September 6, 2026
ಗ್ರಾಮಾಂತರ ಸುದ್ದಿ

ಬೆಳ್ತಂಗಡಿ ಬಿಜೆಪಿ ಮಂಡಲ ಹಾಗೂ ಮಹಿಳಾ ಮೋರ್ಚಾದ ಕಾರ್ಯಗಾರದ ಜೊತೆಯಲ್ಲಿ ಆಟಿಡೊಂಜಿ ದಿನ ಹಾಗೂ ಪೋಷನ್ ಪಕ್ವಾಡ್ ಕಾರ್ಯಕ್ರಮ,

ಬೆಳ್ತಂಗಡಿ: ಜು 21 ಬೆಳ್ತಂಗಡಿ ಬಿಜೆಪಿ ಮಂಡಲ ಹಾಗೂ ಮಹಿಳಾ ಮೋರ್ಚಾದ ಕಾರ್ಯಗಾರದ ಜೊತೆಯಲ್ಲಿ ಆಟಿಡೊಂಜಿ ದಿನ ಹಾಗೂ ಪೋಷನ್ ಪಕ್ವಾಡ್ ಕಾರ್ಯಕ್ರಮ, ಪಕ್ಷದ ಕಚೇರಿ ಸಹಾಯಕಿಯಾಗಿ ಕೆಲಸ ನಿರ್ವಹಿಸುತ್ತಿರುವ ಗರ್ಭಿಣಿಯಾಗಿರುವ ಶ್ರೀಮತಿ ಕವಿತಾ ಇವರಿಗೆ ಫಲಪುಷ್ಪ ಸೀರೆ ನೀಡಲಾಯಿತು

.ಈ ಕಾರ್ಯಕ್ರಮದಲ್ಲಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷರಾದ ಡಾ.ಮಂಜುಳಾ ರಾವ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಮತಿ ಲಕಿತ ಶೆಟ್ಟಿ ಹಾಗೂ ಸಂಧ್ಯಾ ವೆಂಕಟೇಶ್, ಬೆಳ್ತಂಗಡಿ ಮಂಡಲ ಮಹಿಳಾ ಮೋರ್ಚಾ ಪ್ರಭಾರಿಯಾಗಿರುವ ಶ್ರೀಮತಿ ಬಬಿತಾ ಹಾಗೂ ಬೆಳ್ತoಗಡಿ ಮಂಡಲ ಮಹಿಳಾ ಮೋರ್ಚಾ ಅಧ್ಯಕ್ಷರಾದ ಶ್ರೀಮತಿ ವಿದ್ಯಾ ಶ್ರೀನಿವಾಸ್ ಗೌಡ, ಜಿಲ್ಲಾ ಕಾರ್ಯದರ್ಶಿಯಾದ ಶ್ರೀಮತಿ ವಸಂತಿ ಮಚ್ಚಿನ ಹಾಗೂ ಜಿಲ್ಲಾ ಮಹಿಳಾ ಮೋರ್ಚ ಕಾರ್ಯದರ್ಶಿಯಾಗಿರುವ ಶ್ರೀಮತಿ ಅಮಿತಾ ಕುಶಾಲಪ್ಪ ಗೌಡ ಹಾಗೂ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಮತಿ ಪೂರ್ಣಿಮಾ ಹಾಗೂ ಶ್ರೀಮತಿ ತುಳಸಿ ಹಾಗೂ ಮಹಿಳಾಮೋರ್ಚಾ ಪದಾಧಿಕಾರಿಗಳು ಹಾಗೂ ಸದಸ್ಯರುಗಳು ಹಾಗೂ ಪಂಚಾಯತ್ ಸದಸ್ಯರುಗಳು ಹಾಜರಿದ್ದರು. ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷರು ಮಹಿಳಾ ಮೋರ್ಚಾ ವನ್ನು ಯಾವ ರೀತಿ ನಡೆಸಿಕೊಂಡು ಹೋಗಬೇಕು ಹಾಗೂ ಹಾಗೂ ಮಹಿಳಾ ಮೋರ್ಚಾದ ಎಲ್ಲಾ ಸದಸ್ಯರುಗಳು ಪದಾಧಿಕಾರಿಗಳು ಮನ್ ಕಿ ಬಾತ್ ಅನ್ನು ಕೇಳಿ ಹಾಗೂ ಸರಳ್ ಆಪ್ ಗೆ ಅಪ್ಲೋಡ್ ಮಾಡಬೇಕು ಅಮ್ಮನ ಹೆಸರಿನಲ್ಲಿ ಪ್ರತಿಯೊಬ್ಬರೂ ಗಿಡ ನೆಟ್ಟು ಸರಳಾಪುಗೆ ಅಪ್ಲೋಡ್ ಮಾಡಬೇಕು ಬೂತ್ ಮಟ್ಟದಿಂದ ಮಹಿಳೆಯರ ಸಂಪರ್ಕ ಮಾಡಿ ಪಕ್ಷದ ಕಾರ್ಯಕರ್ತರಲ್ಲಿ ತೊಡಗುವಂತೆ ಮಾಡಬೇಕು ಎಂದು ಹೇಳಿದರು. ಮಹಿಳಾ ಮೋರ್ಚಾದ ಅಧ್ಯಕ್ಷೆ ವಿದ್ಯಾ ಶ್ರೀನಿವಾಸ್ ರವರು ಮಾತನಾಡಿ ಮುಂದೆ ಮಹಿಳಾ ಮಹಿಳಾ ಮೋರ್ಚಾದಿಂದ ವಿಶೇಷವಾಗಿ ವಿಭಿನ್ನ ಕಾರ್ಯಕ್ರಮಗಳನ್ನು ಮಾಡುವ ಗುರಿಯನ್ನು ಇಟ್ಟುಕೊಂಡಿದ್ದೇವೆ ಎಲ್ಲರ ಸಹಕಾರವು ಬೇಕು ಹಾಗೂ ಎಲ್ಲಾ ಪದಾಧಿಕಾರಿಗಳು ಸದಸ್ಯರು ನಮ್ಮೊಂದಿಗೆ ಕೈಜೋಡಿಸಬೆಕೆಂದು ಹೇಳಿದರು.ಮಹಿಳಾ ಮೋರ್ಚಾದ ಪ್ರತಿಯೊಬ್ಬರು ಆಷಾಢ ಮಾಸದಲ್ಲಿ ಮಾಡುವ 26 ಬಗೆಯ ಖಾದ್ಯಗಳನ್ನು ತಮ್ಮ ಕೈಯಾರೆ ಮಾಡಿ ತಂದು ಎಲ್ಲರಿಗೂ ಉಣ ಬಡಿಸಿದರು.ಶ್ರೀಮತಿ ತುಳಸಿ ಉಮೇಶ್ ಕಾರ್ಯಕ್ರಮ ನಿರೂಪಿಸಿ, ಶ್ರೀಮತಿ ಪೂರ್ಣಿಮಾ ಸ್ವಾಗತಿಸಿ, ಶ್ರೀಮತಿ ಶಶಿಕಲಾ ಧನ್ಯವಾದವಿತ್ತರು.

Related posts

ಜೂ. 21: ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಉಚಿತ ಸ್ತ್ರೀರೋಗ ತಪಾಸಣಾ ಶಿಬಿರ

Suddi Udaya

ಕೊಕ್ಕಡ: ಕಥೋಲಿಕ್ ಸಭಾ ಮಂಗ್ಳುರ್ ಪ್ರದೇಶ್ ಘಟಕದ ಪದಗ್ರಹಣ ಹಾಗೂ ವಾರ್ಷಿಕ ಸಮ್ಮಿಲನ ಕಾರ್ಯಕ್ರಮ

Suddi Udaya

ಉಜಿರೆ ಎಸ್. ಡಿ .ಎಮ್ ಪದವಿ ಕಾಲೇಜಿನಲ್ಲಿ ಪ್ರವೇಶ ಪ್ರಕ್ರಿಯೆ ಆರಂಭ

Suddi Udaya

ಎಸ್ ಡಿ ಎಂ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಸಂಚಾರಿ ನಿಯಮ ಪಾಲನೆ ಮತ್ತು ಕಾನೂನು ಮಾಹಿತಿ ಕಾರ್ಯಕ್ರಮ

Suddi Udaya

ಗೇರುಕಟ್ಟೆ: ಶಾಲಾ ಮಕ್ಕಳೊಂದಿಗೆ ಕರ್ನಾಟಕ ರಾಜ್ಯ ಸಾರಿಗೆ ಇಲಾಖೆ ಬಸ್ ಚಾಲಕರ, ನಿರ್ವಾಹಕರಿಂದ ಚೆಲ್ಲಾಟ

Suddi Udaya

ವಲಯ ಮಟ್ಟದ ಕ್ರೀಡಾಕೂಟ: ಎಲ್.ಸಿ.ಆರ್ ವಿದ್ಯಾ ಸಂಸ್ಥೆಗೆ ಪ್ರಶಸ್ತಿ

Suddi Udaya
error: Content is protected !!