
ಕುವೆಟ್ಟು: ಇತ್ತೀಚಿನ ದಿನಗಳಲ್ಲಿ ಹೃದಯಾಘಾತ ಹೆಚ್ಚಾಗುತ್ತಿದ್ದು ಇದನ್ನು ಪತ್ತೆ ಹಚ್ಚುವ ಇ ಸಿ ಜಿ ಯಂತ್ರವನ್ನು ಜು18 ರoದು ಮದ್ದಡ್ಕ ಅಫಿಯಾ ಕ್ಲಿನಿಕ್ ನ ವೈದ್ಯರಾದ ಡಾ: ನಿಜಾಮ್ ರವರಿಗೆ ಪ್ರದೀಪ್ ನಾಯಕ್ ಬಲ್ಕತ್ಯಾರು ಇವರು ನೀಡಿದರು.
ಹೃದಯಕ್ಕೆ ಸoಬoದಿಸಿದ ತಪಾಸಣೆ ತಕ್ಷಣ ಸ್ಥಳೀಯ ಆಸ್ಪತ್ರೆಗೆ ಹೋಗಿ ತಪಾಸಣೆ ಮಾಡಿ ಕೊoಡು ಹೆಚ್ಚಿನ ಚಿಕಿತ್ಸೆಗಾಗಿ ದೊಡ್ಡ ಅಸ್ಪತ್ರೆಗೆ ಹೋಗುಲು ಅನುಕೂಲವಾಗಬಹುದು ಈ ನಿಟ್ಟಿನಲ್ಲಿ ಹಳ್ಳಿ ಪ್ರದೇಶಗಳಲ್ಲಿ ಇoತಹ ವ್ಯವಸ್ಥೆ ಅಗತ್ಯವಾಗಿದೆ ಎಂದು ಸ್ಥಳೀಯರು ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ರೋಗಿಯ ಇ ಸಿ ಜಿ ಯ ರಿಪೋರ್ಟ್ (CAD)ಕಾರ್ಡಿಯಾಲಾಜಿ ಅಟ್ ಡೊರು ಸ್ಟೆಪ್(ರಿ)ಇದರ ಸ್ಥಾಪಕರು ಮಂಗಳೂರಿನ ಪ್ರಖ್ಯಾತ ಹೃದ್ರೋಗ ತಜ್ಞ ಡಾ| ಪದ್ಮನಾಭ ಕಾಮತ್ ರವರು ರಿಪೋರ್ಟ್ ನೋಡಿ ತಕ್ಷಣ ರೋಗಿಯ ಮುಂದಿನ ಚಿಕಿತ್ಸೆಗೆ ನೀಡಲು ಅನುಕೂಲವಾಗಲಿದೆ ಡಾ| ನಿಜಾಮ್ ಮಾತನಾಡಿ ಯಾವ ಸಮಯದಲ್ಲು ನನ್ನನ್ನು ತುರ್ತು ತಪಾಸಣೆಗೆ ಬೇಟಿಯಾಗಬಹುದು ಎoದು ಹೇಳಿದರು.
ಈ ಸಂದರ್ಭದಲ್ಲಿ ಸ್ಥಳೀಯ ಪ್ರಮುಖರಾದ ಚoದ್ರಹಾಸ್ ಕೇದೆ. ಪ್ರಭಾಕರ ಶೆಟ್ಟಿ ಉಪ್ಪಡ್ಕ. ಲಕ್ಷ್ಮೀಕಾಂತ್ ಮೂಡೈಲು. ಅಬ್ಬೊನ್ ಮದ್ದಡ್ಕ. ರಾಜ್ ಪ್ರಕಾಶ್ ಪಡ್ಡೈಲು. ಸಿರಾಜ್ ಚಿಲಿoಬಿ. ವಿಜಯ ಸಾಲ್ಯಾನ್. ರೋಶನ್ ಪಣಕಜೆ ಮತ್ತಿತರರು ಉಪಸ್ಥಿತರಿದ್ದರು. (ವರದಿ ಮನು ಮದ್ದಡ್ಕ )











