30 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಗುಡ್ ಫ್ಯೂಚರ್ ಚೈಲ್ಡ್ ಆಂಗ್ಲ ಮಾಧ್ಯಮ ಶಾಲಾ ಮಂತ್ರಿ ಮಂಡಲ ರಚನೆ

ಪಿಲ್ಯ: ಗುಡ್ ಫ್ಯೂಚರ್ ಚೈಲ್ಡ್ ಆಂಗ್ಲ ಮಾಧ್ಯಮ ಶಾಲೆಯ ಮಂತ್ರಿಮಂಡಲದ ಉದ್ಘಾಟನಾ ಸಮಾರಂಭವು ಶಾಲಾ ಸಭಾಭವನದಲ್ಲಿ ನೆರವೇರಿತು. ಶಿಕ್ಷಣ ಸಂಸ್ಥೆಯ ಅಧ್ಯಕ್ಷ ನಸೀರ್ ಅಹಮದ್ ಖಾನ್ ಹಾಗೂ ಶಾಲಾ ಮುಖ್ಯ ಶಿಕ್ಷಕ ಪ್ರಭಾಕರ ಶೆಟ್ಟಿಯವರು ಉಪಸ್ಥಿತರಿದ್ದರು. ಆಯ್ಕೆಗೊಂಡ ಎಲ್ಲಾ ಪ್ರತಿನಿಧಿಗಳಿಗೆ ಶಾಲಾ ಮುಖ್ಯೋಪಾಧ್ಯಾಯರು ಪ್ರತಿಜ್ಞಾವಿಧಿಯನ್ನು ಭೋದಿಸಿದರು.

ಶಾಲಾ ವಿದ್ಯಾರ್ಥಿ ನಾಯಕಿಯಾಗಿ ನುಮಾ ಸಾರ, ಉಪನಾಯಕನಾಗಿ ಮೊಹಮ್ಮದ್ ಫಹಾದ್ ಆಯ್ಕೆಯಾದರು. ಸಭಾಧ್ಯಕ್ಷರಾಗಿ ಸಮ್ರಿನ್ ಬಾನು, ಶಿಕ್ಷಣ ಮಂತ್ರಿಯಾಗಿ ಅಮ್ನ , ಶಿಸ್ತು ಮಂತ್ರಿಗಳಾಗಿ ಪವನ್ ಮತ್ತು ಅವನೀಶ್, ಭಾಷಾ ಮಂತ್ರಿಗಳಾಗಿ ಶುದ್ದಿ ಮತ್ತು ಅನುಷ್ಕಾ, ಸಾಂಸ್ಕೃತಿಕ ಮಂತ್ರಿಗಳಾಗಿ ಆಶಿಕಾ, ಮಹಾನ್ ಮತ್ತು ಇಕ್ರ, ಕ್ರೀಡಾ ಮಂತ್ರಿಗಳಾಗಿ ಅಸ್ಮಿಯ, ಹನಾನ್ ಮತ್ತು ಶಾಜೀನ್ ಪ್ರಮಾಣವಚನ ಸ್ವೀಕರಿಸಿದರು. ವಿರೋಧ ಪಕ್ಷದ ನಾಯಕರಾಗಿ ಫಾತಿಮಾ ರಿಫಾ ಮತ್ತು ಅಶ್ವಿತ್, ಸದಸ್ಯರುಗಳಾಗಿ ಮುಫೀದ್, ಕಲೀಲಾ, ಅನಿಕ, ಶಾಹೀನಾ ಹಾಗೂ ತ್ರಿಷಾ ಪ್ರಮಾಣವಚನ ಸ್ವೀಕರಿಸಿದರು.

ಪ್ರಭಾಕರ ಶೆಟ್ಟಿ ವಿದ್ಯಾರ್ಥಿ ಸಂಘದ ಮಹತ್ವವನ್ನು ತಿಳಿಸಿದರು. ಸಹ ಶಿಕ್ಷಕಿ ಶ್ರೀಮತಿ ನಿಶ್ಮಿತಾ ಸ್ವಾಗತಿಸಿ, ನಿರೂಪಿಸಿ ವಂದಿಸಿದರು.

Related posts

ಬೆಳ್ತಂಗಡಿ:ಮುಳಿಯ ಜುವೆಲ್ಸ್ ನಲ್ಲಿ ‘ಮುಳಿಯ ಚಿನ್ನೋತ್ಸವ’ ಸಂಭ್ರಮ: ವಿವಿಧ ಬಗೆಯ ವೆರೈಟಿ ಚಿನ್ನಾಭರಣಗಳಿಗೆ ಮುಳಿಯ ಸಂಸ್ಥೆ ಹೆಸರುವಾಸಿಯಾಗಿದೆ

Suddi Udaya

ಜೂನ್ 7: ರಾಷ್ಟ್ರೀಯ ತುಳು ಗುಡಿಗಾರ ಸಂಘ ದಕ್ಷಿಣ ಕನ್ನಡ-ಉಡುಪಿ ಇವರ ನೇತೃತ್ವದಲ್ಲಿ ಬೃಹತ್ ರಕ್ತದಾನ ಶಿಬಿರ

Suddi Udaya

ಬೆಂಗಳೂರು ಯುವವಾಹಿನಿ ಘಟಕದಿಂದ ಯುವ ವೈಭವ 2025

Suddi Udaya

ಮಲವಂತಿಗೆ ಗ್ರಾ.ಪಂ. ಪ್ರಥಮ ಸುತ್ತಿನ ಗ್ರಾಮಸಭೆ

Suddi Udaya

ಉಜಿರೆಯಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ

Suddi Udaya

ವಾಹನ ಡಿಕ್ಕಿ ಹೊಡೆದು ಅನಾಥವಾಗಿ ರಸ್ತೆಯಲ್ಲಿ ಬಿದ್ದವರನ್ನು ಆಸ್ಪತ್ರೆಗೆ ದಾಖಲಿಸಿದ ಸ್ಥಳೀಯರು

Suddi Udaya
error: Content is protected !!