ಕಳಿಯ: ಕಳಿಯ ಗ್ರಾಮದ ಪಂಚಾಯತ್ ನ 2025-26ನೇ ಸಾಲಿನ ಪ್ರಥಮ ಸುತ್ತಿನ ಗ್ರಾಮ ಸಭೆಯು ಜು.17 ರಂದು ಕಳಿಯ ಪ್ಯಾಕ್ಸ್ ಸಹಕಾರಿ ಸಭಾಭವನದಲ್ಲಿ ಪಂಚಾಯತ್ ಸಭಾಂಗಣದಲ್ಲಿ ಅಧ್ಯಕ್ಷ ದಿವಾಕರ ಎಂ. ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ನೋಡೆಲ್ ಅಧಿಕಾರಿಯಾಗಿ ಸಾಮಾಜಿಕ ವಲಯ ಅರಣ್ಯಾಧಿಕಾರಿ ಲೋಕೇಶ್ ಸಭೆಯನ್ನು ಮುನ್ನಡೆಸಿದರು.

ವಿವಿಧ ಇಲಾಖೆಗಳ ಅಧಿಕಾರಿಗಳು ಇಲಾಖಾವಾರು ಮಾಹಿತಿ ನೀಡಿದರು. ಉಪಾಧ್ಯಕ್ಷೆ ಇಂದಿರಾ ಬಿ. ಸದಸ್ಯರಾದ ಸುಭಾಷಿನಿ, ಕುಸುಮ, ಶಂಕುತಾಳ , ಮರೀಟಾ ಪಿಂಟೋ, ಶ್ವೇತಾ, ಸುಧಾಕರ, ಯಶೋಧರ, ಅಬ್ದುಲ್ ಕರೀಂ, ಹರೀಶ್ ಕುಮಾರ್, ಪುಷ್ಪಾ, ಅಬ್ದುಲ್ ಲತೀಪ್ , ವಿಜಯ್ ಕುಮಾರ್ ಹಾಗೂ ಮೋಹಿನಿ, ಕಳಿಯ ಪ್ಯಾಕ್ಸ್ ಅಧ್ಯಕ್ಷ ವಸಂತ ಮಜಲು, ಗ್ರಾಮಸ್ಥರು, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಮತ್ತು ಸಂಜೀವಿನಿ ಒಕ್ಕೂಟದ ಸದಸ್ಯರು ಉಪಸ್ಥಿತರಿದ್ದರು.
ಪಿಡಿಒ ಸಂತೋಷ ಪಾಟೀಲ್ ಸ್ವಾಗತಿಸಿದರು. ಸಿಬ್ಬಂದಿಗಳು ಸಹಕರಿಸಿದರು.











