ಪಿಲ್ಯ : ಗುಡ್ ಫ್ಯೂಚರ್ ಚೈಲ್ಡ್ ಆಂಗ್ಲ ಮಾಧ್ಯಮ ಶಾಲೆಯ 2025-26 ನೇ ಶೈಕ್ಷಣಿಕ ಸಾಲಿನ ಸಭೆಯು ಜು. 21 ರಂದು ನಡೆಯಿತು.
ಶಾಲಾ ಮುಖ್ಯೋಪಾಧ್ಯಾಯ ಪ್ರಭಾಕರ್ ಶೆಟ್ಟಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಈ ಸಂದರ್ಭದಲ್ಲಿ ನೂತನ ಶಿಕ್ಷಕ – ರಕ್ಷಕ ಸಂಘದ ರಚನೆ ಮಾಡಲಾಯಿತು. ಅಧ್ಯಕ್ಷರಾಗಿ ಅಬ್ದುಲ್ ಶುಕುರ್ ಸಾಹೇಬ್ , ಉಪಾಧ್ಯಕ್ಷರಾಗಿ ಧನಕೀರ್ತಿ ಜೈನ್ ಹಾಗೂ ಶ್ರೀಮತಿ ವಿನಯಾ ಆಯ್ಕೆಯಾದರು. ಸದಸ್ಯರುಗಳಾಗಿ ರೆಹಮತ್, ಮೊಹಮ್ಮದ್ ಅಶ್ರಫ್, ಯಶೋಧರ್, ಬಿಂದು, ಯಶೋದ, ಸುರೇಖಾ, ಸಬೀನ ಪರ್ವಿನ್, ಗೀತಾ, ಗಿರೀಶ್, ರಮೀಝಾ ಹಾಗೂ ರಾಜೇಶ್, ಕಾರ್ಯದರ್ಶಿಯಾಗಿ ಶಾಲಾ ಮುಖ್ಯೋಪಾಧ್ಯಾಯ ಪ್ರಭಾಕರ್ ಶೆಟ್ಟಿಯವರು ಆಯ್ಕೆಯಾಗಿದ್ದಾರೆ.
ನೂತನ ಶಿಕ್ಷಕ – ರಕ್ಷಕ ಸಮಿತಿಯ ರಚನೆಯ ಕುರಿತು ಶಾಲಾ ಸಂಚಾಲಕ ನಸೀರ್ ಅಹಮ್ಮದ್ ಖಾನ್ ಅವರು ಶಾಲಾ ಅಭಿವೃದ್ಧಿಯ ಬಗೆಗೆ ಮನದ ಮಾತುಗಳನ್ನಾಡಿದರು. ಪ್ರಾರ್ಥನೆಯನ್ನು ಶ್ರುತನ್ ಜೈನ್, ಅನುಷ್ಕಾ, ಮಹಾನ್, ಅವನೀಶ್ ನೆರವೇರಿಸಿದರು. ಶ್ರೀಮತಿ ಫೈಝಾನ್ ಸ್ವಾಗತಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಶ್ರೀಮತಿ ಸರ್ವಾಣಿಯವರು ನೆರವೇರಿಸಿದರು. ರಕ್ಷಿತಾ ಧನ್ಯವಾದ ಸಮರ್ಪಿಸಿದರು.











