July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಜೇಸಿ ಚೇಂಬರ್ ಆಫ್ ಕಾಮರ್ಸ್ ಸ್ಥಾಪನೆ: ಸ್ಥಾಪಕ ಚೇರ್ಮನ್ ಆಗಿ ಅಭಿನಂದನ್ ಹರೀಶ್ ಪದ ಸ್ವೀಕಾರ

ಬೆಳ್ತಂಗಡಿ: ಜೆಸಿಐ ಭಾರತದ ವ್ಯವಹಾರ ಹಾಗೂ ಉದ್ಯಮಿಗಳ ಸಂಪರ್ಕ ಜಾಲವಾಗಿ ಬೆಳೆಯುತ್ತಿರುವ ಜೇಸಿ ಚೇಂಬರ್ ಆಫ್ ಕಾಮರ್ಸ್ ಇದರ ಉದ್ದೇಶಿತ ಘಟಕ ಬೆಳ್ತಂಗಡಿಯಲ್ಲಿ ಸ್ಥಾಪನೆಯಾಗಿ ಜು.16ರಂದು ಉಜಿರೆಯ ಓಷ್ಯನ್ ಪರ್ಲ್ ಇಲ್ಲಿ ಉದ್ಘಾಟನೆ ಹಾಗೂ ಪದಪ್ರಧಾನ ಸಮಾರಂಭ ನಡೆಯಿತು.

ಜೆಸಿಐ ಬೆಳ್ತಂಗಡಿಯ ಪೂರ್ವಾಧ್ಯಕ್ಷ ರಾಜ್ಯ ಯುವ ಕಾಂಗ್ರೆಸ್‌‌‌‌ನ ಕಾರ್ಯದರ್ಶಿ ಯುವ ಉದ್ಯಮಿ ಜೇಸಿ ಅಭಿನಂದನ್ ಹರೀಶ್ ಕುಮಾರ್ ಸ್ಥಾಪಕ ಚೇರ್ಮನ್ ಆಗಿ ಪದ ಸ್ವೀಕರಿಸಿದರು. ಜೆಸಿಐ ವಲಯ 15ರ ಜೆಕಾಮ್ ಚೇರ್ಮೆನ್ ಧೀರಾಜ್ ಬಿ ಉದ್ಯಾವರ್ ಸಭಾಧ್ಯಕ್ಷರಾಗಿ ನೂತನ ಚೇರ್ಮನ್ ಇವರಿಗೆ ಪ್ರಮಾಣವಚನ ಬೋಧಿಸಿದರು. ಜೆಕಾಂ ಬೆಳ್ತಂಗಡಿ ಟೇಬಲ್ ನ ಪದಾಧಿಕಾರಿಗಳಾದ ಉಪಾಧ್ಯಕ್ಷ ಪ್ರಶಾಂತ್ ಲಾೖಲ, ಕಾರ್ಯದರ್ಶಿ ಶ್ರೇಯ ಶೆಟ್ಟಿ, ಕೋಶಾಧಿಕಾರಿ ಸುದೀಪ್ ಸಾಲ್ಯಾನ್, ನಿರ್ದೇಶಕರಾದ ವಿಶಾಲ್ ಆಗಸ್ಟಿನ್ ಮತ್ತು ಸುಶೀಲ್ ಎಸ್ ಇವರಿಗೆ ನೂತನ ಚೇರ್ಮನ್ ಅಭಿನಂದನ್ ಹರೀಶ್ ರವರು ಪ್ರಮಾಣವಚನ ಬೋಧಿಸಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಜೆಸಿಐ ಭಾರತದ ವಲಯ 15ರ ಪೂರ್ವ ವಲಯಾಧ್ಯಕ್ಷ ಉದ್ಯಮಿ ರೋಯನ್ ಉದಯ ಕ್ರಾಸ್ತಾ ಜೆಕಾಮ್ ನ 10 ಸದಸ್ಯರಿಗೆ ಪ್ರಮಾಣವಚನ ಬೋಧಿಸಿ ಜೆಕಾಮ್ ಬೆಳ್ತಂಗಡಿ ಟೇಬಲ್ ಅನ್ನು ಉದ್ಘಾಟಿಸಿ ಜೆಸಿಐ ಅಂತರಾಷ್ಟ್ರೀಯ ಮಟ್ಟದಲ್ಲಿ ವ್ಯಕ್ತಿತ್ವ ವಿಕಸನ ಸಂಸ್ಥೆಯಾಗಿ ತರಬೇತಿಗಳ ಮೂಲಕ ಯುವ ಸಮುದಾಯಕ್ಕೆ ಬೇಕಾಗುವ ನಾಯಕತ್ವ ಗುಣಗಳು ಭಾಷಣ ಕಲೆಗಳು ಇನ್ನಿತರ ತರಬೇತಿಗಳ ಮೂಲಕ ಯುವಕರಿಗೆ ಉತ್ತಮ ಅವಕಾಶ ಒದಗಿಸುತ್ತಿದ್ದು ಇದೀಗ ಜೆಕಾಮ್ ಎಂಬ ಪರಿಕಲ್ಪನೆಯಲ್ಲಿ ಉದ್ಯಮಿಗಳಿಗೆ ವ್ಯವಹಾರಸ್ತರಿಗೆ ರಾಷ್ಟ್ರ ಅಂತರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಕ ಸಂಪರ್ಕ ಜಾಲವಾಗಿ ಅವಕಾಶಗಳನ್ನು ಕಲ್ಪಿಸುತ್ತಿದೆ ಎಂದು ಸಭೆಯ ಉದ್ದೇಶಿಸಿ ಮಾತನಾಡಿದರು.

ಜೆಕಾಮ್ ಟೇಬಲ್ ಮಂಗಳೂರು ಇದರ ಕೋಚ್ ದೀಪಕ್ ರಾಜ್ ಆಗಮಿಸಿದ ಜೇಸಿಯೇತರ ಉದ್ಯಮಿಗಳನ್ನು ಉದ್ದೇಶಿಸಿ ಜೆಕಾಮ್ ಎಂದರೆ ಏನು.. ಹೇಗೆ ಕೆಲಸ ಮಾಡುತ್ತಿದೆ ನಮ್ಮ ಉದ್ಯಮ ಮತ್ತು ವ್ಯವಹಾರಗಳನ್ನು ಜೆಕಾಮ್ ನಿಂದ ಹೇಗೆ ರಾಷ್ಟ್ರದಾದ್ಯಂತ ಸಂಪರ್ಕ ಸಾಧಿಸಬಹುದು ಎಂಬುದರ ಬಗ್ಗೆ ಮಾಹಿತಿಯನ್ನು ನೀಡಿದರು.

ವೇದಿಕೆಯಲ್ಲಿ ಜೆಸಿಐ ವಲಯ 15ರ ವಲಯ ಉಪಾಧ್ಯಕ್ಷ ರಂಜಿತ್ ಎಚ್‌ಡಿ ಹಾಗೂ ಬೆಳ್ತಂಗಡಿ ಇದರ ಘಟಕ ಅಧ್ಯಕ್ಷೆ ಜೇಸಿ ಆಶಾಲತಾ ಪ್ರಶಾಂತ್ ಹಾಗೂ ಜೆಕಾಂ ಬೆಳ್ತಂಗಡಿ ಕೋಚ್ ಅಭಿಜಿತ್ ನಾಯ್ಕ್ ಉಪಸ್ಥಿತರಿದ್ದರು.
ಜೇಸಿ ಪ್ರಶಾಂತ್ ಲಾೖಲ ಅತಿಥಿಗಳನ್ನು ವೇದಿಕೆಗೆ ಆಹ್ವಾನಿಸಿದರೆ ಜೇಸಿ ವಾಣಿಯನ್ನು ಶೀತಲ್ ಜೈನ್ ಉದ್ಘೋಷಿಸಿದರು. ಜೇಸಿ ಸುನೀತಾ ಬೈಜು, ಸುದೀಪ್ ಸಾಲ್ಯಾನ್, ವಿಶಾಲ್ ಆಗಸ್ಟಿನ್ ಅತಿಥಿಗಳನ್ನು ಸಭೆಗೆ ಪರಿಚಯಿಸಿದರು. ಜೆಕಾಂ ಕಾರ್ಯದರ್ಶಿ ಶ್ರೇಯ ಶೆಟ್ಟಿ ವಂದಿಸಿದರು.

ವಿಶೇಷ ಆಹ್ವಾನಿತರಾಗಿ ಅನ್ನಪೂರ್ಣ ಮೆಟಲ್ ಇದರ ಮಾಲಕ ರಾಘ್ನೇಶ್ ಹಾಗೂ ಜೇಸಿಯೇತರ ಉದ್ಯಮಿಗಳು ಜೆಕಾಮ್ ಟೇಬಲ್ ಮಂಗಳೂರು ಹಾಗೂ ಪುತ್ತೂರು ಇದರ ಚೇರ್ಮನ್ ಹಾಗೂ ಸದಸ್ಯರು ಉಪಸ್ಥಿತರಿದ್ದರು.

Related posts

ಜಿಲ್ಲೆಯ ಜನ ಕಾಂಗ್ರೆಸ್‌ನ ಅಭಿವೃದ್ಧಿಯ ರಾಜಕಾರಣಕ್ಕೆ ಬೆಂಬಲ: ಹರೀಶ್ ಕುಮಾರ್

Suddi Udaya

ಮದಡ್ಕದಲ್ಲಿ ಸರಕಾರಿ ಜಾಗದಲ್ಲಿ ಅಕ್ರಮವಾಗಿ ನಿರ್ಮಾಣ ಮಾಡಿದ್ದ ಶೆಡ್:ಬೆಳ್ತಂಗಡಿ ತಹಶೀಲ್ದಾ‌ರ್ ಪೃಥ್ವಿ ಸಾನಿಕಂ ನೇತೃತ್ವದ ತಂಡದಿಂದ ನೆಲಸಮ

Suddi Udaya

ಧರ್ಮಸ್ಥಳ: 25 ನೇ ವರ್ಷದ ಭಜನಾ ತರಬೇತಿ ಕಮ್ಮಟ ಸಮಾರೋಪ – ಭಜನೋತ್ಸವ ಸಮಾವೇಶ

Suddi Udaya

ಶಾಸಕ ಹರೀಶ್ ಪೂಂಜರ ನೇತೃತ್ವದಲ್ಲಿ ಬಿಜೆಪಿ ಶಾಸಕರ ಹೋರಾಟ ಯಶಸ್ವಿ -ಕಳೆಂಜ ದೇವಣ್ಣ ಗೌಡರ ಮನೆ ತೆರವು ಅರಣ್ಯ ಇಲಾಖೆಯ ಪ್ರಯತ್ನ ವಿಫಲ – ಜಂಟಿ ಸರ್ವೆಗೆ ಸಮ್ಮತಿ: ಸರ್ವೆ ನಡೆಸುವವರೆಗೆ ಯಥಾ ಸ್ಥಿತಿ ಮುಂದುವರಿಕೆ

Suddi Udaya

ಆ.18: ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ವತಿಯಿಂದ ತಾಲೂಕು ಮಟ್ಟದ ಕೆಸರ್ ಕಂಡೊಡು ಗೌಡರೆ ಗೌಜಿ ಗಮ್ಮತ್ ಹಾಗೂ ಮಾಜಿ ಸೈನಿಕರಿಗೆ ಸನ್ಮಾನ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳ ಲಕ್ಷದೀಪೋತ್ಸವದ ಅಂಗವಾಗಿ ಏಪ೯ಡಿಸಲಾದ ರಾಜ್ಯ ಮಟ್ಟದ ವಸ್ತು ಪ್ರದರ್ಶನದ ಉದ್ಘಾಟನೆ

Suddi Udaya
error: Content is protected !!