ಗ್ರಾಮಾಂತರ ಸುದ್ದಿಚಿತ್ರ ವರದಿ

ಬಳಂಜ ಬ್ರಹ್ಮಶ್ರೀ ಕುಣಿತ ಭಜನಾ ಮಂಡಳಿ ಸದಸ್ಯರಿಗೆ ಪೆನ್ನು ವಿತರಣೆ

ಬಳಂಜ: ಬ್ರಹ್ಮಶ್ರೀ ಕುಣಿತ ಭಜನಾ ಮಂಡಳಿ ಸದಸ್ಯರಿಗೆ ಮುಂಬೈ ನಲ್ಲಿ ಉದ್ಯೋಗದಲ್ಲಿರುವ ದಾನಿಗಳಾಗಿರುವ ಯೋಗೀಶ್ ಪೂಜಾರಿ ಕಾಪಿನಡ್ಕ ಇವರ ಸಹಕಾರದಿಂದ ಮಂಡಳಿಯ ನೇತೃತ್ವದಲ್ಲಿ ಹತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಮಂಡಳಿಯ ವಿದ್ಯಾರ್ಥಿಗಳಿಗೆ ಹಾಗೂ ಇತರ ವಿದ್ಯಾರ್ಥಿಗಳಿಗೆ ವಾರ್ಷಿಕ ಪರೀಕ್ಷೆ ಬರೆಯಲು ಅನುಕೂಲ ಆಗುವಂತೆ ಪ್ರತೀ ವರ್ಷದಂತೆ ಈ ವರ್ಷವೂ ಪೆನ್ನು ವಿತರಣೆಯನ್ನು ಫೆ.22 ರಂದು ಬಳಂಜ ಶ್ರೀ ನಾರಾಯಣ ಗುರು ಸಮುದಾಯ ಭವನದಲ್ಲಿ ಮಾಡಲಾಯಿತು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿಯ ಅಧ್ಯಕ್ಷರಾದ ಸಂತೋಷ್ ಕೋಟ್ಯಾನ್ ರವರು ಈ ಜಗತ್ತಿನಲ್ಲಿ ಹರಿತವಾದ ಖಡ್ಗ ಅಂದರೆ ಅದು ಪೆನ್ನು ಆಗಿದ್ದು, ಒಂದು ಪೆನ್ನಿನಿಂದ ಇಡೀ ಸಮಾಜವನ್ನು ಜಾಗೃತಿಯತ್ತ ಕೊಂಡೊಯ್ಯಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಸಂಸ್ಕಾರದ ಜೊತೆಗೆ ವಿದ್ಯೆಗೂ ಮಹತ್ವ ನೀಡುತ್ತಿರುವ ಮಂಡಳಿಯ ಕಾರ್ಯ ಶ್ಲಾಘನೀಯ ಎಂದು ಅಭಿಪ್ರಾಯಪಟ್ಟರು.

ಬಳಂಜ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಸದಾನಂದ ಸಾಲಿಯಾನ್ ಮಾತನಾಡಿ,ಪರಿಪೂರ್ಣ ವಿದ್ಯೆ ಪಡೆಯುವ ಎಲ್ಲಾ ವಿದ್ಯಾರ್ಥಿಗಳು ಸಹ ಉತ್ತಮ ಉದ್ಯೋಗವನ್ನು ಪಡೆಯಲು ಸಾಧ್ಯವಿದ್ದು,ಉತ್ತಮ ಉದ್ಯೋಗದಿಂದ ಕುಟುಂಬದ ಬಡತನ ನಿವಾರಣೆ ಆಗುತ್ತದೆ ಎಂದು ಶುಭವನ್ನು ಹಾರೈಸಿದರು.

ಬ್ರಹ್ಮಶ್ರೀ ಕುಣಿತ ಭಜನಾ ಮಂಡಳಿಯನ್ನು ಕಟ್ಟಿ ಬೆಳೆಸಿ ರಾಜ್ಯ ಮಟ್ಟದಲ್ಲಿ ಹೆಸರನ್ನು ತಂದು ಕೊಡುವಲ್ಲಿ ಶ್ರಮಿಸಿದ ಮಂಡಳಿಯ ಪ್ರಧಾನ ಸಂಚಾಲಕರಾದ ಹರೀಶ್ ವೈ ಚಂದ್ರಮ ಪ್ರಾಸ್ತಾವಿಕವಾಗಿ ಮಾತನಾಡಿ ನಮ್ಮ ಮಂಡಳಿಯ ಕೆಲವು ಬಡ ವಿದ್ಯಾರ್ಥಿ ಸದಸ್ಯರ ವಿದ್ಯಾಭ್ಯಾಸಕ್ಕಾಗಿ ದಾನಿಗಳ ನೆರವಿನಿಂದ ಶಾಲೆಯ ಹಣವನ್ನು ಸಹ ಕಟ್ಟಲಾಗಿದ್ದು ಎಲ್ಲರೂ ಉತ್ತಮ ವಿದ್ಯೆಯನ್ನು ಪಡೆಯಬೇಕೆಂದು ನನ್ನ ಮನದಾಸೆ ಎಂದರು.

ಶ್ರೀ ಕೃಷ್ಣ ಭಜನಾ ಮಂಡಳಿ ಸೂಲಬೆಟ್ಟು ಇದರ ಸಂಚಾಲಕರಾದ ಪ್ರಮೋದ್ ಪೂಜಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಂಡಳಿಯ ಅಧ್ಯಕ್ಷೆ ಕು.ಪ್ರಸಿದ್ಧಿ ಶೆಟ್ಟಿ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ತರಬೇತುದಾರೆ ಕು.ಮಾನ್ಯ ಸ್ವಾಗತಿಸಿದರು. ಮನ್ವಿತ ಧನ್ಯವಾದ ಸಲ್ಲಿಸಿದರು.

Related posts

ಹೊಸಂಗಡಿ ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲೆಯಲ್ಲಿ ಮಂಗಳೂರಿನ ಯಕ್ಷ ಧ್ರುವ ಪಟ್ಲ ಫೌಂಡೇಶನ್ ಸಹಯೋಗದೊಂದಿಗೆ’ಯಕ್ಷ ಶಿಕ್ಷಣ’ ಕಾರ್ಯಕ್ರಮದ ಉದ್ಘಾಟನೆ

Suddi Udaya

ಬಳಂಜ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ್ ವರ್ಗಾವಣೆ: ಪಂಚಾಯತ್ ವತಿಯಿಂದ ವಿವಿಧ ಸಂಘ ಸಂಸ್ಥೆಗಳಿಂದ ಬಿಳ್ಕೋಡುಗೆ ಸಮಾರಂಭ

Suddi Udaya

ಬೆಳ್ತಂಗಡಿ: ಸಹಾಯಕ ಪ್ರಾಧ್ಯಾಪಕಿ ಸೌಮ್ಯಲತಾ ರವರಿಗೆ ಪಿಹೆಚ್ ಡಿ ಪದವಿ

Suddi Udaya

ಶಿಕ್ಷಣ ಸಂಯೋಜಕರಾಗಿ ಎಡ್ವರ್ಡ್ ಡಿಸೋಜ ಆಯ್ಕೆ

Suddi Udaya

ಮಾ. 22 : ಆಳ್ವಾಸ್ ನುಡಿಸಿರಿ ವಿರಾಸತ್ ಬೆಳ್ತಂಗಡಿ ಘಟಕದ ವತಿಯಿಂದ ಉಜಿರೆಯ ರಥಬೀದಿಯಲ್ಲಿ ಅದ್ದೂರಿಯ ಆಳ್ವಾಸ್ ಸಾಂಸ್ಕೃತಿಕ ವೈಭವ

Suddi Udaya

ಭಾರತೀಯ ಸೇನೆಗೆ ನೇಮಕಗೊಂಡಿರುವ ಬಳಂಜದ ಯುವಕ ಮನೋಹರ್ ಪೂಜಾರಿಯವರಿಗೆ ಬೆಳ್ತಂಗಡಿ ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘದ ವತಿಯಿಂದ ಗೌರವಾರ್ಪಣೆ

Suddi Udaya
error: Content is protected !!