Uncategorized

ಉಜಿರೆ ಎಸ್.ಡಿ.ಎಂ. ಬಿ.ಎಡ್. ಮತ್ತು ಡಿ.ಎಡ್ ಕಾಲೇಜಿನಲ್ಲಿ ‘ಆಟಿಡೊಂಜಿ ದಿನ’

ಉಜಿರೆ: ತುಳುನಾಡಿನಲ್ಲಿ ಬಾಳಿ ಬದುಕಿದ ಹಿರಿಯರು ಪ್ರಕೃತಿಯಲ್ಲಿ ದೊರೆಯುವ ಮರಗಿಡ, ಬಳ್ಳಿ, ಗೆಡ್ಡೆ ಮುಂತಾದವುಗಳನ್ನು ಆಹಾರವಾಗಿ, ಔಷಧಿಯಾಗಿ ಬಳಸಿಕೊಂಡು ಆಟಿ ತಿಂಗಳ ಕಷ್ಟದ ದಿನಗಳಲ್ಲಿ ರೋಗರುಜಿನಗಳು ಬಾಧಿಸದಂತೆ ಬದುಕಿದ್ದರು. ಇಲ್ಲಿನ ಎಲ್ಲಾ ಹಬ್ಬಗಳಿಗೂ ಕೃಷಿಯು ಮೂಲವಾಗಿದ್ದು ಅದಕ್ಕೆ ಸಂಬಂಧಿಸಿದಂತೆ ಹಲವಾರು ಆಚರಣೆಗಳು ಬೆಳೆದು ಬಂದಿದೆ. ಆಟಿ ತಿಂಗಳಿನಲ್ಲಿ ಯಾವುದೇ ಧಾರ್ಮಿಕ ಕಾರ್ಯಕ್ರಮಗಳು ನಡೆಯದೇ ಪ್ರಕೃತಿಯನ್ನು ಆರಾಧಿಸುವ ವಿಶಿಷ್ಟ ಪದ್ಧತಿಯು ಕಂಡು ಬರುತ್ತದೆ ಎಂದು ಶ್ರೀ ಧ. ಮಂ. ಕಾಲೇಜಿನ ಕನ್ನಡ ಸಹ ಪ್ರಾಧ್ಯಾಪಕರಾದ ಡಾ. ದಿವಾಕರ ಕೊಕ್ಕಡ ಹೇಳಿದರು.

ಅವರು ಶ್ರೀ ಧ. ಮಂ. ಬಿ.ಇಡಿ. ಹಾಗೂ ಡಿ.ಇಡಿ. ಕಾಲೇಜಿನಲ್ಲಿ ಹಮ್ಮಿಕೊಂಡ “ಆಟಿಡೊಂಜಿ ದಿನ” ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಮತ್ತೋರ್ವ ಅತಿಥಿಗಳಾದ ಯಶವಂತ್, ರಂಗ ನಿರ್ದೇಶಕರು, ಎಸ್.ಡಿ.ಎಂ. ಕಾಲೇಜು, ಉಜಿರೆ ಇವರು ಮಾತನಾಡಿ ಆಟಿ ತಿಂಗಳ ಆಚರಣೆಗಳ ಕುರಿತು ಮಾಹಿತಿ ನೀಡಿ ಆಟಿ ಕಳಂಜನ ‘ಪಾಡ್ದಾನ’ ಗಳ ಹಿಂದಿರುವ ಸಂದೇಶವನ್ನು ತಿಳಿಸಿದರು.


ಅಧ್ಯಕ್ಷೀಯ ಮಾತುಗಳನ್ನಾಡಿದ ಬಿ.ಎಡ್. ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ತಿರುಮಲೇಶ್ ರಾವ್ ಎನ್ ಕೆ ಅವರು ತುಳುನಾಡಿನ ಜನರು ಪ್ರಕೃತಿಯನ್ನು ಆರಾಧಿಸಿಕೊಂಡು ಬಂದಿದ್ದು, ಇಲ್ಲಿನ ಸಂಸ್ಕೃತಿಯು ಶ್ರೇಷ್ಠತೆಯನ್ನು ಹೊಂದಿದೆ. ಆದುದರಿಂದ ಸಂಸ್ಕೃತಿಯ ಕುರಿತು ಗುರುಹಿರಿಯರು ಆಡುವ ಮಾತುಗಳನ್ನು ಇಂದಿನ ಯುವಜನತೆ ಆಲಿಸಿ ಪಾಲಿಸಬೇಕೆಂದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.


ಕಾರ್ಯಕ್ರಮವನ್ನು ಹಿಂಗಾರ ಹೂವನ್ನು ಅರಳಿಸುವ ಮೂಲಕ ವಿನೂತನವಾಗಿ ಉದ್ಘಾಟಿಸಿ, ತುಳುನಾಡಿನ ವಿಶೇಷತೆಯ ಕುರಿತು ನೃತ್ಯ ಹಾಗೂ ವೀಡಿಯೋ ಪ್ರದರ್ಶನ ಮಾಡಲಾಯಿತು. ಪ್ರಥಮ ವರ್ಷದ ಪ್ರಶಿಕ್ಷಣಾರ್ಥಿ ಪ್ರಶ್ವಿತ್ ಆಟಿ ತಿಂಗಳ ವಿಶೇಷತೆಯನ್ನು ಕುರಿತು ಹಲವಾರು ಸ್ಪರ್ಧೆಗಳನ್ನು ಏರ್ಪಡಿಸಿದ್ದರು. ತುಳುನಾಡಿನ ತಿನಿಸುಗಳನ್ನು ಸವಿಯುವುದರೊಂದಿಗೆ ಪಾರಂಪರಿಕ ವಸ್ತುಗಳನ್ನು ಪ್ರದರ್ಶಿಸಲಾಯಿತು. ಕಾರ್ಯಕ್ರಮದಲ್ಲಿ ಬಿ.ಎಡ್. ಹಾಗೂ ಡಿ.ಎಡ್. ಕಾಲೇಜಿನ ಎಲ್ಲಾ ಉಪನ್ಯಾಸಕರು, ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು. ಬಳಿಕ ತುಳುನಾಡಿನ ಸಂಸ್ಕೃತಿಯನ್ನು ಆಧರಿಸಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.


ಪ್ರಶಿಕ್ಷಣಾರ್ಥಿಯಾದ ದಿವ್ಯಾ ಸ್ವಾಗತಿಸಿ, ಪ್ರಜ್ಞಾ ಧನ್ಯವಾದವಿತ್ತು, ರಶ್ಮಿ ಕೆ ಪಿ ಅತಿಥಿ ಪರಿಚಯಿಸಿದರು. ಚೈತನ್ಯ ಮತ್ತು ಪ್ರಭಾವತಿ ಕಾರ್ಯಕ್ರಮವನ್ನು ನಿರೂಪಿಸಿದರು.

Related posts

ಪಾಡ್ದನ,ಸಂಧೀ ಮುಂತಾದ ಅನೇಕ ಜನಪದೀಯ ಸಾಂಸ್ಕೃತಿಕ ಬೇರುಗಳು ಮುಂದಿನ ತಲೆಮಾರಿಗೆ ತಿಳಿಸುವ ನಿಟ್ಟಿನಲ್ಲಿ ಹೆಗ್ಗೋಡಿನ ನೀನಾಸಂ ,ರಂಗಾಯಣದಂತಹ ರಂಗ ಶಾಲೆ ತೆರೆಯುವ ಯೋಚನೆ: ಸಂಪತ್ ಬಿ ಸುವರ್ಣ

Suddi Udaya

ನಾವೂರು : ಕುಂಬಾರ ಸ್ವಜಾತಿ ಬಾಂಧವರ ಜಿಲ್ಲಾ ಮಟ್ಟದ ಬಿಡ್ಡಿಂಗ್ ಕ್ರಿಕೆಟ್ ಪಂದ್ಯಾಟ

Suddi Udaya

ಮೇ 26: ಕಾಯರ್ತಡ್ಕ ನಂದಗೋಕುಲ ಗೋಶಾಲೆಯಲ್ಲಿ ಸಾಮೂಹಿಕ ಗೋಪೂಜೆ, ಗೋನಂದಾರತಿ, ದೀಪೋತ್ಸವ

Suddi Udaya

ಚಿನ್ನಾಭರಣ ಪರೀಕ್ಷಕರನ್ನು ವಜಾ ಮಾಡಿರುವ ಪ್ರಕರಣದ ನಿಗೂಢತೆಯನ್ನು ಬಯಲು ಮಾಡಬೇಕೆಂದು ಅಗ್ರಹಿಸಿ ಕೊಕ್ಕಡ ಕೆನರಾ ಬ್ಯಾಂಕ್ ಮ್ಯಾನೇಜರ್ ಮೂಲಕ ಕೇಂದ್ರ ಕಚೇರಿಗೆ ಮನವಿ

Suddi Udaya

ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಹೊಸ ಅತ್ಯಾಧುನಿಕ ಸಿ-ಆರ್ಮ್ ಯಂತ್ರಕ್ಕೆ ಚಾಲನೆ

Suddi Udaya

ಎಕ್ಸೆಲ್ ಕಾಲೇಜಿನ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ರಿಗೆ ಆಮಂತ್ರಣ ಶಿಕ್ಷಣ ರತ್ನ ಪ್ರಶಸ್ತಿ ಪುರಸ್ಕಾರ

Suddi Udaya
error: Content is protected !!