ಕೊಕ್ಕಡ: ಶ್ರೀ ಸೌತಡ್ಕ ಮಹಾಗಣಪತಿ ಕ್ಷೇತ್ರಕ್ಕೆ ಧಾರ್ಮಿಕ ಮುಖಂಡ ಕಿರಣ್ ಚಂದ್ರ ಪುಷ್ಪಗಿರಿ ಜು.19ರಂದು ಭೇಟಿ ನೀಡಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.

ಈ ವೇಳೆ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಶಬರಾಯ ಶಾಲು ಹೊದಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಸಮಿತಿ ಸದಸ್ಯರಾದ ಗಣೇಶ ಕಾಶಿ, ಪ್ರಶಾಂತ್ ಮಚ್ಚಿನ, ವಿಶ್ವನಾಥ ಕೊಲ್ಲಾಜೆ ಹಾಗೂ ತುಕ್ರಪ್ಪ ಶೆಟ್ಟಿ ನೂಜೆ ಉಪಸ್ಥಿತರಿದ್ದರು.











