September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬಂದಾರು ಗ್ರಾಮ ಪಂಚಾಯತ್ ಗ್ರಾಮ ಸಭೆ

ಬಂದಾರು: ಬಂದಾರು ಗ್ರಾಮ ಪಂಚಾಯತ್ ನ 2025-26ನೇ ಸಾಲಿನ ಪ್ರಥಮ ಸುತ್ತಿನ ಗ್ರಾಮ ಸಭೆಯು ಜು.17 ರಂದು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಅಧ್ಯಕ್ಷ ದಿನೇಶ್ ಗೌಡ ಖಂಡಿಗ ಅಧ್ಯಕ್ಷತೆಯಲ್ಲಿ ನಡೆಯಿತು.

ನೋಡೆಲ್ ಅಧಿಕಾರಿಯಾಗಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಧನಂಜಯ್ ಸಭೆಯನ್ನು ಮುನ್ನಡೆಸಿದರು. ‌

ವಿವಿಧ ಇಲಾಖೆಗಳ ಅಧಿಕಾರಿಗಳು ಇಲಾಖಾವಾರು ಮಾಹಿತಿ ನೀಡಿದರು.

ಈ ವೇಳೆ ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಗ್ರಾಮಕ್ಕೆ ಹೆಸರು ತಂದು ಕೀರ್ತಿ ಪೆರ್ಲ ಬೈಪಾಡಿ ಹಾಗೂ ಬುಳೇರಿ ಶಾಲೆಯ ಮುಖ್ಯೋಪಾಧ್ಯಾಯರನ್ನು ಗೌರವಿಸಲಾಯಿತು. ನಿವೃತ್ತ ಸರ್ಕಾರಿ ಅಧಿಕಾರಿ ರತ್ನವಾತಿ ಅವರನ್ನು ಸನ್ಮಾನಿಸಲಾಯಿತು

ಉಪಾಧ್ಯಕ್ಷೆ ಪುಷ್ಪಾವತಿ ಸದಸ್ಯರಾದ ಚೇತನ್ ಕುಮಾರ್, ವಿಮಲ, ಭಾರತಿ, ಗಂಗಧಾರ ಪೂಜಾರಿ, ಸುಚಿತ್ರಾ, ಅನಿತಾ, ಶಿವ ಗೌಡ, ಬಾಲಕೃಷ್ಣ ಗೌಡ ಎಂ. ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರ, ಸಂಜೀವಿನಿ ಒಕ್ಕೂಟದ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.

ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪುರುಷೋತ್ತಮ್ ಜಿ . ಸ್ವಾಗತಿಸಿದರು. ಸಿಬ್ಬಂದಿಗಳಾದ ದಿನಕರ ಜಮಾ ಖುರ್ಚಿನ ವಿವರ ನೀಡಿದರು ಮತ್ತು ಪ್ರವೀಣ್ ವಾರ್ಡ್ ಸಭೆ ಬೇಡಿಕೆ ವಾಚಿಸಿದರು. ಸಿಬ್ಬಂದಿಗಳಾದ ಶಾಂತಿ.ಬಿ, ಉಷಾ, ಪವಿತ್ರ, ಸಹನ, ಸರೋಜಿನಿ, ಕೇಶವ, ರಕ್ಷಿತಾ ಸಹಕರಿಸಿದರು.

Related posts

ವಾತ್ಸಲ್ಯ ಮನೆ ನಿರ್ಮಾಣದ ಮೂಲಕ ಬೆಜಕ್ರೆರವರ ಬದುಕಿಗೆ ಬೆಳಕಾದ ಗ್ರಾಮಾಭಿವೃದ್ಧಿ ಯೋಜನೆ

Suddi Udaya

ಕುವೆಟ್ಟು ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘ ಓಡಿಲ್ನಾಳ ಗ್ರಾಮ ಸಮಿತಿಯ ನೂತನ ಪದಾಧಿಕಾರಿಗಳ ಅಧಿಕಾರ ಹಸ್ತಾಂತರ

Suddi Udaya

ಸೆ.16: ಬೆಳ್ತಂಗಡಿ ವಿಶ್ವಕರ್ಮಾಭ್ಯುದಯ ಸಭಾ ಇದರ ಶ್ರೀ ವಿಶ್ವಕರ್ಮ ಯಜ್ಞ ಮತ್ತು ಪೂಜೆ

Suddi Udaya

ವಿಷವಿಕ್ಕಿದ ದುರುಳರು; 10ಕ್ಕಿಂತ ಅಧಿಕ ನಾಯಿಗಳ ಸಾವು

Suddi Udaya

ಜೆಸಿಐ ವಲಯ-15ರ ಅಭಿವೃದ್ಧಿ ಮತ್ತು ಬೆಳವಣಿಗೆ ಹಾಗೂ ವ್ಯವಹಾರ ಸಮ್ಮೇಳನದಲ್ಲಿ ಸಂತೋಷ್ ಪಿ ಕೋಟ್ಯಾನ್ ಬಳಂಜ ರವರಿಗೆ ಪ್ರತಿಷ್ಠಿತ “ಸಾಧನಾಶ್ರೀ ಪುರಸ್ಕಾರ”

Suddi Udaya

ಕೇಂದ್ರ ಸಚಿವರಾಗಿ ಮೊದಲ ಬಾರಿಗೆ ಬೆಳ್ತಂಗಡಿಗೆ ಆಗಮಿಸಿದ ವಿ.ಸೋಮಣ್ಣರವರಿಗೆ ಬಿಜೆಪಿಯಿಂದ ಅದ್ದೂರಿ ಸ್ವಾಗತ:

Suddi Udaya
error: Content is protected !!