
ಬೆಳ್ತಂಗಡಿ: ಕೊಕ್ಕಡ ಕಾಡಾನೆಗಳ ಹಾವಳಿಯಿಂದಾಗಿ ದುಬಾರೆಯ ವಿಶೇಷ ತಂಡ ಆನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆಯಲ್ಲಿ ತೊಡಗಿದೆ. ಆದರೆ, ಪೆರಿಯಶಾಂತಿ ಬಳಿ ಕಾಡಾನೆಗಳು ಮತ್ತೆ ಮತ್ತೆ ಬೀದಿಬದಿ ಅಂಗಡಿಗಳತ್ತ ಬರುತ್ತಿವೆ. ಅಲ್ಲಿ ಹಲಸಿನ ಹಣ್ಣು ಮಾರಾಟ ಮಾಡುತ್ತಿದ್ದು, ಅದರ ವಾಸನೆಗೆ ಆನೆಗಳು ಪೆರಿಯಶಾಂತಿಯತ್ತ ಬರುತ್ತಿರುವುದರಿಂದ ಆತಂಕ ಮನೆ ಮಾಡಿರುವ ಹಿನ್ನಲೆಯಲ್ಲಿ ಬೆಳಗ್ಗಿನಿಂದಲೇ ಬೀದಿ ಬದಿಯ ಅಂಗಡಿಗಳ ತೆರವು ಕಾರ್ಯ ನಡೆಯಿತು.

ಅರಣ್ಯ ಇಲಾಖೆಯ ಅಧಿಕಾರಿಗಳ ನೇತೃತ್ವದಲ್ಲಿ ಪೆರಿಯಶಾಂತಿಯಿಂದ ಕುದ್ರಾಯ ತನಕದ ರಾಷ್ಟ್ರೀಯ ಹೆದ್ದಾರಿಯ ಬೀದಿಬದಿಯ ಅಂಗಡಿಗಳನ್ನು ಅಧಿಕಾರಿಗಳು ತೆರವುಗೊಳಿಸಿದರು.











