37.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಕಾಯರ್ತಡ್ಕ ಸರಕಾರಿ ಪ್ರೌಢಶಾಲೆಗೆ ಕ್ಯಾನ್ ಫಿನ್ ಹೋಂಮ್ಸ್ ವತಿಯಿಂದ ಕೊಡುಗೆ

ಕಾಯರ್ತಡ್ಕ : ಕ್ಯಾನ್ ಫಿನ್ ಹೋಂಮ್ಸ್ ಲಿಮಿಟೆಡ್ ಇದರ ವತಿಯಿಂದ ಸರಕಾರಿ ಪ್ರೌಢ ಶಾಲೆ ಕಾಯರ್ತಡ್ಕ ಇಲ್ಲಿಗೆ ನ್ಯಾಪ್ ಕಿನ್ ಇನ್ಸಿನರೇಟರ್ ಮತ್ತು ನ್ಯಾಪ್ ಕಿನ್ ವೆಂಡಿಂಗ್ ಮೆಷಿನ್ ಇವುಗಳನ್ನು ಕೊಡುಗೆಯಾಗಿ ನೀಡಲಾಯಿತು.

ರೋಟರಿ ಕ್ಲಬ್ ಬೆಳ್ತಂಗಡಿ ಹಾಗೂ ರೋಟರಿ ಇಂದಿರನಗರ ಬೆಂಗಳೂರು ಇವರ ಸಹಭಾಗಿತ್ವದಲ್ಲಿ ಕ್ಯಾನ್ ಫಿನ್ ಹೋಂಮ್ಸ್ ಲಿಮಿಟೆಡ್ ಈಗಾಗಲೇ ಹೆಣ್ಣು ಮಕ್ಕಳಿಗೆ ಸುಸಜ್ಜಿತವಾದ ಶೌಚಾಲಯ ನಿರ್ಮಿಸಿ ಕೊಟ್ಟಿದ್ದರು. ಈ ಶೌಚಾಲಯವು ರಾಜ್ಯದಲ್ಲೇ ಒಂದು ಮಾದರಿ ಶೌಚಾಲಯ ಎಂಬ ಪ್ರಶಂಸೆ ಪಡೆದಿತ್ತು.

ಮಕ್ಕಳ ಸ್ವಚ್ಛತೆ ಹಾಗೂ ಆರೋಗ್ಯ ದೃಷ್ಟಿಯಿಂದ ಈ ಕೊಡುಗೆಯನ್ನು ನೀಡಿದ್ದು ಇದನ್ನು ಈಗಾಗಲೇ ಶಾಲಾ ಶೌಚಾಲಯದಲ್ಲಿ ಅಳವಡಿಸಲಾಗಿದೆ. ಈ ಉಪಕರವನ್ನು ಬೆಂಗಳೂರಿನ ನೇಚರ್ ಕೇರ್ ಸೊಲ್ಯೂಷನ್ ನವರು ಸರಬರಾಜು ಮಾಡಿದ್ದು, ಉಪಕರಣದ ಬಳಕೆ ಬಗ್ಗೆ ಸೂಕ್ತ ಪ್ರಾತ್ಯಕ್ಷಿಕೆ ನೀಡಿರುತ್ತಾರೆ.

ಕ್ಯಾನ್ ಫಿನ್ ಹೋಂಮ್ಸ್ ಲಿಮಿಟೆಡ್ ಇವರಿಗೆ ಶಿಕ್ಷಕರು, ಪೋಷಕರು ಹಾಗೂ ಎಸ್.ಡಿ.ಎಂ.ಸಿ ಸಮಿತಿಯವರು ಧನ್ಯವಾದಗಳನ್ನು ತಿಳಿಸಿರುತ್ತಾರೆ.

Related posts

ಉಜಿರೆ: ಶ್ರೀ ಧ.ಮಂ. ಶಿಕ್ಷಕರ ತರಬೇತಿ ಸಂಸ್ಥೆಯಲ್ಲಿ (ಡಿ.ಇಎಲ್.ಇಡಿ) ಸಾಂಪ್ರದಾಯಿಕ ದಿನಾಚರಣೆ

Suddi Udaya

ಧರ್ಮಸ್ಥಳಕ್ಕೆ ಮದುವೆಗೆ ಹೋಗುತ್ತಿದ್ದ ಖಾಸಗಿ ಬಸ್ ಹಾಗೂ ಕಂಟೈನರ್ ನಡುವೆ ಅಪಘಾತ: 20ಕ್ಕೂ ಹೆಚ್ಚು ಮಂದಿ ಪ್ರಯಾಣಿಕರಿಗೆ ಗಾಯ

Suddi Udaya

ಕರಾಯ ತ್ರಿವರ್ಣ ಸಂಗಮ ಆಟೋ ಚಾಲಕ ಮಾಲಕ ಸಂಘದ ಸಮಿತಿ ರಚನೆ: ಅಧ್ಯಕ್ಷರಾಗಿ ವೆಂಕಟೇಶ್ ಪೂಜಾರಿ ಅವಿರೋಧ ಆಯ್ಕೆ

Suddi Udaya

ಕಡಿದು ಬಿದ್ದ ವಿದ್ಯುತ್ ತಂತಿ, ಬೈಕ್ ಸವಾರರು ಪಾರು

Suddi Udaya

ಲೋಕಸಭಾ ಚುನಾವಣೆ ಹಿನ್ನೆಲೆ: ಸಿಯೋನ್ ಆಶ್ರಮ ರಜತಮಹೋತ್ಸವ ಹಾಗೂ ಕರ್ನಾಟಕ ಸುವರ್ಣ ಸಂಭ್ರಮ ಕಾರ್ಯಕ್ರಮ ಮುಂದೂಡಿಕೆ

Suddi Udaya

ಕುವೆಟ್ಟು ಸ. ಉ. ಹಿ. ಪ್ರಾ. ಶಾಲೆಯಲ್ಲಿ ಮೆಟ್ರಿಕ್ ಮೇಳ

Suddi Udaya
error: Content is protected !!