ಬೆಳ್ತಂಗಡಿ: ದೇಶದ ಸಂಪತ್ತು ಮಾನವ ಸಂಪನ್ಮೂಲ, ಮನುಷ್ಯರನ್ನು ರೂಪಿಸುವಲ್ಲಿ ಶಾಲೆಯ ಶಿಕ್ಷಕರ ಪಾತ್ರ ಅಪಾರವಾದುದು.ಬೆಳ್ತಂಗಡಿಯಲ್ಲಿ ಯಾವ ಶಾಲೆಗೆ ಮಕ್ಕಳನ್ನು ಸೇರಿಸಬೇಕು ಎನ್ನುವಾಗ ಪ್ರಥಮ ಹೆಸರು ಬರುವುದು ಸೈಂಟ್ ಮೇರಿಸ್. ನೈತಿಕ ಶಿಕ್ಷಣದೊಂದಿಗೆ ಮೌಲ್ಯಧಾರಿತ ಶಿಕ್ಷಣ ಇಲ್ಲಿ ಸಿಗುತ್ತಿದೆ ಎಂದು ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಬಿಷಪ್ ಲಾರೆನ್ಸ್ ಮುಕ್ಕುಯಿ ಹೇಳಿದರು.

ಅವರು ಜು. 19 ರಂದು ಬೆಳ್ತಂಗಡಿ ಲಾಯಿಲ ಸೈಂಟ್ ಮೇರಿಸ್ ಶಾಲಾ ಬೆಳ್ಳಿಹಬ್ಬ ಸಂಭ್ರಮಕ್ಕೆ ಚಾಲನೆ ನೀಡಿ ಲೋಗೋ ಬಿಡುಗಡೆಗೊಳಿಸಿ ಮಾತನಾಡಿದರು.

ವಿಧಾನ ಪರಿಷತ್ ಶಾಸಕ ಕೆ.ಪ್ರತಾಪ್ ಸಿಂಹ ನಾಯಕ್ ಮಾತನಾಡಿ ಕೇವಲ 18 ವಿದ್ಯಾರ್ಥಿಗಳಿಂದ ಪ್ರಾರಂಭವಾದ ಸಂಸ್ಥೆ ಇಂದು ಸಾವಿರಾರು ಮಕ್ಕಳಿಗೆ ಬೆಳಕಿನ ದಾರಿ ತೋರಿಸುವ ಸಂಸ್ಥೆಯಾಗಿ ಬೆಳೆದಿದೆ .ಇಪ್ಪತ್ತೈದು ವರ್ಷಗಳ ತಪಸ್ಸು,ಸಾಧನೆ, ಅತ್ಯಂತ ಕಷ್ಟಕರವಾಗಿದೆ. ಮುಂದಿನ ಇಪ್ಪತೈದು ವರ್ಷ ನಾನು ಯಾವ ಯೋಜನೆಯೊಂದಿಗೆ ಸಾಗಬೇಕು ಎಂಬುದು ಕಾಣಬೇಕು.ಇಲ್ಲಿನ ಮಕ್ಕಳು ರಾಜ್ಯ ಮಟ್ಟದಲ್ಲಿ ಗುರುತಿಸುವಂತೆ ಮಾಡಿದ ಈ ಸಂಸ್ಥೆಯ ಪರಿಶ್ರಮ ಮೆಚ್ಚುವಂತದ್ದು ಎಂದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್ ಮಾತನಾಡಿ ಗ್ರಾಮೀಣ ಪ್ರದೇಶದಲ್ಲಿರುವ ಸೈಂಟ್ ಮೇರಿಸ್ ಸಂಸ್ಥೆಯಿಂದ ಉತ್ತಮ ಶಿಕ್ಷಣ ಸಿಗುತ್ತಿದೆ. ಕನಸು ಇದ್ದಾಗ ನಮ್ಮ ಗುರಿ ಮುಟ್ಟಲು ಸಾದ್ಯವಿದೆ. ಇಚ್ಚಾಶಕ್ತಿ ಮತ್ತು ಬದ್ದತೆಯಿದ್ದಾಗ ಸಾಧನೆ ಮಾಡಲು ಸಾಧ್ಯವಿದೆ. ಕಲಿತ ಶಾಲೆ ಮತ್ತು ಗುರುಗಳನ್ನು ಮರೆಯಬಾರದು. ಬೆಳ್ತಂಗಡಿಯು ಭೂಮಿಯ ಅದ್ಬುತ ಪ್ರದೇಶ ಎಂದರು.

ವೇದಿಕೆಯಲ್ಲಿ ಪೂರ್ವ ಮುಖ್ಯೋಪಾಧ್ಯಾಯಿನಿ ಸಿ। ಜಿನ್ನಿ ಸೆಬಾಸ್ಟಿಯನ್, ಲಾಯಿಲ ಗ್ರಾ.ಪಂ. ಅಧ್ಯಕ್ಷೆ ಜಯಂತಿ ಎಂ.ಕೆ., ಪಿ.ಟಿ.ಎ. ಅಧ್ಯಕ್ಷ ರೆಜಿ ಜಾರ್ಜ್ ವಿ.ವಿ., ಉಪಾಧ್ಯಕ್ಷೆ ಸುಮಿತಾ ಫರ್ನಾಂಡಿಸ್, ಹಳೆಯ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಶೋಧನ್, ಕಾರ್ಯದರ್ಶಿ ವೀಣಾ, ಸಂಚಾಲಕಿ ರೆ.ಸಿ.ಎಲ್ಸಿ ಪ್ಯಾಲೆಟ್ ,ಶಾಲಾ ಮುಖ್ಯೋಪಾಧ್ಯಾಯಿನಿ ರೆ.ಸಿ.ಪ್ರೀತಿ ಜಾರ್ಜ್, ವಿದ್ಯಾರ್ಥಿ ನಾಯಕಿ ರಾಚೆಲ್ ಲಾಡ್ಲಿ ಮೋನಿಸ್, ಶಾಲಾ ಸಿಬ್ಬಂದಿಗಳು ಮತ್ತು ಪಿ.ಟಿ.ಎ ಸದಸ್ಯರು, ವಿದ್ಯಾರ್ಥಿಗಳು, ಪೋಷಕರು ಉಪಸ್ಥಿತರಿದ್ದರು.
ರೆ.ಸಿ. ಜಿನ್ಸಿ ಸೆಬಾಸ್ಟಿಯನ್ ಶಾಲಾ ಜಾಲತಾಣ ಬಿಡುಗಡೆಗೊಳಿಸಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಸಿ.ಪ್ರೀತಿ ಜಾರ್ಜ್ ಸ್ವಾಗತಿಸಿದರು. ವರ್ಣನ್ ಮೆಂಡೋನ್ಸ ಮತ್ತು ಶ್ರೀಮತಿ ಅಶ್ವಿನಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕರ ಸಂಘದ ಕಾರ್ಯದರ್ಶಿ ವೀಣಾ ವಂದಿಸಿದರು.











