March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ವಾಣಿ ಕಾಲೇಜು : ಸಾಹಿತ್ಯ ಸಂಘದಿಂದ ಬರಹ ಕೌಶಲ್ಯ ಕಾರ್ಯಕ್ರಮ

ಬೆಳ್ತಂಗಡಿ: ಸಾಹಿತ್ಯಾಸಕ್ತಿಯನ್ನು ರೂಢಿಸಿಕೊಳ್ಳುವುದರಿಂದ ಉತ್ತಮ ಬದುಕಿನೊಂದಿಗೆ ನೆಮ್ಮದಿ, ಗೌರವ, ಪ್ರಶಸ್ತಿಗಳನ್ನು ಪಡೆದುಕೊಳ್ಳಬಹುದು ಎಂದು ಹಿರಿಯ ಸಾಹಿತಿ ಪ. ರಾಮಕೃಷ್ಣ ಶಾಸ್ತ್ರಿ ಹೇಳಿದರು.


ಅವರು ವಾಣಿ ಪದವಿಪೂರ್ವ ಕಾಲೇಜಿನ ಸಾಹಿತ್ಯ ಸಂಘದ ಆಶ್ರಯದಲ್ಲಿ ನಡೆದ ಬರಹ ಕೌಶಲ್ಯ ವಿಷಯದ ಕುರಿತು ಮಾತನಾಡುತ್ತಾ, ಜೀವನದ ಕಷ್ಟ ಸುಖದ ಅನುಭವಗಳನ್ನು ಮತ್ತು ನಮ್ಮ ಹತ್ತಿರದ ವಿಷಯ ಅಥವಾ ಘಟನೆಗಳನ್ನು ಆಸಕ್ತಿಯಿಂದ ಗಮನಿಸಿದಾಗ ಅದು ಬರವಣಿಗೆಗೆ ಸ್ಪೂರ್ತಿಯಾಗುತ್ತದೆ. ಸಾಹಿತ್ಯಕ್ಕೆ ವಿಷಯಗಳನ್ನು ನಾವೇ ಹುಡುಕಿಕೊಂಡು ಹೋಗಬೇಕಾಗುತ್ತದೆ. ಲೇಖನಗಳು ಅಥವಾ ಕಥೆಗಳು ಓದುಗರ ವ್ಯಕ್ತಿತ್ವದಲ್ಲಿ ಬದಲಾವಣೆಯನ್ನು ತರುವುದರೊಂದಿಗೆ ಸಮಾಜದಲ್ಲಿ ನೈತಿಕತೆಯನ್ನು ಕಂಡುಕೊಳ್ಳಬಹುದು ಎಂದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ರಚಿಸಿದ ‘ಅಕ್ಷರ ವಾಣಿ ಭಿತ್ತಿ ಪತ್ರಿಕೆ’ ಯನ್ನು ಅನಾವರಣಗೊಳಿಸಿದರು.

ಕಾಲೇಜಿನ ಪ್ರಾಂಶುಪಾಲರಾದ ವಿಷ್ಣು ಪ್ರಕಾಶ್ ಎಂ ಅಧ್ಯಕ್ಷತೆ ವಹಿಸಿದ್ದರು. ಸಾಹಿತ್ಯ ಸಂಘದ ಸಂಯೋಜಕಿ ಶ್ರೀಮತಿ ರಮ್ಯಾ ಜೋಶಿ ಮತ್ತು ಅಭ್ಯುದಯ್ ಉಪಸ್ಥಿತರಿದ್ದರು.
ವಿದ್ಯಾರ್ಥಿನಿಯರಾದ ಸನಾ ಶರಿನಾ ಪಿಂಟೋ ಸ್ವಾಗತಿಸಿದರು. ಅಭಿಜ್ಞಾ ಧನ್ಯವಾದವಿತ್ತರು. ಯಶಸ್ವಿ ಕಾರ್ಯಕ್ರಮ ನಿರೂಪಿಸಿದರು.

Related posts

ಬಳಂಜ ಬದಿನಡೆ ನಾಗಬ್ರಹ್ಮ ಕ್ಷೇತ್ರದ ವರ್ಷಾವಧಿ ಜಾತ್ರೋತ್ಸವ ಸಂಪನ್ನ

Suddi Udaya

ಕೊಕ್ಕಡ: ಕೋರಿ ಜಾತ್ರೆಯಲ್ಲಿ ಕೋಣಗಳ ಯಜಮಾನರಿಗೆ ಗೌರವಾರ್ಪಣೆ

Suddi Udaya

ಬಳಂಜ ಬ್ರಹ್ಮಶ್ರೀ ಕುಣಿತ ಭಜನಾ ಮಂಡಳಿ ಸದಸ್ಯರಿಗೆ ಪೆನ್ನು ವಿತರಣೆ

Suddi Udaya

ಕಡಿರುದ್ಯಾವರ ಮುಸ್ತಾಫರ ಮನೆಗೆ ನುಗ್ಗಿದ ಕಳ್ಳರು: ರೂ.1.71 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ 1.20 ಲಕ್ಷ ನಗದು ಕಳವು

Suddi Udaya

ಕೊಕ್ಕಡ: ಗಾಳಿ ಮಳೆಗೆ ಹಾರಿ ಹೋದ ಮನೆಯ ಛಾವಣಿ: ನೆರವಿನ ನಿರೀಕ್ಷೆಯಲ್ಲಿ ವೃದ್ಧ ದಂಪತಿ

Suddi Udaya

ಉಜಿರೆ ಎಸ್.ಡಿ.ಎಮ್ ಆಂ.ಮಾ. (ಸಿ.ಬಿ.ಎಸ್‌.ಇ) ಶಾಲೆಯಲ್ಲಿ ತಂದೆಯಂದಿರ ದಿನಾಚರಣೆ

Suddi Udaya
error: Content is protected !!