23.5 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಕಾಯರ್ತಡ್ಕ ಸರಕಾರಿ ಪ್ರೌಢ ಶಾಲೆಯಲ್ಲಿ ಪೋಷಕರ ಸಭೆ

ಕಾಯರ್ತಡ್ಕ: ಇಲ್ಲಿಯ ಸರಕಾರಿ ಪ್ರೌಢ ಶಾಲೆ ಇದರ 2025-26ನೇ ಸಾಲಿನ ಪ್ರಥಮ ಪೋಷಕರ ಸಭೆ ಜು.15ರಂದು ನಡೆಯಿತು. ಸಭೆಯಲ್ಲಿ ಪ್ರಸಕ್ತ ಸಾಲಿನ ವಿದ್ಯಾರ್ಥಿಗಳ ಕಲಿಕಾ ಚಟುವಟಿಕೆಗಳ ಬಗ್ಗೆ ವಿವರವಾಗಿ ಚರ್ಚಿಸಲಾಯಿತು.

ಸಭೆಯಲ್ಲಿ ಭಾಗವಹಿಸಿದ್ದ ಪೋಷಕರು ಸೂಕ್ತವಾದ ಸಲಹೆಗಳನ್ನು ನೀಡಿದರು. ಈ ಸಂದರ್ಭದಲ್ಲಿ ಪಾಠ ಆಧಾರಿತ ಪರೀಕ್ಷಾ ಪದ್ಧತಿಯ ಬಗ್ಗೆ ಪೋಷಕರಿಗೆ ಮಾಹಿತಿ ನೀಡಲಾಯಿತು. ಶಿಕ್ಷಣ ಇಲಾಖೆಯಿಂದ ವಿದ್ಯಾರ್ಥಿಗಳಿಗೆ ಸಿಗುವ ಸವಲತ್ತುಗಳ ಬಗ್ಗೆ ಮುಖ್ಯ ಶಿಕ್ಷಕ ಯಾಕೂಬ್ ಎಸ್ ಕೊಯ್ಯೂರು ಮಾಹಿತಿ ನೀಡಿದರು.
ಸಭೆಯಲ್ಲಿ ಮಾತನಾಡಿದ ಶಿಕ್ಷಕ ಆನಂದ ಆಪ್ಟೆ ಇವರು ಮಕ್ಕಳ ಕಲಿಕೆಯಲ್ಲಿ ಪೋಷಕರ ಪಾತ್ರದ ಬಗ್ಗೆ ಅರಿವು ಮೂಡಿಸಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಎಸ್.ಡಿ.ಎಂ.ಸಿ. ಉಪಾಧ್ಯಕ್ಷ ಪದ್ಮನಾಭ ಗೌಡ ಇವರು ಶಾಲೆಯ ತುರ್ತು ಅಗತ್ಯಗಳ ಬಗ್ಗೆ ಪೋಷಕರು ಹಾಗೂ ಹಿರಿಯ ವಿದ್ಯಾರ್ಥಿಗಳ ಸಹಾಯ ಪಡೆದು ಶಾಲೆಯ ಅಭಿವೃದ್ಧಿಗೆ ಶ್ರಮ ವಹಿಸುವುದಾಗಿ ತಿಳಿಸಿದರು. ಎಸ್.ಡಿ.ಎಂ.ಸಿ. ಸದಸ್ಯ ವಿನಯ ಎಂ ಜಾರ್ಜ್ ಇವರು ಪೋಷಕರಿಗೆ ತಮ್ಮ ಕರ್ತವ್ಯಗಳ ಬಗ್ಗೆ ತಿಳಿಸಿದರು. ಈ ಸಂದರ್ಭದಲ್ಲಿ ಪ್ರೌಢಶಾಲೆಗೆ 50 ಕುರ್ಚಿಗಳನ್ನು ಕೊಡುಗೆ ನೀಡಿದ್ದ ಪುರಂದರ ಗೌಡ ಇವರ ಪರವಾಗಿ ಎಸ್.ಡಿ.ಎಂ.ಸಿ. ಸದಸ್ಯ ಅವರ ಪತ್ನಿ ಶ್ರೀಮತಿ ಶೋಭಾ ಇವರನ್ನು ಸಮಿತಿ ವತಿಯಿಂದ ಸನ್ಮಾನಿಸಲಾಯಿತು.


ವೇದಿಕೆಯಲ್ಲಿ ಎಸ್.ಡಿ.ಎಂ.ಸಿ. ಸದಸ್ಯರುಗಳಾದ ಗಣೇಶ್, ಶ್ರೀಮತಿ ರಜನಿ, ಶ್ರೀಮತಿ ಹರಿಣಾಕ್ಷಿ, ಜನಾರ್ಧನ ಎಂ ಕೆ, ಜನಾರ್ಧನ ಗೌಡ ಹಾಗೂ ಹಿರಿಯ ಶಿಕ್ಷಕ ವಿನಾಯಕ ಜೋಶಿ ಇವರುಗಳು ಉಪಸ್ಥಿತರಿದ್ದರು.

ಶಿಕ್ಷಕ ಪ್ರಕಾಶ್ ಸ್ವಾಗತಿಸಿ, ಶಿಕ್ಷಕಿ ಶ್ರೀಮತಿ ವಾಣಿ ಧನ್ಯವಾದಗೈದರು. ಕಾರ್ಯಕ್ರಮದ ನಿರೂಪಣೆಯನ್ನು ಶಿಕ್ಷಕಿ ಶ್ರೀಮತಿ ಜಯಲಕ್ಷ್ಮಿ ಪೈ ನೆರವೇರಿಸಿದರು.

Related posts

ಧರ್ಮಸ್ಥಳ: ಶ್ರೀ ಧ. ಮಂ. ಆಂ.ಮಾ. ಶಾಲೆಯಲ್ಲಿ ಜೀವನ ಕೌಶಲ್ಯ ಕಾರ್ಯಾಗಾರ

Suddi Udaya

ಅಳದಂಗಡಿ ಶ್ರೀ ಸತ್ಯದೇವತಾ ದೈವಸ್ಥಾನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಭೇಟಿ

Suddi Udaya

ಆ. 9 ರಂದು ಉದ್ಘಾಟನೆಗೆ ಸಜ್ಜುಗೊಂಡಿದೆ ಮಚ್ಚಿನದ ರುದ್ರಭೂಮಿ

Suddi Udaya

ಗುರುವಾಯನಕೆರೆ ವಿಜಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಗೆ ಮೈಸೂರು ಪ್ರಾಂತ್ಯದ ಜಂಟಿ ನಿಬಂಧಕ ಪ್ರಸಾದ್ ರೆಡ್ಡಿ ಭೇಟಿ

Suddi Udaya

ನಾಲ್ಕೂರು ನಿವಾಸಿ ಬಾಬು ನಿಧನ

Suddi Udaya

ಎನ್ನೆಸ್ಸೆ ಸ್: ಉಜಿರೆ ಶ್ರೀ ಧ. ಮಂ.ಪ.ಪೂ. ಕಾಲೇಜಿನ ಸುದರ್ಶನ್ ನಾಯಕ್ ಗೆ ಉತ್ತಮ ಪರ್ಫಾರ್ಮರ್ ಪ್ರಶಸ್ತಿ

Suddi Udaya
error: Content is protected !!