September 6, 2026
ಗ್ರಾಮಾಂತರ ಸುದ್ದಿ

ಪ್ರೌ.ಶಾಲೆ ಗೇರುಕಟ್ಟೆಯಲ್ಲಿ 2024-25ನೇ ಸಾಲಿನ SSLC ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳನ್ನು ಸನ್ಮಾನ. ಅಲ್ಲದೆ ಮಾದಕವಸ್ತು ದುರುಪಯೋಗ ತಡೆಗಟ್ಟುವಿಕೆ ಮಾಹಿತಿ ಕಾರ್ಯಗಾರ

ಗೇರುಕಟ್ಟೆ:ಜು: 19ರಂದು ಸ.ಪ್ರೌ.ಶಾಲೆ ಗೇರುಕಟ್ಟೆಯಲ್ಲಿ 2024-25ನೇ ಸಾಲಿನ SSLC ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು

. ಅಲ್ಲದೆ ಮಾದಕವಸ್ತು ದುರುಪಯೋಗ ತಡೆಗಟ್ಟುವಿಕೆ ಬಗ್ಗೆ ಆರಕ್ಷಕ ಠಾಣಾಧಿಕಾರಿ(ASI) ಗಳಾದ ಕುಶಾಲಪ್ಪ ಎಂ. ಇವರಿಂದ ಮಾಹಿತಿ ಕಾರ್ಯಾಗಾರ ನಡೆಯಿತು. ಕುಶಾಲಪ್ಪ ಇವರು ಮಾದಕ ವಸ್ತು ಸೇವನೆಯಿಂದ ಆಗುವ ದುಷ್ಪರಿಣಾಮಗಳು, ಇವುಗಳಿಂದ ದೂರವಿರಲು ಮಾರ್ಗೋಪಾಯಗಳು ಹಾಗೂ ಸ್ವಸ್ಥ ಸಮಾಜದ ನಿರ್ಮಾಣದಲ್ಲಿ ವಿದ್ಯಾರ್ಥಿಗಳು ಕೈಗೊಳ್ಳಬಹುದಾದ ಕಾರ್ಯಗಳ ಬಗ್ಗೆ ಮಾಹಿತಿ ನೀಡಿದರು. ಮುಖ್ಯ ಶಿಕ್ಷಕರಾದ ಈಶ್ವರಿ ಕೆ. ಇವರು ಅಧ್ಯಕ್ಷತೆ ವಹಿಸಿ, ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ 2025-26ನೇ ಶೈಕ್ಷಣಿಕ ವರ್ಷದ ಪಠ್ಯಕ್ರಮ, ಪರೀಕ್ಷಾ ಮಾಹಿತಿ ಹಾಗೂ ಮಾದಕ ವಸ್ತು ಸೇವನೆ ದುಷ್ಪರಿಣಾಮಗಳ ಬಗ್ಗೆ ಮಾಹಿತಿ ನೀಡಿದರು. ತರಗತಿ ಶಿಕ್ಷಕರಾದ ಜ್ಯೋತಿ ಇವರು 10ನೇ ತರಗತಿ ವಿದ್ಯಾರ್ಥಿಗಳಿಗೆ ವಾರ್ಷಿಕ ಕ್ರಿಯಾಯೋಜನೆ, ಅಧ್ಯಯನ ಮಾಡುವ ರೀತಿಯ ಬಗ್ಗೆ ತಿಳಿಸಿದರು. ಶ್ರೀಮತಿ ಮಮತಾ ವಿದ್ಯಾರ್ಥಿಗಳ ‌ಸನ್ಮಾನ ಕಾರ್ಯಕ್ರಮ ನೆರವೇರಿತು. SDMC ಉಪಾಧ್ಯಕ್ಷರಾದ ಗೋಪಾಲಗೌಡ, ಸದಸ್ಯರಾದ ಜಯಂತಿ ಹಾಗೂ ಪ್ರೇಮ ಕಾರ್ಯಕ್ರಮ ನಡೆಸಿಕೊಟ್ಟರು . ದಿನೇಶ್ ಕಾರ್ಯಕ್ರಮನಿರೂಪಿಸಿ. ರಮ್ಯಾ ಸ್ವಾಗತಿಸಿದರು.ಶ್ರೀ ಕೆಂಚ ವೀರಪ್ಪ ಧನ್ಯವಾದವಿತ್ತರು. . ಶಿಕ್ಷಕರಾದ ಅಜಿತಕುಮಾರ್ ಶೈಲಜ, ಅಭಿಷೇಕ್, ಕಛೇರಿ ಸಹಾಯಕರಾದ ಶಿವಶಂಕರ್ ಕಾರ್ಯಕ್ರಮಕ್ಕೆ ಸಹಕರಿಸಿದರು.

Related posts

ಬೆಳ್ತಂಗಡಿ: ಶ್ರೀ ಧ.ಮಂ. ಆಂ.ಮಾ. ಶಾಲೆಯ ವಿದ್ಯಾರ್ಥಿಗಳು ರೀದಮಿಕ್ ಯೋಗಾಸನದಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆ

Suddi Udaya

ರೋಟರಿ ಕ್ಲಬ್‌ ಬೆಳ್ತಂಗಡಿ ವತಿಯಿಂದ ಡಾ.ಡಿ.ವೀರೇಂದ್ರ ಹೆಗ್ಗಡೆಯವರಿಗೆ ಗೌರವಾರ್ಪಣೆ

Suddi Udaya

ಅ.13-19: ಕನ್ಯಾಡಿ | ಸ.ಉ.ಹಿ.ಪ್ರಾ. ಶಾಲೆಯಲ್ಲಿ ವಾಣಿ ಪ.ಪೂ. ಕಾಲೇಜು ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರ

Suddi Udaya

ವಶಕ್ಕೆ ಪಡೆಯಲಾಗಿದ್ದ ಮಹೇಶ್ ಶೆಟ್ಟಿ ತಿಮರೋಡಿ ಬಂಧನ

Suddi Udaya

ಕಸ್ತೂರಿ ರಂಗನ್ ವರದಿ ವಿರುದ್ಧ ಗುಂಡ್ಯದಲ್ಲಿ ಬೃಹತ್ ಪ್ರತಿಭಟನಾ ಸಭೆ; ಸಾವಿರಾರು ಮಂದಿ ಭಾಗಿ

Suddi Udaya

ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಬಂದಾರು ಪುತ್ತಿಲ ನಿವಾಸಿ ಸುನಂದಾರಿಗೆ ಸ್ಪಂದನಾ ಸೇವಾ ಸಂಘದ ಸೇವಾ ಯೋಜನೆಯಿಂದ ಧನಸಹಾಯ ಹಸ್ತಾಂತರ

Suddi Udaya
error: Content is protected !!