ್ , ರಸಾಯನ ವಿಜ್ಞಾನ ವಿಭಾಗದ ಮುಖ್ಯಸ್ಥ ಈಶ್ವರ್ ಶರ್ಮ, ಗಣಿತ ವಿಜ್ಞಾನ ವಿಭಾಗದ ಪ್ರಸಾದಿ ಚೇತನ್, ಪ್ರವೀಣ್ ಪಾಟೀಲ್, ಜೀವ ವಿಜ್ಞಾನ ವಿಭಾಗದ ದೀಪಾ, ಗಣಕ ವಿಜ್ಞಾನ ವಿಭಾಗದ ಪ್ರಭಾಕರ್, ಕನ್ನಡ ವಿಭಾಗ ಮುಖ್ಯಸ್ಥ ಜಯರಾಮ್, ವಾಣಿಜ್ಯ ವಿಭಾಗದ ಡೀನ್ ಸಂತೋಷ್ ಕೆಕೆ, ವಿಭಾಗ ಮುಖ್ಯಸ್ಥ ಪ್ರಸನ್ನ ಭೋಜ, ಆಡಳಿತ ಮಂಡಳಿಯ ಸಹನಾ ಜೈನ್, ಪದ್ಮ ಪ್ರಸಾದ್,ರಿತೇಶ್ ಕುಮಾರ್ ಮೊದಲಾದವರಿದ್ದರು.

ಎಕ್ಸೆಲ್ ಕುಟುಂಬದಿಂದ ಸನ್ಮಾನ:
ವಿಜಯ ರತ್ನ ಪ್ರಶಸ್ತಿ ಪಡೆದ ಹಿನ್ನೆಲೆಯಲ್ಲಿ ಪಂಚಲೋಹದ ಬೃಹತ್ ಸರಸ್ವತಿ ವಿಗ್ರಹ, ಕೆಂದಾಳಿ ಎಳನೀರು ಗೊನೆ, ಕದಳಿ ಬಾಳೆ ಗೊನೆಗಳನ್ನು ಸಮರ್ಪಿಸಲಾಯಿತು. ಸರಸ್ವತಿ ದೇವಿ ವಿಗ್ರಹಕ್ಕೆ ಪೂಜೆ ಸಲ್ಲಿಸಿ , ಕಾಲೇಜಿನಲ್ಲೇ ಅದನ್ನು ಇರಿಸಲು ಅಧ್ಯಕ್ಷರು ನಿರ್ಧರಿಸಿದರು.
ಪ್ರಾಂಶುಪಾಲರು, ಪ್ರಾಧ್ಯಾಪಕರು, ಆಡಳಿತ ಕಚೇರಿಯ ಸಿಬ್ಬಂದಿ ಹೂಹಾರ ,ಹಾಗೂ ಹೂ ಗುಚ್ಛ ನೀಡಿ ಗೌರವಿಸಿದರು.

ಭೌತ ವಿಜ್ಞಾನ ವಿಭಾಗದ ಮುಖ್ಯಸ್ಥರಾದ ಡಾ.ಸತ್ಯನಾರಾಯಣ ಭಟ್ ಸ್ವಾಗತಿಸಿದರು.ವಾಣಿಜ್ಯ ವಿಭಾಗದ ಡೀನ್ ಸಂತೋಷ್ ಕೆಕೆ ವಂದಿಸಿದರು. ಕನ್ನಡ ವಿಭಾಗದ ಮೊಹಮ್ಮದ್ ಮುನೀರ್ ವಂದಿಸಿದರು.


Related posts

ದ್ವಿತೀಯ ಪಿ.ಯು.ಸಿ ಪರೀಕ್ಷೆ: ಅತ್ಯುತ್ತಮ ಅಂಕ ಗಳಿಸಿದ ವೇಣೂರಿನ ಅಹ್ಮದ್ ಮುಯೀಝ್ ಕಲ್ಕರ್

Suddi Udaya

ವಾಲಿಬಾಲ್ ಪಂದ್ಯಾಟ: ವಾಣಿ ಆಂ.ಮಾ. ಪ್ರೌಢ ಶಾಲೆ ಹುಡುಗರ ತಂಡ ತಾಲೂಕು ಮಟ್ಟಕ್ಕೆ ಆಯ್ಕೆ

Suddi Udaya

ಕೃಷಿ ಇಲಾಖೆಯಲ್ಲಿ ಜಲಾನಯನ ಪ್ರದೇಶದ ರೈತರಿಗೆ ಕೈಗಾಡಿ, ಪವರ್ ವಿಹಾರ್ ಯಂತ್ರೋಪಕರಣ ವಿತರಣೆ

Suddi Udaya

ನಾವರ: ಡೆಂಗ್ಯೂ ವಿರೋಧ ಮಾಸಾಚರಣೆ ಮನೆ ಮನೆಗೆ ಭೇಟಿ ಹಾಗೂ ಮುಂಜಾಗೃತ ಮಾಹಿತಿ ಕಾರ್ಯಕ್ರಮ

Suddi Udaya

ಮೂಡುಕೋಡಿ: ನಡ್ತಿಕಲ್ಲು ಶ್ರೀ ರಾಮ ಭಜನಾ ಮಂಡಳಿಯಿಂದ ಕುಣಿತ ಭಜನೆ ತರಬೇತುದಾರ ದಯಾನಂದ ದೇವಾಡಿಗರವರಿಗೆ ಗುರುವಂದನಾ ಕಾರ್ಯಕ್ರಮ

Suddi Udaya

ಬೆಳ್ತಂಗಡಿ: ಎಸ್.ಡಿ.ಪಿ.ಐ 17ನೇ ಸಂಸ್ಥಾಪನಾ ದಿನಾಚರಣೆ

Suddi Udaya
error: Content is protected !!